Siddaramaiah Gadag Friend:ಬಡತನ-ಶ್ರೀಮಂತ ಬೇಧ ಎಣಿಸದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಿಂಪಲ್ ಗೆಳೆಯ ಗದಗನಲ್ಲಿದ್ದಾನೆ!
ಭಾವಿ ಸಿಎಂ ಸಿದ್ದರಾಮಯ್ಯಗೂ ಗದಗ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಸಿದ್ದರಾಮಯ್ಯನವರ ಸಿಂಪಲ್ ಗೆಳೆಯ, ಅಭಿಮಾನಿಯೊಬ್ಬ ಗದಗನಲ್ಲಿದ್ದಾನೆ. ಸಿದ್ದು ಗದಗ ಬಂದ್ರೆ ಸಾಕು ಆತನಿಗೆ ಭೇಟಿಯಾಗದೇ ಹೋಗಲ್ಲ. ಎಷ್ಟೇ ಜನರು ಇದ್ದರೂ ಈ ಬಿಳಿಯ ಗಡ್ಡದ ಗೆಳೆಯ ಕಂಡ್ರೆ ಸಾಕು ಏಯ್ ಬಾರಪ್ಪ ಅಂತ ಕರೆಯದೇ ಇರಲ್ಲ ಸಿದ್ರಾಮಣ್ಣ. 3 ದಶಕಗಳ ಗೆಳೆಯ ಈಗ ಮತ್ತೆ 2ನೇ ಬಾರಿ ಸಿಎಂ ಆಗ್ತಾರೆ ಅನ್ನೋ ಸುದ್ದಿ ಕೇಳಿ ಬಿಳಿಯ ಗಡ್ಡದ ಗೆಳೆಯ ಫುಲ್ ಖುಷ್ ಆಗಿದ್ದಾನೆ. ಸಿಹಿ ಹಂಚಿ, ಪಟಾಕಿ ಸಿಡಿಸಿ, ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾನೆ. ಯಾರೂ ಆ ಗೆಳೆಯ ಅಂತೀರಾ ಈ ಸ್ಟೋರಿ ನೋಡಿ...
1 / 8
ಗದಗ ಜಿಲ್ಲೆಗೂ ಭಾವಿ ಸಿಎಂ ಸಿದ್ದರಾಮಯ್ಯುಗೂ ಪ್ರೀತಿಯ ನಂಟು...! ಗೆಳೆಯನಿಗೆ 2ನೇ ಬಾರಿ ಸಿಎಂ ಪಟ್ಟ ಗದಗನಲ್ಲಿ ಬಿಳಿಯ ಗಡ್ಡದ ಗೆಳಯನ ಸಂಭ್ರಮ...! ಸಿದ್ದರಾಮಯ್ಯನ ಮೂರು ದಶಕದ ಗೆಳಯನಿಂದ ಪಟಾಕಿ ಸಿಡಿಸಿ ಸಹಿ ಹಂಚಿ ಸಂಭ್ರಮ...! ಬಡತನ ಶ್ರೀಮಂತ ಅನ್ನೋ ಬೇಧ ಇಲ್ಲದ ಗೆಳೆಯ ಅಂದ್ರೆ ಸಿದ್ದರಾಮಯ್ಯ ಅಂತ ಮೆಚ್ಚುಗೆ ಮಾತನಾಡಿದ ಗೆಳೆಯ...!
