AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Top Up Loan: ಟಾಪ್ ಅಪ್ ಸಾಲದ ಬಗ್ಗೆ ನಿಮಗೆ ಗೊತ್ತಿರಲೇ ಬೇಕಾದ ಅಂಶಗಳಿವು

ಟಾಪ್ ಅಪ್ ಲೋನ್ ಅಂದರೇನು? ಲೋನ್ ಟಾಪ್ ಅಪ್ ಮಾಡಿಸುವ ಸಂದರ್ಭದಲ್ಲಿ ಗಮನಿಸಬೇಕಾದ ಅಂಶಗಳೇನು ಎಂಬ ವಿವರ ಇಲ್ಲಿದೆ.

TV9 Web
| Updated By: Srinivas Mata

Updated on: Sep 04, 2021 | 12:26 PM

ನಾನಾ ಬಗೆಯ ಅಗತ್ಯಗಳಿಗಾಗಿ ನಾನಾ ರೀತಿಯ ಸಾಲಗಳನ್ನು ತೆಗೆದುಕೊಳ್ತೀವಿ. ಸರಿಯಾದ ಸಮಯಕ್ಕೆ, ಅದರಲ್ಲೂ ನಿಗದಿತ ಸಾಲ ಮರುಪಾವತಿ ಅವಧಿಯೊಳಗೆ ಹಿಂತಿರುಗಿಸುವುದು ಆರ್ಥಿಕ ಶಿಸ್ತು. ಆದರೆ ಕೆಲವು ಸನ್ನಿವೇಶ ಹೇಗೆ ಸೃಷ್ಟಿ ಆಗಿಬಿಡುತ್ತದೆ ಅಂದರೆ, ಸಾಲ ವಾಪಸಾತಿ ಮಧ್ಯೆಯೇ ಮತ್ತೆ ಕಡ ತೆಗೆದುಕೊಳ್ಳಬೇಕಾಗುತ್ತದೆ. ಈ ಅಗತ್ಯವನ್ನು ಪೂರೈಸುವ ಉದ್ದೇಶದಿಂದಲೇ ಬ್ಯಾಂಕ್​ನಿಂದ ಟಾಪ್​- ಅಪ್ ವ್ಯವಸ್ಥೆ ನೀಡಲಾಗುತ್ತದೆ. ಆದರೆ ಅದಕ್ಕಾಗಿ ಅರ್ಹತಾ ಮಾನದಂಡಗಳೇನು ಎಂಬುದರ ವಿವರಗಳು ಇಲ್ಲಿವೆ. ಈಗಿರುವ ಸಾಲದ ಮಧ್ಯೆಯೇ ಟಾಪ್- ಅಪ್ ಮಾಡಿಸುತ್ತಿದ್ದಲ್ಲಿ ಇಲ್ಲಿರುವ ಆರು ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

ನಾನಾ ಬಗೆಯ ಅಗತ್ಯಗಳಿಗಾಗಿ ನಾನಾ ರೀತಿಯ ಸಾಲಗಳನ್ನು ತೆಗೆದುಕೊಳ್ತೀವಿ. ಸರಿಯಾದ ಸಮಯಕ್ಕೆ, ಅದರಲ್ಲೂ ನಿಗದಿತ ಸಾಲ ಮರುಪಾವತಿ ಅವಧಿಯೊಳಗೆ ಹಿಂತಿರುಗಿಸುವುದು ಆರ್ಥಿಕ ಶಿಸ್ತು. ಆದರೆ ಕೆಲವು ಸನ್ನಿವೇಶ ಹೇಗೆ ಸೃಷ್ಟಿ ಆಗಿಬಿಡುತ್ತದೆ ಅಂದರೆ, ಸಾಲ ವಾಪಸಾತಿ ಮಧ್ಯೆಯೇ ಮತ್ತೆ ಕಡ ತೆಗೆದುಕೊಳ್ಳಬೇಕಾಗುತ್ತದೆ. ಈ ಅಗತ್ಯವನ್ನು ಪೂರೈಸುವ ಉದ್ದೇಶದಿಂದಲೇ ಬ್ಯಾಂಕ್​ನಿಂದ ಟಾಪ್​- ಅಪ್ ವ್ಯವಸ್ಥೆ ನೀಡಲಾಗುತ್ತದೆ. ಆದರೆ ಅದಕ್ಕಾಗಿ ಅರ್ಹತಾ ಮಾನದಂಡಗಳೇನು ಎಂಬುದರ ವಿವರಗಳು ಇಲ್ಲಿವೆ. ಈಗಿರುವ ಸಾಲದ ಮಧ್ಯೆಯೇ ಟಾಪ್- ಅಪ್ ಮಾಡಿಸುತ್ತಿದ್ದಲ್ಲಿ ಇಲ್ಲಿರುವ ಆರು ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

