Tech Tips: ನೀವು ಹಳೆಯ ಸ್ಮಾರ್ಟ್​ಫೋನ್ ಸೇಲ್ ಮಾಡುತ್ತೀರಿ ಎಂದಾದರೆ ಈ ವಿಚಾರ ತಿಳಿದಿರಲಿ

Smartphone Tricks: ನಿಮ್ಮ ಮೊಬೈಲ್​ನಲ್ಲಿರುವ ಯಾವುದೇ ಫೈಲ್ ಅಥವಾ ಕಾಂಟೆಕ್ಟ್ ನಿಮಗೆ ಬೇಡ ಎಂದಾದಲ್ಲಿ ಸೆಟ್ಟಿಂಗ್ಸ್​ಗೆ ತೆರಳಿ ಸ್ಮಾರ್ಟ್​ಫೋನನ್ನು ಸಂಪೂರ್ಣ ರಿಸೆಟ್ ಕೊಡಬಹುದು. ಹೀಗೆ ಮಾಡಿದರೆ ಮೊಬೈಲ್​ನಲ್ಲಿರುವ ಎಲ್ಲ ಫೈಲ್ಸ್ ಡಿಲೀಟ್ ಆಗಿ ಹೊಸದರಂತೆ ಇರುತ್ತದೆ.

|

Updated on: Nov 14, 2023 | 6:55 AM

ನೀವು ಸ್ಮಾರ್ಟ್‌ಫೋನ್‌ ಮಾರಾಟ ಮಾಡಲು ಯೋಚನೆಯಲ್ಲಿದ್ದರೆ, ಅನುಸರಿಸಲೇಬೇಕಾದ ವಿಧಾನಗಳ ಬಗ್ಗೆ ಇಲ್ಲಿ ತಿಳಿಸಿಕೊಡುತ್ತೇವೆ. ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಎಷ್ಟು ಜಾಗರೂಕತೆಯಿಂದ ಇರಬೇಕು ಎಂಬುದನ್ನು ತಿಳಿಯೋಣ.

1 / 7
ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಬೇರೆಯವರಿಗೆ ಮಾರುವ ಅಥವಾ ವಿನಿಮಯ ಮಾಡುವ ಮುನ್ನ, ಅದರಲ್ಲಿರುವ ಫೈಲುಗಳನ್ನು ಅಳಿಸಿಹಾಕಲೇಬೇಕು. ಇಲ್ಲವಾದಲ್ಲಿ ಅವರು ನಿಮ್ಮ ಇಮೇಲ್‌ಗೆ ಲಾಗಿನ್ ಆಗಬಹುದು, ಸಂದೇಶಗಳನ್ನು ನೋಡಬಹುದು ಹಾಗೂ ಇತರ ಫೈಲ್‌ಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ.

2 / 7
ನಿಮ್ಮ ಫೋನ್​ನಲ್ಲಿರುವ ಎಲ್ಲ ಫೈಲುಗಳು ಬ್ಯಾಕಪ್ ಇಟ್ಟುಕೊಳ್ಳಬೇಕು. ಕೆಲವು ಫೋನ್‌ಗಳಲ್ಲಿ ಮೆಮೊರಿ ಕಾರ್ಡ್‌ಗೆ ಬ್ಯಾಕಪ್ ಮಾಡಿಕೊಳ್ಳುವ ಆಯ್ಕೆಯಿದ್ದರೆ, ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಸರ್ವರ್‌ನಲ್ಲೇ ಬ್ಯಾಕಪ್ ಇರಿಸಿಕೊಳ್ಳುವ ಆಯ್ಕೆಯಿರುತ್ತದೆ.

3 / 7
ಸ್ಮಾರ್ಟ್‌ಫೋನ್‌ ಅನ್ನು ಮಾರುವ ಮುನ್ನ ನಿಮ್ಮ ಸ್ಮಾರ್ಟ್‌ಫೋನಿನ ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡುವುದು ಕಡ್ಡಾಯ. ನೀವು ಸ್ಮಾರ್ಟ್‌ಫೋನ್ ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡಿದರೆ ಫೋನಿನಲ್ಲಿನ ನಿಮ್ಮ ಡೇಟಾ ಸಂಪೂರ್ಣವಾಗಿ ಅಳಿಸಿಹೊಗುತ್ತದೆ, ಹಾಗಾಗಿ, ಮರೆಯದೇ ಫ್ಯಾಕ್ಟ್ರಿ ರೀಸೆಟ್ ಮಾಡಿ.

4 / 7
ಶೋರೂಂನಿಂದ ಸ್ಮಾರ್ಟ್​ಫೋನ್ ಹೊರತಂದರೆ ಸಾಕು ಆ ಮೊಬೈಲ್ ಬೆಲೆ ಶೇ. 40 ರಷ್ಟು ಇಳೆಕೆಯಾಗುತ್ತದೆ ಎನ್ನುತ್ತವೆ ಸೆಕೆಂಡ್‌ ಹ್ಯಾಂಡ್‌ ಬೆಲೆಗಳನ್ನು ಹೇಳುವಂತಹ ಸೈಟ್‌ಗಳು. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್ ಮಾರಾಟ ಮಾಡುವಾಗ ಅದರ ಮಾರ್ಕೆಟ್ ವ್ಯಾಲ್ಯೂ ಎಷ್ಟು ಎಂಬುದನ್ನು ಮೊದಲು ತಿಳಿದುಕೊಳ್ಳಿ.

5 / 7
ಫೋನ್‌ನ ಒಳಭಾಗ ಮತ್ತು ಹೊರಭಾಗವನ್ನು ಚೆನ್ನಾಗಿ ಸ್ವಚ್ಛಮಾಡಿಕೊಳ್ಳಿ. ತಪ್ಪದೆ ಫಿಂಗರ್ ಪ್ರಿಂಟ್ ಕಲೆಗಳನ್ನು ನಿವಾರಿಸಿ ನಿಮ್ಮ ಹಳೆಯ ಫೋನ್ ಅನ್ನು ಮಾರಾಟ ಮಾಡಿ.

6 / 7
ನಿಮ್ಮ ಮೊಬೈಲ್​ನಲ್ಲಿರುವ ಯಾವುದೇ ಫೈಲ್ ಅಥವಾ ಕಾಂಟೆಕ್ಟ್ ನಿಮಗೆ ಬೇಡ ಎಂದಾದಲ್ಲಿ ಸೆಟ್ಟಿಂಗ್ಸ್​ಗೆ ತೆರಳಿ ಸ್ಮಾರ್ಟ್​ಫೋನನ್ನು ಸಂಪೂರ್ಣ ರಿಸೆಟ್ ಕೊಡಬಹುದು. ಹೀಗೆ ಮಾಡಿದರೆ ಮೊಬೈಲ್​ನಲ್ಲಿರುವ ಎಲ್ಲ ಫೈಲ್ಸ್ ಡಿಲೀಟ್ ಆಗಿ ಹೊಸದರಂತೆ ಇರುತ್ತದೆ.

7 / 7
Follow us