2 / 8
ಮೂರು ದಶಕದ ಪ್ರೀತಿ, ವಿಶ್ವಾಸ, ಗೆಳತನಕ್ಕೆ ಯಾವುದೇ ಧಕ್ಕೆ ಇಲ್ಲ. ಮೂರು ದಶಕದ ಹಿಂದೆ ಸಾಮಾನ್ಯ ಕಾರ್ಯಕರ್ತನಾಗಿದ್ದು ಸಿದ್ದರಾಮಯ್ಯ ಈಗ ರಾಜ್ಯದ ಎರಡನೇ ಸಿಎಂ ಆಗ್ತಾಯಿದ್ದಾರೆ. ಸಾಮಾನ್ಯ ಕಾರ್ಯಕರ್ತ, ಆತ್ಮೀಯ ಗೆಳೆಯ ಮತ್ತೊಮ್ಮೆ ಸಿಎಂ ಗದ್ದುಗೆ ಏರ್ತಾಯಿದ್ದಾರೆ ಅಂದ್ರೆ ಯಾರಿಗೆ ಖುಷಿ ಇರುವುದಿಲ್ಲ ಹೇಳಿ. ಹೌದು ಗದಗ ನಗರದಲ್ಲಿ ಇರೋ ಗೆಳೆಯ ಫಕೀರಪ್ಪ ಹೆಬಸೂರ ಇವತ್ತು ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗ್ತಾರೆ ಅನ್ನೋ ಸುದ್ದಿ ಕೇಳಿ ವಿಜಯೋತ್ಸವ ಆಚರಿಸಿದ್ದಾರೆ. (ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ)
3 / 8
ಗದಗ ಜಿಲ್ಲೆಯಲ್ಲಿ ಈ ಫಕೀರಪ್ಪ ಹೆಬಸೂರಗೆ ಎರಡನೇ ಸಿದ್ದರಾಮಯ್ಯ ಅಂತಲೇ ಕರೀತಾರೆ. ಫಕೀರಪ್ಪ ಹೆಬಸೂರ ಹಾಗೂ ಸಿದ್ದರಾಮಯ್ಯ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. 1983ರಿಂದ ಬಂದ ಗೆಳತನ. ಅಂದು ರಾಮೃಕೃಷ್ಣ ಹೆಗಡೆ ಅವ್ರ ಸಂಪುಟದಲ್ಲಿ ಮೊದಲ ಬಾರಿಗೆ ಗೆಳೆಯ ಸಿದ್ದರಾಮಯ್ಯ ಮಂತ್ರಿಯಾಗಿದ್ದರು. ಬಹಳ ಖುಷಿಯಾಯ್ತು. 30 ವರ್ಷದಲ್ಲಿ ಸಿದ್ದರಾಮಯ್ಯ ದೊಡ್ಡ ರಾಜಕೀಯ ನಾಯಕನಾಗಿ ಬೆಳೆದಿದ್ದಾರೆ. ಈಗಾಗಲೇ ಒಂದು ಬಾರಿ ಸಿಎಂ ಆಗಿದ್ದಾರೆ. ವಿಪಕ್ಷ ನಾಯಕರಾಗಿದ್ದಾರೆ.
4 / 8
ಎಷ್ಟೇ ದೊಡ್ಡ ಹುದ್ದೆಗೆ ಹೋದ್ರೂ ಈ ಬಿಳಿಯ ಗಡ್ಡದ ಗೆಳಯನನ್ನು ಮಾತ್ರ ಮರೆತಿಲ್ಲ. ಗದಗ ನಗರಕ್ಕೆ ಬಂದ್ರೆ ಸಾಕು ಈ ಗೆಳೆಯನಿಗೆ ಭೇಟಿಯಾಗಿ ಮಾತನಾಡದೇ ಹೋಗಲ್ಲ. ಹೌದು ಗದಗ ನಗರದ ಫಕೀರಪ್ಪ ಹೆಬಸೂರ ಹಾಗೂ ಭಾವಿ ಸಿಎಂ ಸಿದ್ದರಾಮಯ್ಯ ನಡುವೆ ಅಷ್ಟೊಂದು ಒಳ್ಳೆಯ ಗೆಳತನವಿದೆ. ’ನಾನು ಬಡವ-ನೀನು ದೊಡ್ಡವ.. ಆದರೂ ನಮ್ಮಿಬ್ಬರ ಪ್ರೀತಿಗೆ, ಗಳೆತನಕ್ಕೆ ಇಲ್ಲ ಬಡತನ!‘ ಅನ್ನೋ ಹಾಗೆ ಇಂದಿಗೂ ಇಬ್ಬರ ನಡುವಿನ ಗಾಢ ಗೆಳತನ ಇದೆ. ಭಾವಿ ಸಿಎಂ ಸಿದ್ದರಾಮಯ್ಯ ಗೆಳೆತನ ಬಗ್ಗೆ ಟಿವಿ9 ಹಂಚಿಕೊಂಡಿದ್ದಾರೆ.