1 / 8
ಟಾಪ್ ಅಪ್ ಲೋನ್
ಈಗಾಗಲೇ ಇರುವ ಹೋಮ್​ಲೋನ್ ಹಾಗೂ ಪರ್ಸನಲ್ ಸಾಲಕ್ಕೆ ಹೆಚ್ಚುವರಿಯಾಗಿ ಮೊತ್ತವನ್ನು ನೀಡಲಾಗುತ್ತದೆ. ಆದರೆ ಗ್ರಾಹಕರು ಬ್ಯಾಂಕ್​ನೊಂದಿಗೆ ಕನಿಷ್ಠ 1 ವರ್ಷದ ವಹಿವಾಟು ನಡೆಸಿರಬೇಕು. ಜತೆಗೆ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು. ಇವೆಲ್ಲದರ ಮೇಲೆ ಮರುಪಾವತಿ ಸಾಮರ್ಥ್ಯ ಕೂಡ ಮುಖ್ಯವಾಗುತ್ತದೆ. ಈ ಹಿಂದೆ ಸಾಲ ಮರುಪಾವತಿ ಸರಿಯಾಗಿ ಮಾಡಿದ್ದಾರಾ ಅಥವಾ ಇಲ್ಲವಾ ಎಂಬುದನ್ನು ಪರಿಶೀಲಿಸಲಾಗುತ್ತದೆ.

ಟಾಪ್ ಅಪ್ ಲೋನ್ ಈಗಾಗಲೇ ಇರುವ ಹೋಮ್​ಲೋನ್ ಹಾಗೂ ಪರ್ಸನಲ್ ಸಾಲಕ್ಕೆ ಹೆಚ್ಚುವರಿಯಾಗಿ ಮೊತ್ತವನ್ನು ನೀಡಲಾಗುತ್ತದೆ. ಆದರೆ ಗ್ರಾಹಕರು ಬ್ಯಾಂಕ್​ನೊಂದಿಗೆ ಕನಿಷ್ಠ 1 ವರ್ಷದ ವಹಿವಾಟು ನಡೆಸಿರಬೇಕು. ಜತೆಗೆ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು. ಇವೆಲ್ಲದರ ಮೇಲೆ ಮರುಪಾವತಿ ಸಾಮರ್ಥ್ಯ ಕೂಡ ಮುಖ್ಯವಾಗುತ್ತದೆ. ಈ ಹಿಂದೆ ಸಾಲ ಮರುಪಾವತಿ ಸರಿಯಾಗಿ ಮಾಡಿದ್ದಾರಾ ಅಥವಾ ಇಲ್ಲವಾ ಎಂಬುದನ್ನು ಪರಿಶೀಲಿಸಲಾಗುತ್ತದೆ.

