ಮಂಜಿನ ನಗರಿಯಲ್ಲಿ ಕೊರೆಯುವ ಚಳಿಗೆ ಅರಳಿ ನಿಂತ ಶ್ವೇತ ಸುಂದರಿಯರು! ರಸ್ತೆಯುದ್ದಕ್ಕೂ ಪುಷ್ಪ ಮಂಜರಿ

| Updated By: ಆಯೇಷಾ ಬಾನು

Updated on: Dec 13, 2023 | 2:45 PM

ಕೊಡಗಿನ ಮಡಿಕೇರಿ ಸುತ್ತಮುತ್ತ ಅಪರೂಪದ ದೃಶ್ಯ ವೈಭವ ಕಂಡು ಬಂದಿದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳು ಬಂದಾಗ ಚಳಿಗಾಲ ಶುರುವಾಗುತ್ತದೆ. ಋತುಮಾನ ಬದಲಾಗುತ್ತಲೇ ಇಲ್ಲಿನ ಪರಿಸರವೂ ಬದಲಾಗುತ್ತದೆ.

1 / 8
ಕೊಡಗು ಜಿಲ್ಲೆಯಲ್ಲಿ ಋತುಮಾನ ಬದಲಾವಣೆಗೂ ಅಲ್ಲಿನ ಪ್ರಕೃತಿಗೂ ನೇರ ಸಂಬಂಧವಿದೆ. ಒಂದೊಂದು ಋತುಮಾನದಲ್ಲಿ ಒಂದೊಂದು ಹೊಸ ಬಗೆಯ  ಪ್ರಪಂಚಗಳು ಅಲ್ಲಿ ತೆರೆದುಕೊಳ್ಳುತ್ತವೆ. ಇದೀಗ ಚಳಗಾಲ ಬಂದಿದ್ದು ಕಣ್ಣು ಹಾಯಿಸಿದೆಲ್ಲೆಡೆ ವಿಶಿಷ್ಟ ಹೂಗಳ ರಂಗು ತುಂಬಿ ನೋಡುಗರಿಗೆ ವಿಶೇಷ ಮುದ ನೀಡುತ್ತಿದೆ.

2 / 8
ಹಚ್ಚ ಹಸಿರ  ರಾಶಿ ಮಧ್ಯೆ ಅಲ್ಲಲ್ಲಿ ಗಾಳಿಗೆ ತಲೆದೂಗುತ್ತಾ ನಿಂತಿರೋ ಸುಂದರಿಯರು. ಒಮ್ಮೆಗೆ ನೋಡಿದ್ರೆ ದೇವರೇ ಇಳಿದು ಬಂದು ರಂಗೋಲಿ ಬಿಡಿಸಿದ್ದಾನೇನೋ ಎಂಬಂತೆ  ಭಾಸವಾಗುವ ನಯನ ಮನೋಹರ ಪುಷ್ಪ ರಾಶಿ.

3 / 8
ಕೊಡಗಿನ ಮಡಿಕೇರಿ ಸುತ್ತಮುತ್ತ ಅಪರೂಪದ ದೃಶ್ಯ ವೈಭವ ಕಂಡು ಬಂದಿದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳು ಬಂದಾಗ ಚಳಿಗಾಲ ಶುರುವಾಗುತ್ತದೆ.  ಋತುಮಾನ ಬದಲಾಗುತ್ತಲೇ ಇಲ್ಲಿನ ಪರಿಸರವೂ ಬದಲಾಗುತ್ತದೆ.

ಕೊಡಗಿನ ಮಡಿಕೇರಿ ಸುತ್ತಮುತ್ತ ಅಪರೂಪದ ದೃಶ್ಯ ವೈಭವ ಕಂಡು ಬಂದಿದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳು ಬಂದಾಗ ಚಳಿಗಾಲ ಶುರುವಾಗುತ್ತದೆ. ಋತುಮಾನ ಬದಲಾಗುತ್ತಲೇ ಇಲ್ಲಿನ ಪರಿಸರವೂ ಬದಲಾಗುತ್ತದೆ.

