Shilpa Shetty: ‘ಕೆಡಿ’ ಸಹವಾಸ ಮಾಡಿದ ಶಿಲ್ಪಾ ಶೆಟ್ಟಿ; ಸತ್ಯವತಿ ಅವತಾರದಲ್ಲಿ ಬಳುಕುವ ಬಳ್ಳಿ

|

Updated on: Mar 22, 2023 | 10:30 PM

KD Kannada Movie | Dhruva Sarja: ಕನ್ನಡ ಚಿತ್ರರಂಗಕ್ಕೆ ನಟಿ ಶಿಲ್ಪಾ ಶೆಟ್ಟಿ ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ‘ಕೆಡಿ’ ಚಿತ್ರದಲ್ಲಿನ ಅವರ ಪಾತ್ರದ ಗೆಟಪ್​ ರಿವೀಲ್​ ಆಗಿದೆ.

1 / 5
ನಟಿ ಶಿಲ್ಪಾ ಶೆಟ್ಟಿ ಅವರು ‘ಕೆಡಿ’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ಅವರ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್​ ಮಾಡಲಾಗಿದೆ. ಸತ್ಯವತಿ ಎಂಬ ಪಾತ್ರಕ್ಕೆ ಅವರು ಬಣ್ಣ ಹಚ್ಚುತ್ತಿದ್ದು, ರೆಟ್ರೋ ಶೈಲಿಯಲ್ಲಿ ಪೋಸ್ಟರ್​ ಮೂಡಿಬಂದಿದೆ.

2 / 5
‘ಜೋಗಿ’ ಪ್ರೇಮ್​ ಅವರು ‘ಕೆಡಿ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಧ್ರುವ ಸರ್ಜಾ ಹೀರೋ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾ ಮೇಲೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

3 / 5
‘ಕೆಡಿ’ ಸಿನಿಮಾದಲ್ಲಿ ರವಿಚಂದ್ರನ್​ ಕೂಡ ನಟಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರ ಪಾತ್ರದ ಪೋಸ್ಟರ್​ ರಿಲೀಸ್​ ಮಾಡಲಾಗಿತ್ತು. ಈ ಚಿತ್ರದ ಎಲ್ಲ ಪಾತ್ರಗಳ ಗೆಟಪ್​ ಕೂಡ ಗಮನ ಸೆಳೆಯುವಂತಿವೆ.

4 / 5
ಶಿಲ್ಪಾ ಶೆಟ್ಟಿ ಅವರು ಕನ್ನಡ ಚಿತ್ರರಂಗದ ಜೊತೆ ನಂಟು ಹೊಂದಿದ್ದಾರೆ. ಈ ಮೊದಲು ‘ಪ್ರೀತ್ಸೋದ್​ ತಪ್ಪಾ’, ‘ಒಂದಾಗೋಣ ಬಾ’, ‘ಆಟೋ ಶಂಕರ್’ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ‘ಕೆಡಿ’ ಚಿತ್ರದ ಮೂಲಕ ಕನ್ನಡಕ್ಕೆ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

5 / 5
ಶಿಲ್ಪಾ ಶೆಟ್ಟಿ ಅವರಿಗೆ ಈಗ 47 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಬಳುಕುವ ಬಳ್ಳಿಯಂತೆ ಕಾಣುತ್ತಾರೆ. ಅಷ್ಟರಮಟ್ಟಿಗೆ ಫಿಟ್ನೆಸ್​ ಕಾಪಾಡಿಕೊಂಡಿದ್ದಾರೆ. ಅವರನ್ನು ಮತ್ತೆ ಕನ್ನಡ ಸಿನಿಮಾದಲ್ಲಿ ನೋಡಲು ಫ್ಯಾನ್ಸ್​ ಕಾದಿದ್ದಾರೆ.

Published On - 10:30 pm, Wed, 22 March 23