2 / 8
ಅರ್ಹತೆ

ಈಗಾಗಲೇ ಬ್ಯಾಂಕ್​ನಲ್ಲಿ ಸಕ್ರಿಯ ಖಾತೆ ಇರುವವರಿಗೆ ಸಾಲ ನೀಡುವುದಕ್ಕೆ ಆದ್ಯತೆ ಇರುತ್ತದೆ. ಈ ಹಿಂದಿನ ಇಎಂಐಗಳನ್ನು ನಿಗದಿತ ಅವಧಿಯೊಳಗೆ ಪಾವತಿಸಿರಬೇಕು. ಕನಿಷ್ಠ ಪಕ್ಷ ಅದರ ಹಿಂದಿನ 12 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಸರಿಯಾದ ಸಮಯಕ್ಕೆ ಮರುಪಾವತಿಸಿರಬೇಕು. ಇನ್ನು ಈಗಾಗಲೇ ಇರುವ ಸಾಲದ ಒಟ್ಟು ಮೊತ್ತದ ಪೈಕಿ ಇಂತಿಷ್ಟನ್ನು ಮರುಪಾವತಿ ಮಾಡಿರಬೇಕು. ಇವೆಲ್ಲದರ ಹೊರತಾಗಿ ಅರ್ಜಿದಾರರಿಗೆ ಸ್ಥಿರವಾದ ಉದ್ಯೋಗ ಮತ್ತು ಹೊಸ ಸಾಲವನ್ನು ನಿಗದಿತ ಅವಧಿಯೊಳಗೆ ಮರುಪಾವತಿಸುವುದಕ್ಕೆ ಅಗತ್ಯ ಪ್ರಮಾಣ ಆದಾಯ ಇರಬೇಕು.

3 / 8
ಪ್ರಾಥಮಿಕ ಲಕ್ಷಣಗಳು

ಪ್ರಾಥಮಿಕ ಸಾಲದ ಅವಧಿಗೇ ಟಾಪ್ ಅಪ್ ಲೋನ್ ದೊರೆಯುತ್ತದೆ. ಅದು ಹೌಸಿಂಗ್ ಲೋನ್​ ಇರಲಿ, ಪರ್ಸನಲ್ ಲೋನ್ ಇರಲಿ. ಪ್ರಾಥಮಿಕ ಸಾಲದ ಅವಧಿಯಿಂದ ಆಚೆಗೆ ಟಾಪ್ ಅಪ್​ ಲೋನ್​ ಮರುಪಾವತಿಗೆ ಅವಕಾಶ ಸಿಗುವುದಿಲ್ಲ. ಇನ್ನು ಸಾಲದ ಮೊತ್ತವು ಸಾಮಾನ್ಯವು ಒಂದು ಬ್ಯಾಂಕ್​ನಿಂದ ಮತ್ತೊಂದಕ್ಕೆ ಬದಲಾಗುತ್ತದೆ. ಬಾಕಿ ಇರುವ ಒಟ್ಟು ಮೊತ್ತದ ಶೇ 70ರಿಂದ ಶೇ 75ಕ್ಕಿಂತ ಹೆಚ್ಚಿನ ಹಣವು ದೊರೆಯುವುದಿಲ್ಲ. ಪ್ರಾಥಮಿಕ ಸಾಲದ ಬಡ್ಡಿ ದರ ಎಷ್ಟಿರುತ್ತದೋ ಟಾಪ್​ ಅಪ್​ ಲೋನ್​ ಮೇಲಿನ ಬಡ್ಡಿ ದರ ಸಿಗುತ್ತದೆ.

4 / 8
ಅನುಕೂಲಗಳು

ಹಿಂದಿನ ಸಾಲದ ಮೇಲಿನ ಬಡ್ಡಿ ದರ ಎಷ್ಟಿರುತ್ತದೋ ಟಾಪ್​ ಅಪ್​ ಸಾಲಕ್ಕೂ ಅದೇ ಇರುತ್ತದೆ. ಟಾಪ್ ಅಪ್ ಸಾಲದ ಅರ್ಜಿಯ ಪ್ರೊಸೆಸಿಂಗ್ ಕೆಲ ಗಂಟೆಗಳಲ್ಲೇ ಮುಗಿದುಹೋಗುತ್ತದೆ. ಏಕೆಂದರೆ, ಹತ್ತಿರ ಹತ್ತಿರ ಎಲ್ಲ ದಾಖಲಾತಿಗಳು ಬ್ಯಾಂಕ್​ ಬಳಿಯೇ ಇರುತ್ತದೆ. ಮೊದಲೇ ಹೇಳಿದಂತೆ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿರುವುದರಿಂದ ಹೊಸ ಸಾಲ ನೀಡುವುದಕ್ಕೆ ಆರಾಮದಾಯಕ ಆಗಿರುತ್ತದೆ. ಇದರ ಜತೆಗೆ ಹೋಮ್​ ಲೋನ್​ ಮೇಲೆ ಟಾಪ್​ ಅಪ್ ಮಾಡಿಸಿದರೆ ಹೆಚ್ಚುವರಿ ತೆರಿಗೆ ಅನುಕೂಲಗಳಿವೆ. ಆ ಟಾಪ್-ಅಪ್ ಲೋನ್​ ಅನ್ನು ಯಾವುದೇ ಉದ್ದೇಶಕ್ಕೆ ಬಳಸಬಹುದು.

