Shivaji Surathkal 2: ‘ಶಿವಾಜಿ ಸುರತ್ಕಲ್ 2’ ಸಿನಿಮಾ ನೋಡಿ ಮೆಚ್ಚಿಕೊಂಡ ಪೊಲೀಸ್​ ಅಧಿಕಾರಿಗಳು ಮತ್ತು ಗಣ್ಯರು

Updated on: Apr 27, 2023 | 1:30 PM

ಪೊಲೀಸ್​ ಅಧಿಕಾರಿಗಳಾದ ಶಶಿಕುಮಾರ್​, ರೂಪಾ ಮೌದ್ಗಿಲ್ ಮುಂತಾದವರು ಈ ಸಿನಿಮಾ ನೋಡಿದ್ದಾರೆ. ವಿಶೇಷ ಪ್ರದರ್ಶನದ ಬಳಿಕ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ.

1 / 6
ರಮೇಶ್​ ಅರವಿಂದ್​ ನಟನೆಯ ‘ಶಿವಾಜಿ ಸುರತ್ಕಲ್ 2’ ಸಿನಿಮಾ ಬಿಡುಗಡೆಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಈಗ ಕೆಲವು ಗಣ್ಯರಿಗೆ ಈ ಸಿನಿಮಾವನ್ನು ತೋರಿಸಲಾಗಿದೆ. ಅವರಿಂದ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

2 / 6
ರೈಲ್ವೆ ಡಿಐಜಿ ಆದಂತಹ ಶಶಿಕುಮಾರ್ ಅವರು ‘ಶಿವಾಜಿ ಸುರತ್ಕಲ್​ 2’ ಸಿನಿಮಾ ವೀಕ್ಷಿಸಿದ್ದಾರೆ. ಅವರು ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮುಖ್ಯವಾಗಿ ಚಿತ್ರದಲ್ಲಿ ಬರುವ ಪೋಲಿಸ್ ತನಿಖಾ ವಿಧಾನಗಳನ್ನು ಹಾಗೂ ಕಥಾನಾಯಕನ ಪಾತ್ರವನ್ನು ಬಹಳ ಮೆಚ್ಚಿಕೊಂಡಿದ್ದಾರೆ.

3 / 6
ಡಿಜಿಪಿ ಹಾಗೂ ಐಪಿಎಸ್ ಆಫೀಸರ್ ಆದ ರೂಪಾ ಮೌದ್ಗಿಲ್ ಅವರು ಕೂಡ ಚಿತ್ರವನ್ನು ವೀಕ್ಷಿಸಿ ತಂಡದ ಪ್ರಯತ್ನದ ಬಗ್ಗೆ, ಆಕಾಶ್ ಶ್ರೀವತ್ಸ ಅವರ ನಿರ್ದೇಶನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮೇಘನಾ ಗಾಂವ್ಕರ್ ಮಾಡಿರುವ ಪೊಲೀಸ್​ ಅಧಿಕಾರಿಯ ಪಾತ್ರವು ರೂಪಾಗೆ ಇಷ್ಟವಾಗಿದೆ.

4 / 6
ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಮಂಜುನಾಥ್ ಅವರು ಸಹ ಈ ಚಿತ್ರವನ್ನು ನೋಡಿದ್ದಾರೆ. ಅವರಿಗೆ ಸಿನಿಮಾ ಬಹಳ ಮೆಚ್ಚುಗೆಯಾಗಿದೆ. ಮುಂದಿನ ದಿನಗಳಲ್ಲಿ ಈ ತಂಡದಿಂದ ಮತ್ತಷ್ಟು ಉತ್ತಮ ಸಿನಿಮಾಗಳು ಬರಲಿ ಎಂದು ಅವರು ಹಾರೈಸಿದ್ದಾರೆ.

5 / 6
ಬಸವರಾಜ ಬೊಮ್ಮಾಯಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆದ ಮಂಜುನಾಥ್ ಪ್ರಸಾದ್ ಕೂಡ ‘ಶಿವಾಜಿ ಸುರತ್ಕಲ್​’ ಚಿತ್ರವನ್ನು ನೋಡಿ, ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾದ ಕಥೆ ರೋಚಕ ಮತ್ತು ಭಾವನಾತ್ಮಕವಾಗಿದೆ ಎಂದು ಅವರು ಹೇಳಿದರು.

6 / 6
ಅನೂಪ್ ಗೌಡ ಮತ್ತು ರೇಖಾ ಕೆ.ಎನ್. ನಿರ್ಮಾಣ ಮಾಡಿರುವ ಈ ಸಿನಿಮಾದ ಸಕ್ಸಸ್​ ಮೀಟ್​ ನಡೆಸಲಾಗಿದೆ. ಚಿತ್ರಕ್ಕೆ ಸಿಕ್ಕ ಯಶಸ್ಸಿನಿಂದ ‘ಶಿವಾಜಿ ಸುರತ್ಕಲ್ 3’ ಕೂಡ ನಿರ್ಮಾಣ ಮಾಡುವ ಭರವಸೆ ಮೂಡಿದೆ.

Published On - 1:30 pm, Thu, 27 April 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us