4 / 8
ಕಾಡು ಮೇಡುಗಳಲ್ಲಿ ಹೊಸ ಬಗೆಯ ಆಕರ್ಷಕ ಕಾಡು ಮಲ್ಲಿಗೆ ಹೂವುಗಳು ತಲೆದೂಗಿ ನಸುನಗಲು ಶುರುಮಾಡ್ತವೆ. ಮಂಜು ಮುಸುಕಿದ ವಾತಾವರಣದಲ್ಲಿ ಈ ಹೂವುಗಳ ಅಂದ ಚೆಂದವನ್ನು ಆಸ್ವಾಧಿಸುವುದೇ ಒಂದು ಖುಷಿ.

5 / 8
ಸಾಮಾನ್ಯವಾಗಿ ರಸ್ತೆಬದಿಯಲ್ಲೇ ಈ ಹೂವುಗಳು ಅರಳಿ ನಗುತ್ತಿರುತ್ತವೆ. ಪ್ರಕೃತ ಸೌಂದರ್ಯದ ಹಿನ್ನೆಲೆಯಲ್ಲಿ ಇವುಗಳನ್ನು ಆಸ್ವಾದಿಸುವುದು ಅಂದರೆ ಎಲ್ಲರಿಗೂ ಖುಷಿ. ಹಾಗೆ ನೋಡಿದ್ರೆ ಸ್ಥಳೀಯವಾಗಿ ಈ ಹೂವಿಗೆ ನಿರ್ಧಿಷ್ಟವಾದ ಒಂದು ಹೆಸರೇ ಇಲ್ಲ.

6 / 8
ಇದು ಕ್ರಿಸ್ಮಸ್​ ಸಂದರ್ಭದಲ್ಲಿ ಹೆಚ್ಚು ಅರಳುವುದರಿಂದ ಕ್ರಿಸ್ಮಸ್ ಹೂವು ಅಂತಾನೂ ಕರೆಯುತ್ತಾರೆ. ಮಲ್ಲಿಗೆಯಂತೆ ಕಾಣುವುದರಿಂದ ಇದನ್ನ ಕಾಡು ಮಲ್ಲಿಗೆ ಅಂತಲೂ ಕರೀತ್ತಾರೆ.  ಸಾಮಾನ್ಯವಾಗಿ ಪಶ್ಚಿಮಘಟ್ಟದ ದಟ್ಟಾರಣ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ಈ ಹೂವು ದಟ್ಟವಾಗಿ ಅರಳುತ್ತವೆ.

7 / 8
ದಾರಿ ಹೋಕರಿಗಂತೂ ರಸ್ತೆ ಬದಿಯಲ್ಲಿ ಕಾಣ ಸಿಗುವ ಈ ಹೂವು ಕಣ್ಣಿಗೆ ಹಬ್ಬ ನೀಡುತ್ತದೆ. ವಿಶೇಷವಾಗಿ ಪ್ರವಾಸಿಗರು ಹೂವು ಕಂಡಲೆಲ್ಲಾ ಗಾಡಿ ನಿಲ್ಲಿಸಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಾರೆ.  ಡಿಸೆಂಬರ್ ತಿಂಗಳಿನಲ್ಲಿ ಕೊಡಗಿಗೆ ಪ್ರವಾಸ ಬರುವವರಿಗೆ ಆಹ್ಲಾದಕರ ವಾತಾವರಣ ಸಿಗುತ್ತದೆ.

8 / 8
ಒಂದು ಚುಮು ಚುಮು ಚಳಿ, ಅದರೊಂದಿಗೆ ಮಂಜು ಮುಸುಕಿದ ವಾತಾವರಣ. ಇವರೆಡರೊಂದಿಗೆ ಇದೀಗ ಕಾಡು ಮಲ್ಲಿಗೆ ಹೂವಿನ ರಾಶಿ. ಹಾಗಾಗಿ ಮಡಿಕೇರಿ, ಸಂಪಾಜೆ, ಕುಶಾಲನಗರ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಇನ್ನೊಂದು 15 ದಿನಗಳ ಕಾಲ  ಕಣ್ಣಿಗೆ ಹಬ್ಬವೋ ಹಬ್ಬ.