5 / 8
ಅನನುಕೂಲಗಳು

ಈಗಾಗಲೇ ಇರುವ ವಾಹನ, ಪರ್ಸನಲ್ ಅಥವಾ ಹೋಮ್​ಲೋನ್ ಟಾಪ್-ಅಪ್​ನಿಂದ ಅಸಲಿನ ಮೊತ್ತವು ಹೆಚ್ಚಾಗುತ್ತದೆ. ಹೋಮ್ ಲೋನ್ ಗ್ರಾಹಕರು ಬಾಕಿ ಇರುವ ಸಾಲದ ಮೊತ್ತದ ಆಧಾರದಲ್ಲಿ ಮರುಪಾವತಿ ಮೂಲಕ ಪಡೆಯುತ್ತಾರೆ. ಆಸ್ತಿಯ ಬೆಲೆ ಏರಿಕೆಯಾದರೂ ಟಾಪ್ ಅಪ್ ಲೋನ್ ಪ್ರಮಾಣವನ್ನು ಹೆಚ್ಚಿಸಲು ಆಗಲ್ಲ. ಇದರ ಹೊರತಾಗಿ ಗ್ರಾಹಕರು ಯಾವುದೇ ಹೊಸ ಗ್ರಾಹಕರಿಗೆ ಟಾಙ್ ಅಪ್ ವ್ಯವಸ್ಥೆ ಸಿಗುವುದಿಲ್ಲ.

6 / 8
ತೆರಿಗೆ ಅನುಕೂಲಗಳು

ಗೃಹ ಸಾಲಕ್ಕೆ 1.5 ಲಕ್ಷ ರೂಪಾಯಿ ತನಕ ಕಡಿತವು ಅಸಲು ಮೊತ್ತದ ಮರುಪಾವತಿ ಮೇಲೆ ಸಿಗುತ್ತದೆ. ಸೆಕ್ಷನ್ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ದೊರೆಯುತ್ತದೆ. ಇನ್ನು ಒಂದು ಹಣಕಾಸು ವರ್ಷದಲ್ಲಿ ಸೆಕ್ಷನ್ 24ರ ಅಡಿಯಲ್ಲಿ ಬಡ್ಡಿಯ ಪಾವತಿಗೆ 2 ಲಕ್ಷ ರೂಪಾಯಿ ತನಕ ಕಡಿತ ದೊರೆಯುತ್ತದೆ. ಟಾಪ್- ಅಪ್ ಸಾಲದ ಮೇಲೆ ಸಹ ಗೃಹ ಸಾಲಕ್ಕೆ ತೆರಿಗೆ ಅನುಕೂಲ ದೊರೆಯುತ್ತದೆ. ಆದರೆ ಇಂಥ ಯಾವ ತೆರಿಗೆ ಅನುಕೂಲ ಕೂಡ ಪರ್ಸನಲ್ ಲೋನ್​ ಟಾಪ್​ ಅಪ್​ಗೆ ಸಿಗುವುದಿಲ್ಲ.

7 / 8
ತಜ್ಞರ ಸಲಹೆ ಏನು?

ತೀರಾ ಅಗತ್ಯ ಇದ್ದಲ್ಲಿ ಮಾತ್ರ ಸಾಲದ ಟಾಪ್ ಅಪ್ ಪಡೆಯಿರಿ. ಸಿಗುತ್ತದೆ ಎಂಬ ಕಾರಣಕ್ಕೆ ಸಾಲದ ಟಾಪ್ ಅಪ್ ಒಳ್ಳೆಯದಲ್ಲ ಎನ್ನುತ್ತಾರೆ.

8 / 8
Follow us