Skoda Slavia: ಸ್ಕೋಡಾ ಸ್ಲಾವಿಯಾ ಬಿಡುಗಡೆ: ಕೇವಲ 11 ಸಾವಿರಕ್ಕೆ ಬುಕ್ ಮಾಡಿಕೊಳ್ಳಬಹುದು

| Updated By: ಝಾಹಿರ್ ಯೂಸುಫ್

Updated on: Nov 18, 2021 | 9:22 PM

Skoda Slavia price: ಸ್ಕೋಡಾ ಸ್ಲಾವಿಯಾ ಆಕ್ಟಿವ್, ಸ್ಕೋಡಾ ಸ್ಲಾವಿಯಾ ಆಂಬಿಷನ್ ಮತ್ತು ಸ್ಕೋಡಾ ಸ್ಲಾವಿಯಾ ಸ್ಟೈಲ್ ಮಾಡೆಲ್​ಗಳು 10 ಲಕ್ಷದಿಂದ 15 ಲಕ್ಷ ರೂ. ಒಳಗೆ ಖರೀದಿಸಬಹುದು.

1 / 5
ಸ್ಕೋಡಾ ಇಂಡಿಯಾ ತನ್ನ ಹೊಸ ಮಧ್ಯಮ ಗಾತ್ರದ ಸೆಡಾನ್ ಸ್ಲಾವಿಯಾವನ್ನು ಬಿಡುಗಡೆ ಮಾಡಿದೆ. ಸ್ಕೋಡಾ ಸ್ಲಾವಿಯಾವನ್ನು 5 ಅತ್ಯಾಕರ್ಷಕ ಹೊಸ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರೊಂದಿಗೆ ಕಾರಿನ ಬುಕ್ಕಿಂಗ್ ಕೂಡ ಪ್ರಾರಂಭವಾಗಿದೆ. ಅದರಂತೆ ನೂತನ ಸ್ಕೋಡಾ ಸ್ಲಾವಿಯಾವನ್ನು ಕೇವಲ 11,000 ರೂ.ಗೆ ಬುಕ್ ಮಾಡಬಹುದು.

2 / 5
ಸ್ಕೋಡಾ ಸ್ಲಾವಿಯಾದ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು, ಸ್ಕೋಡಾ ಆಕ್ಟಿವ್, ಸ್ಕೋಡಾ ಆಂಬಿಷನ್ ಮತ್ತು ಸ್ಕೋಡಾ ಸ್ಟೈಲ್ ಮೂರು ವೆರಿಯೆಂಟ್ ಆಯ್ಕೆ ನೀಡಲಾಗಿದೆ.

3 / 5
MQB A0 IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಸ್ಕೋಡಾ ಸ್ಲಾವಿಯಾ ಪ್ರೀಮಿಯಂ ಮಧ್ಯಮ ಗಾತ್ರದ ಸೆಡಾನ್ ಕಾರು. ಇದರಲ್ಲಿ ಉದ್ದವಾದ ವೀಲ್ ಬೇಸ್, 16-ಇಂಚಿನ ಮಿಶ್ರಲೋಹದ ಚಕ್ರಗಳು, ವರ್ಟಿಕಲ್ ಕ್ರೋಮ್ ಫ್ರಂಟ್ ಗ್ರಿಲ್, ಎಲ್-ಆಕಾರದ ಹೆಡ್‌ಲೈಟ್‌ಗಳು ಮತ್ತು ಅಗಲವಾದ  ಗಾಳಿಯ ಒಳಹರಿವು ಹೊಂದಿರುವ ಬಂಪರ್‌ಗಳನ್ನು ನೀಡಲಾಗಿದೆ.

4 / 5
ಇನ್ನು ಈ ಕಾರಿನ ಒಳಾಂಗಣದಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಂಪರ್ಕಿತ ಕಾರ್ ತಂತ್ರಜ್ಞಾನ, ಆಟೋ ಹೆಡ್‌ಲ್ಯಾಂಪ್‌ಗಳು, ಪ್ರೀಮಿಯಂ ಕಂಪನಿಯ 6 ಸ್ಪೀಕರ್‌ಗಳು, 6 ಏರ್‌ಬ್ಯಾಗ್‌ಗಳು, ಕ್ರೂಸ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಅನೇಕ ಪ್ರಮಾಣಿತ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದೆ.

5 / 5
ಸ್ಕೋಡಾ ಸ್ಲಾವಿಯಾದ ಎಂಜಿನ್‌ ಬಗ್ಗೆ ಹೇಳುವುದಾದರೆ, ಇದರಲ್ಲಿ ಎರಡು ಎಂಜಿನ್ ಆಯ್ಕೆಗಳಿವೆ. ಒಂದು ಆಯ್ಕೆಯ 1.0 ಲೀಟರ್ 3 ಸಿಲಿಂಡರ್ TSI ಪೆಟ್ರೋಲ್ ಎಂಜಿನ್, 115hp ವರೆಗೆ ಶಕ್ತಿಯನ್ನು ಉತ್ಪಾದಿಸುತ್ತದೆ. ಇನ್ನೊಂದು ಆಯ್ಕೆಯ 1.5 ಲೀಟರ್ 4 ಸಿಲಿಂಡರ್ TSI ಎಂಜಿನ್ 150hp ಮತ್ತು 250Nm ಟಾರ್ಕ್ ವರೆಗೆ ಶಕ್ತಿಯನ್ನು ಉತ್ಪಾದಿಸುತ್ತದೆ. ಇನ್ನು ಸ್ಕೋಡಾ ಸ್ಲಾವಿಯಾವನ್ನು 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಸ್ಕೋಡಾ ಸ್ಲಾವಿಯಾ ಆಕ್ಟಿವ್, ಸ್ಕೋಡಾ ಸ್ಲಾವಿಯಾ ಆಂಬಿಷನ್ ಮತ್ತು ಸ್ಕೋಡಾ ಸ್ಲಾವಿಯಾ ಸ್ಟೈಲ್ ಮಾಡೆಲ್​ಗಳು 10 ಲಕ್ಷದಿಂದ 15 ಲಕ್ಷ ರೂ. ಒಳಗೆ ಖರೀದಿಸಬಹುದು.