Solar Storm: ದೊಡ್ಡ ಪ್ರಮಾಣದ ಸೌರ ಚಂಡಮಾರುತ ಉಂಟಾದರೆ ಇಂಟರ್ನೆಟ್ ಸ್ಥಗಿತಗೊಳ್ಳಬಹುದು!
TV9 Web | Updated By: Skanda
Updated on:
Sep 04, 2021 | 7:03 AM
Solar Storm 2021: ಸೋಲಾರ್ ಸ್ಟಾರ್ಮ್ನಲ್ಲಿ (ಸೌರ ಚಂಡಮಾರುತ) ಹಲವು ವಿಧಗಳಿವೆ. ಸಾಮಾನ್ಯವಾಗಿ ಕಂಡುಬರುವುದು ಸೋಲಾರ್ ಫ್ಲೇರ್. ದೊಡ್ಡ ಪ್ರಮಾಣದ ಸೌರ ಚಂಡಮಾರುತ ಉಂಟಾದರೆ ಇಂಟರ್ನೆಟ್ ಸ್ಥಗಿತಗೊಳ್ಳಬಹುದು.
1 / 6
ಸೌರಮಂಡಲದ ಕೇಂದ್ರ ಭಾಗದಲ್ಲಿ ಸೂರ್ಯ ಇದ್ದಾನೆ. ಸೂರ್ಯನೇ ಭೂಮಿಗೆ ಶಕ್ತಿಯ ಪ್ರಮುಖ ಮೂಲ. ಭೂಮಿಯಲ್ಲಿ ವಿವಿಧ ಜೀವರಾಶಿಗಳು ಬದುಕಲು ಸೂರ್ಯ ಶಾಖ ಮತ್ತು ಬೆಳಕು ಕೊಡುವ ಸೂರ್ಯ, ಇನ್ನೂ ಹಲವು ವಿಧಾನದಲ್ಲಿ ಭೂಮಿಗೆ ಸಹಕಾರಿ ಆಗಿದ್ದಾನೆ.
2 / 6
ಹಾಗೆಂದು ಬಾಹ್ಯಾಕಾಶ ಯಾವತ್ತೂ ಭೂಮಿಗೆ ಬೇಕಾದ ರೀತಿಯಲ್ಲೇ ವರ್ತಿಸುತ್ತದೆ ಎಂದಲ್ಲ. ಭೂಮಿಯ ಹೊರವಲಯದಲ್ಲಿ ಬ್ರಹ್ಮಾಂಡದ ಹಲವಾರು ಚಟುವಟಿಕೆಗಳು ಆಗುತ್ತಿರುತ್ತದೆ. ಸೂರ್ಯನೂ ನಮ್ಮ ಸೌರಮಂಡಲದ ಭಾಗವಾಗಿದ್ದಾನೆ. ಹಾಗಾಗಿ, ಸೂರ್ಯನಲ್ಲಿಯೂ ಹಲವು ಚಟುವಟಿಕೆಗಳು ನಡೆಯುತ್ತವೆ. ಅದರಲ್ಲಿ ಸೋಲಾರ್ ಸ್ಟಾರ್ಮ್ ಎಂಬ ಪ್ರಕ್ರಿಯೆಯೂ ಸೇರಿದೆ. ಸೋಲಾರ್ ಸ್ಟಾರ್ಮ್ ಸದ್ಯದಲ್ಲೇ ಆಗುವ ಸೂಚನೆ ಲಭಿಸಿದೆ. ಅದೇ ಕಾರಣಕ್ಕೆ ಸಂಶೋಧಕರು ಚಿಂತೆಗೊಳಗಾಗಿದ್ದಾರೆ.
3 / 6
ಸೂರ್ಯನ ಮೇಳ್ಪದರದಲ್ಲಿ ಸ್ಫೋಟ ಉಂಟಾಗಿ ಅದು ಶಕ್ತಿಯನ್ನು ಹೊರಸೂಸುತ್ತದೆ. ಅದನ್ನು ಸನ್ ಫ್ಲೇರ್ ಎಂದು ಕರೆಯುತ್ತಾರೆ. ಈ ಸ್ಫೋಟವು ದೊಡ್ಡ ಪ್ರಮಾಣದ ಅಯಸ್ಕಾಂತೀಯ ಶಕ್ತಿಯನ್ನು ಕೂಡ ಹೊರಹಾಕುತ್ತದೆ. ಇದರಿಂದ ಸೂರ್ಯನ ಹೊರ ಪದರವು ತೆರೆದುಕೊಳ್ಳುತ್ತದೆ. ಇದರಿಂದ ಅತಿ ಸೂಕ್ಷ್ಮ ನ್ಯೂಕ್ಲಿಯರ್ ಕಣಗಳು ಬಿಡುಗಡೆ ಆಗುತ್ತದೆ. ಇದು ಭೂಮಂಡಲದಲ್ಲಿ ಹರಡಿಕೊಳ್ಳುತ್ತದೆ. ಅದನ್ನೇ ಸೋಲಾರ್ ಸ್ಟಾರ್ಮ್ ಎನ್ನುತ್ತಾರೆ.
4 / 6
ಸೋಲಾರ್ ಸ್ಟಾರ್ಮ್ನಲ್ಲಿ ಹಲವು ವಿಧಗಳಿವೆ. ಸಾಮಾನ್ಯವಾಗಿ ಕಂಡುಬರುವುದು ಸೋಲಾರ್ ಫ್ಲೇರ್.
5 / 6
ಸೋಲಾರ್ ಫ್ಲೇರ್ ಬಳಿಕ ಕೊರೊನಲ್ ಮಾಸ್ ಇಜೆಕ್ಷನ್ (ಸಿಎಮ್ಇ) ಆಗುತ್ತದೆ. ಈ ವೇಳೆ, ಸೂರ್ಯನ ಮೇಲಿನ ಪದರದಲ್ಲಿ ಐಯೋನೈಸ್ಡ್ ಕಣಗಳ ಸ್ಫೋಟವಾಗುತ್ತದೆ. ಈ ಹಿಂದೆ 1989 ರಲ್ಲಿ ದೊಡ್ಡ ಸೋಲಾರ್ ಸ್ಟಾರ್ಮ್ ಉಂಟಾಗಿತ್ತು. ಅದೇ ರೀತಿಯ ಸ್ಟಾರ್ಮ್ 2021ರಲ್ಲಿ ಆಗಲಿರುವ ಬಗ್ಗೆ ಅಂದಾಜಿಸಲಾಗಿದೆ.
6 / 6
ಸಿಎಮ್ಇ ಉಂಟಾದ ಕಾರಣದಿಂದ ಅದು ಭೂಮಿಯ ಸುತ್ತ ಸುತ್ತುತ್ತಿರುವ ಉಪಗ್ರಹಗಳಿಗೆ ಹಾನಿ ಮಾಡಬಹುದು. ಅದರಿಂದಾಗಿ ನಮ್ಮ ಸಂಪರ್ಕ ವ್ಯವಸ್ಥೆ ಹಾಳಾಗಬಹುದು. ಆದರೆ, ಹೀಗೆ ಉಪಗ್ರಹಗಳಿಗೆ ಹಾನಿ ಉಂಟಾಗುವ ಪ್ರಮಾಣ ಅತಿ ಕಡಿಮೆ ಎಂದು ಅಂದಾಜಿಸಲಾಗಿದೆ.