5 / 8
ಸಿದ್ದರಾಮಯ್ಯ ಎಷ್ಟೇ ದೊಡ್ಡ ಹುದ್ದೆ ಅಲಂಕರಿಸಿದರೂ ಗೆಳತನದಲ್ಲಿ ಬದಲಾವಣೆಯಾಗಿಲ್ಲ ಅಂತ ಬಿಳಿಯ ಗಡ್ಡದ ಗೆಳೆಯ ಟಿವಿ9ಗೆ ಹೇಳಿದ್ದಾರೆ. ಎಷ್ಟೇ ಜನ್ರು ಇದ್ರೂ ಕೂಡ ಈ ಬಿಳಿಯ ಗಡ್ಡದ ಗೆಳೆಯ ಫಕೀರಪ್ಪ ಕಂಡ್ರೆ ಸಾಕು ಸಿದ್ದರಾಮಯ್ಯ ಏಯ್ ಫಕೀರಪ್ಪ ಬಾರಯ್ಯ ಇಲ್ಲಿ ಅಂತಾನೆ ಕರೆದು ಇಂದಿಗೂ ಮಾತನಾಡುತ್ತಾರಂತೆ. ಮೊನ್ನೆ ದೆಹಲಿಗೆ ಹೋಗುವ ಮುನ್ನವೂ ಈ ಗೆಳಯನ ಜೊತೆ ಮಾತನಾಡಿಯೇ ಹೋಗಿದ್ದಾರಂತೆ. ಸಿದ್ದರಾಮಯ್ಯ ಕುರುಬ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ. ಅಹಿಂದ ನಾಯಕರ ನಾಯಕರಾಗಿ ಬೆಳೆದವರು.
6 / 8
ಉನ್ನತ ಹುದ್ದೆ ಏರಿದ್ರೂ ನನ್ನ ಮರೆತಿಲ್ಲ. ಗದಗ ನಗರಕ್ಕೆ ಬಂದ್ರೆ ಫಕೀರಪ್ಪ ಮನೆಗೆ ಬರ್ತಾಯಿದ್ರು. ಆದ್ರೆ ಸಿಎಂ ಆದ ಬಳಿಕ ನಿಮ್ಮ ಮನೆಗೆ ಬಂದ್ರೆ ಜನ ಏನ್ ಅಂದ್ಕೊಳ್ತಾರೋ. ನೀ ಎಲ್ಲಿ ಹೇಳ್ತಿ ಅಲ್ಲಿ ಬರ್ತೀನಿ ಅಂದರು. ಮುಳಗುಂದ ನಾಕಾದಲ್ಲಿ ಬಂದು ನನ್ನ ಭೇಟಿಯಾದ್ರು. ನಾನೂ ಕೂಡ ಸನ್ಮಾನ ಮಾಡಿ ಕಳಿಸಿದ್ದೆ. ಇಂಥ ಒಳ್ಳೆಯ ಮನಸ್ಸಿನ ನಾಯಕ ಸಿಗೋದು ಅಪರೂಪ ಅಂತಾರೆ ಗೆಳೆಯ ಫಕೀರಪ್ಪ.
7 / 8
ಸಿದ್ದರಾಮಯ್ಯ ಅವ್ರ ಮೇಲಿನ ಅಭಿಮಾನದಿಂದ ಗದಗ ನಗರದಲ್ಲಿ ಸಿದ್ದರಾಮಯ್ಯ ಪುತ್ರ ರಾಕೇಶ ಸಿದ್ದರಾಮಯ್ಯ ಅವ್ರ ಹೆಸರಲ್ಲಿ ಶಿಕ್ಷಣ ಟ್ರಸ್ಟ್ ಮಾಡಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ, ವಸತಿ ನೀಡುವ ಕಾರ್ಯದಲ್ಲಿ ಫಕೀರಪ್ಪ ಹಾಗೂ ಗೆಳೆಯರ ಬಳಗ ಮಾಡುತ್ತಿದೆ. ಈಗ ಗೆಳೆಯ ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ ಅನ್ನೋ ಸುದ್ದಿ ಕೇಳಿ ಖಷಿಯಾಗಿದ್ದಾರೆ. ಗದಗನಲ್ಲಿ ಸಿಹಿ ತಿನಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇಳಿವಯಸ್ಸಿನಲ್ಲೂ ಡ್ಯಾನ್ಸ್ ಮಾಡಿ ಖಷಿ ಪಟ್ಟಿದ್ದಾರೆ.
8 / 8
ಮೊನ್ನೆ ದೆಹಲಿಗೆ ಹೋಗುವ ಮುನ್ನವೂ ಈ ಗೆಳಯನ ಜೊತೆ ಮಾತನಾಡಿಯೇ ಹೋಗಿದ್ದಾರಂತೆ. ಸಿದ್ದರಾಮಯ್ಯ ಕುರುಬ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ. ಅಹಿಂದ ನಾಯಕರ ನಾಯಕರಾಗಿ ಬೆಳೆದವರು.