Padma Award 2023 Winners List: ಎಸ್‌ಎಂ ಕೃಷ್ಣ, ಎಸ್‌ಎಲ್ ಭೈರಪ್ಪ, ಸುಧಾಮೂರ್ತಿ ಸೇರಿದಂತೆ 8 ಕನ್ನಡಿಗರಿಗೆ ಪದ್ಮ ಪುರಸ್ಕಾರ

| Updated By: ರಮೇಶ್ ಬಿ. ಜವಳಗೇರಾ

Updated on: Jan 25, 2023 | 10:58 PM

74ನೇ ಗಣರಾಜ್ಯೋತ್ಸವದ ಮುನ್ನಾ ದಿನ ಕೇಂದ್ರ ಸರ್ಕಾರ 2023ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಒಟ್ಟು 106 ಸಾಧಕರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ರಾಜಕೀಯ ಮುತ್ಸದಿ ಎಸ್.ಎಂ.ಕೃಷ್ಣ ಸೇರಿ 6 ಸಾಧಕರಿಗೆ ಪದ್ಮವಿಭೂಷಣ ಹಾಗೂ ಸಾಹಿತಿ ಎಸ್​ಎಲ್ ಭೈರಪ್ಪ, ಮತ್ತು ಸುಧಾಮೂರ್ತಿ ಸೇರಿದಂತೆ 9 ಸಾಧಕರಿಗೆ ಪದ್ಮಭೂಷಣ ಸಿಕ್ಕಿದೆ. ಇನ್ನು 91 ಸಾಧಕರಿಗೆ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ. 91 ಪದ್ಮ ಶ್ರೀ ಪ್ರಶಸ್ತಿಗೆ ಕರ್ನಾಟಕದ ಐವರು ಆಯ್ಕೆಯಾಗಿದ್ದಾರೆ.

1 / 6
ಇನ್ಫೋಸಿಸ್ (Infosys) ಫೌಂಡೇಶನ್‌ನ ಸುಧಾಮೂರ್ತಿ (Sudha Murthy) ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ.

2 / 6
ಸಾಹಿತಿ ಎಸ್​.ಎಲ್.ಭೈರಪ್ಪಗೆ ಪದ್ಮಭೂಷಣ ಗೌರವ

ಸಾಹಿತಿ ಎಸ್​.ಎಲ್.ಭೈರಪ್ಪಗೆ ಪದ್ಮಭೂಷಣ ಗೌರವ

3 / 6
ಮಾಜಿ ಸಿಎಂ ಎಸ್.ಎಂ.ಕೃಷ್ಣಗೆ ಪದ್ಮವಿಭೂಷಣ ಗೌರವ

4 / 6
ಇನ್ನು ಜಾನಪದ ಕಲಾವಿದ (ತಮಟೆ ವಾದಕ) ದಲ್ಲಿ 16ನೇ ವಯಸ್ಸಿನಲ್ಲಿಯೇ ತಮಟೆ ವಾದ್ಯ ಶುರುಮಾಡಿದ್ದ ಚಿಕ್ಕಬಳ್ಳಾಪುರದ ಮುನಿವೆಂಕಟಪ್ಪ ಅವರಿಗೆ ಪದ್ಮಶ್ರಿ ಪ್ರಶಸ್ತಿ ದೊರೆತಿದೆ.

5 / 6
ಕೊಡಗಿನ ಉಮ್ಮತ್ತಾಟ್ ಜಾನಪದ ನೃತ್ಯ, ಕಲೆಯ (ಜಾನಪದ ನೃತ್ಯ) ನರ್ತಕಿ ಈ ನೃತ್ಯದ ಮೂಲಕ ಕೊಡವ ಸಂಸ್ಕೃತಿಯನ್ನು ಉಳಿಸಲು ಸಹಾಯ ಮಾಡಿದ ರಾಣಿ ಮಾಚಯ್ಯ ಅವರಿಗೆ ಜನಾಪದ ನೃತ್ಯ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.

6 / 6
ಖಾದರ್ ವಲ್ಲಿ ದೂದೇಕುಲ(ವಿಜ್ಞಾನ ಮತ್ತು ಇಂಜಿನಿಯರಿಂಗ್), ರಾಣಿ ಮಾಚಯ್ಯ (ಕಲೆ), ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (ಕಲೆ), ಐ ಶಾ ರಶೀದ್ ಅಹಮದ್ ಕ್ವಾದ್ರಿ (ಕಲೆ), ಶ್ರೀ ಸುಬ್ಬರಾಮನ್ (ಪುರಾತತ್ವ ಶಾಸ್ತ್ರ) ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ.

Published On - 10:21 pm, Wed, 25 January 23