AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shreyas Iyer: ಅನುಭವಿಗಳ ವೈಫಲ್ಯ: ಅಬ್ಬರಿಸಿದ್ದು ಮಾತ್ರ 4ನೇ ಟೆಸ್ಟ್ ಪಂದ್ಯವಾಡುತ್ತಿರುವ ಶ್ರೇಯಸ್ ಅಯ್ಯರ್

IND vs SL: ಶ್ರೇಯಸ್ ಅಯ್ಯರ್ ಕ್ರೀಸ್ಗೆ ಬಂದ ಮೊದಲ ಸೆಷನ್ನಲ್ಲಿ ಟೀಮ್ ಇಂಡಿಯಾ ಕೇವಲ 86 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಸ್ವಲ್ಪ ಸಮಯದ ನಂತರ ಅಯ್ಯರ್ ಕ್ರೀಸ್ನಲ್ಲಿ ಇರುವಾಗಲೇ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಕೂಡ ಪೆವಿಲಿಯನ್ ಸೇರಿಕೊಂಡರು.

Vinay Bhat
|

Updated on:Mar 13, 2022 | 8:23 AM

Share
Shreyas Iyer: ಅನುಭವಿಗಳ ವೈಫಲ್ಯ: ಅಬ್ಬರಿಸಿದ್ದು ಮಾತ್ರ 4ನೇ ಟೆಸ್ಟ್ ಪಂದ್ಯವಾಡುತ್ತಿರುವ ಶ್ರೇಯಸ್ ಅಯ್ಯರ್

1 / 4
ಶ್ರೇಯಸ್ ಅಯ್ಯರ್ ಕ್ರೀಸ್ಗೆ ಬಂದ ಮೊದಲ ಸೆಷನ್ನಲ್ಲಿ ಟೀಮ್ ಇಂಡಿಯಾ ಕೇವಲ 86 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಸ್ವಲ್ಪ ಸಮಯದ ನಂತರ ಅಯ್ಯರ್ ಕ್ರೀಸ್ನಲ್ಲಿ ಇರುವಾಗಲೇ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಕೂಡ ಪೆವಿಲಿಯನ್ ಸೇರಿಕೊಂಡರು. 148ಕ್ಕೆ 6 ವಿಕೆಟ್ಗಳ ಪತನದ ನಂತರ, ಶ್ರೇಯಸ್ ಸ್ವತಃ ಮುನ್ನಡೆ ಸಾಧಿಸಿ ರನ್ ಮಳೆ ಸುರಿಸಿದರು. ಭಾರತೀಯ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಅಟ್ಟುತ್ತಿದ್ದ ಲಂಕಾ ಬೌಲರ್ಗಳು ಅಯ್ಯರ್ ಆಟಕ್ಕೆ ಸುಸ್ತಾದರು.

2 / 4
ಅದರಲ್ಲೂ ಧನಂಜಯ ಡಿ ಸಿಲ್ವಾ ಅವರ ಒಂದೇ ಓವರ್ನಲ್ಲಿ ಎರಡು ದೊಡ್ಡ ಸಿಕ್ಸರ್ಗಳನ್ನು ಹೊಡೆಯುವ ಮೂಲಕ ಶ್ರೇಯಸ್ ಕೇವಲ 54 ಎಸೆತಗಳಲ್ಲಿ ತಮ್ಮ ಎರಡನೇ ಟೆಸ್ಟ್ ಅರ್ಧಶತಕವನ್ನು ಗಳಿಸಿದರು. ಒಂದು ಕಡೆಯಿಂದ ವಿಕೆಟ್ಗಳು ಉರುಳುತ್ತಿದ್ದರೆ ಅತ್ತ ಬದಿಯಿಂದ ಶ್ರೇಯಸ್ನ ಬ್ಯಾಟ್ನಿಂದ ಬೌಂಡರಿಗಳು ಸಿಡಿಯುತ್ತಿದ್ದವು. ಟೆಸ್ಟ್ ಪಂದ್ಯದಲ್ಲಿ ODI ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ ಶ್ರೇಯಸ್ ತಮ್ಮ ಎರಡನೇ ಶತಕದ ಹಾದಿಯಲ್ಲಿದ್ದರು, ಆದರೆ ಪ್ರವೀಣ್ ಜಯವಿಕ್ರಮ ಅವರು ಸಿಕ್ಸರ್ ಹೊಡೆಯಲು ಪ್ರಯತ್ನಿಸುತ್ತಿರುವಾಗ ಸ್ಟಂಪ್ ಔಟ್ ಆದರು. ಇದರ ಜೊತೆಗೆ ಭಾರತದ ಇನ್ನಿಂಗ್ಸ್ ಕೂಡ ಕೊನೆಗೊಂಡಿತು. ಅಯ್ಯರ್ ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 98 ಎಸೆತಗಳಲ್ಲಿ 92 ರನ್ ಗಳಿಸಿದರು, ಅವರ ಬ್ಯಾಟ್ನಿಂದ 10 ಬೌಂಡರಿ ಮತ್ತು 4 ಸಿಕ್ಸರ್ಗಳು ಬಂದಿದ್ದವು.

3 / 4
ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 59.1 ಓವರ್ಗೆ 252 ರನ್ಗಳಿಗೆ ಸರ್ವಪತನ ಕಂಡಿತು. ಇತ್ತ ಶ್ರೀಲಂಕಾ ಬ್ಯಾಟರ್ಗಳದ್ದು ಕೂಡ ಇದೇ ಪರಿಸ್ಥಿತಿ. ಭಾರತೀಯ ಬೌಲಿಂಗ್ ಬಿರುಗಾಳಿಗೆ ತತ್ತರಿಸಿರುವ ಸಿಂಹಳೀಯರು ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡಿದ್ದು ಗಳಿಸಿರುವುದು ಮಾತ್ರ 86 ರನ್ಗಳನ್ನಷ್ಟೆ. ಇನ್ನೂ 166 ರನ್ಗಳ ಹಿನ್ನಡೆಯಲ್ಲಿದೆ. ಜಸ್ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತು ಮಿಂಚಿದ್ದಾರೆ.

4 / 4

Published On - 7:31 am, Sun, 13 March 22