AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ 2 ಕನ್ನಡ ಸಿನಿಮಾ, ಅದರ ಜೊತೆಗೆ ಇನ್ನೊಂದಿಷ್ಟು

This week OTT Release: ಪ್ರತಿ ವಾರದಂತೆ ಈ ವಾರವೂ ಸಹ ಕೆಲ ಸಿನಿಮಾಗಳು, ಹೊಸ ವೆಬ್ ಸರಣಿಗಳು ಒಟಿಟಿಗೆ ಬಂದಿವೆ. ಈ ವಾರ ಎರಡು ಕನ್ನಡ ಸಿನಿಮಾಗಳು ಒಟಿಟಿಗೆ ಬಂದಿವೆ. ಅದರ ಜೊತೆಗೆ ಚಿತ್ರಮಂದಿರಗಳಲ್ಲಿ ಹಿಟ್ ಎನಿಸಿಕೊಂಡ, ಒಳ್ಳೆಯ ಸಿನಿಮಾಗಳೆಂದು ವಿಮರ್ಶಕರಿಂದ ಕರೆಸಿಕೊಂಡ ಕೆಲ ಪರಭಾಷೆ ಸಿನಿಮಾಗಳು ಸಹ ಒಟಿಟಿಗೆ ಲಗ್ಗೆ ಇಟ್ಟಿವೆ. ಈ ವಾರ ಒಟಿಟಿಗೆ ಬಂದ ಸಿನಿಮಾಗಳ ಪಟ್ಟಿ ಇಲ್ಲಿದೆ...

ಮಂಜುನಾಥ ಸಿ.
|

Updated on: Jun 28, 2025 | 5:36 PM

Share
‘ಆಪ್ ಕೈಸೆ ಹೋ’ ಹೆಸರು ನೋಡಿ ಹಿಂದಿ ಸಿನಿಮಾ ಎಂದುಕೊಂಡರೆ ತಪ್ಪು. ಇದೊಂದು ಮಲಯಾಳಂ ಸಿನಿಮಾ. ಹಾಸ್ಯಪ್ರಧಾನ ಕೌಟುಂಬಿಕ ಕತೆ ಹೊಂದಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಆಗಿದೆ. ಇದೀಗ ಸನ್​ನೆಕ್ಸ್ಟ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

1 / 7
ಹಾಲಿವುಡ್​ನ ಕಾಮಿಡಿ-ಥ್ರಿಲ್ಲರ್ ವೆಬ್ ಸರಣಿ ‘ಮಾಂಕ್’ನ ರೀಮೇಕ್ ಆಗಿರುವ ‘ಮಿಸ್ತ್ರಿ’ ವೆಬ್ ಸರಣಿ ಜಿಯೋ ಹಾಟ್​ಸ್ಟಾರ್​​ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಓಸಿಡಿ ಇರುವ ಪತ್ತೆಧಾರನೊಬ್ಬ ಹೇಗೆ ಕೇಸುಗಳನ್ನು ತನ್ನ ಚಾಕಚಕ್ಯತೆಯಿಂದ ಪತ್ತೆ ಹಚ್ಚುತ್ತಾನೆ ಎಂಬುದೇ ಕತೆ.

2 / 7
ಅಂಥಾಲಜಿ ಕ್ರೈಂ ಥ್ರಿಲ್ಲರ್ ಕತೆ ಹೊಂದಿರುವ ‘ನಿಮ್ಮ ವಸ್ತುಗಳಿಗೆ ನೀವೆ ಜವಾಬ್ದಾರರು’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಕೇಶವಮೂರ್ತಿ ನಿರ್ದೇಶನ ಮಾಡಿರುವ ಈ ಸಿನಿಮಾನಲ್ಲಿ ದಿಲೀಪ್ ರಾಜ್ ಸೇರಿದಂತೆ ಕೆಲ ಒಳ್ಳೆಯ ನಟ-ನಟಿಯರು ನಟಿಸಿದ್ದಾರೆ. ಸಿನಿಮಾ ಸನ್ ನೆಕ್ಸ್ಟ್ ಒಟಿಟಿಯಲ್ಲಿ ಸ್ಟ್ರೀಂ ಆಗುತ್ತಿದೆ.

3 / 7
ಉತ್ತರ ಕರ್ನಾಟಕದ ಕೆಲ ಉದಯೋನ್ಮುಖರು ಸೇರಿ ನಿರ್ಮಿಸಿರುವ ‘ಪಪ್ಪಿ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಗುಳೆ ಬರುವ ಕುಟುಂಬ. ಆ ಕುಟುಂಬದ ಬಾಲಕನಿಗೆ ಸಿಗುವ ನಾಯಿ. ಆ ನಾಯಿಯ ಹಿಂದಿನ ಕತೆ ಹೀಗೊಂದು ಆಸಕ್ತಿಕರ ಕತೆ ಸಿನಿಮಾನಲ್ಲಿದೆ. ಈ ಸಿನಿಮಾ ಪ್ರೈಂ ವಿಡಿಯೋನಲ್ಲಿ ಲಭ್ಯವಿದೆ.

4 / 7
ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವೆಬ್ ಸರಣಿಗಳಲ್ಲಿ ಸ್ಕ್ವಿಡ್ ಗೇಮ್ಸ್ ಸಹ ಒಂದು. ಇದೀಗ ಇದೇ ವೆಬ್ ಸರಣಿಯ ಮೂರನೇ ಹಾಗೂ ಕೊನೆಯ ಸೀಸನ್ ಬಿಡುಗಡೆ ಆಗಿದೆ. ನೆಟ್​ಫ್ಲಿಕ್ಸ್​​ನಲ್ಲಿ ‘ಸ್ಕ್ವಿಡ್ ಗೇಮ್ಸ್ ಸೀಸನ್ 3’ ಇದೇ ವಾರದಿಂದ ಸ್ಟ್ರೀಮಿಂಗ್ ಆರಂಭಿಸಿದೆ.

5 / 7
ತೆಲುಗಿನಲ್ಲಿ ಇತ್ತೀಚೆಗೆ ವೆಬ್ ಸರಣಿಗಳು ಹಿಟ್ ಆಗುತ್ತಿವೆ. ಇದೀಗ ‘ವಿರಾಟಪಾಲೆಂ: ಪಿಸಿ ಮೀನಾ ರಿಪೋರ್ಟಿಂಗ್’ ಹೆಸರಿನ ವೆಬ್ ಸರಣಿ ಬಿಡುಗಡೆ ಆಗಿದೆ. ಹಾರರ್ ಮತ್ತು ಕ್ರೈಂ ಒಳಗೊಂಡಿರುವ ಈ ವೆಬ್ ಸರಣಿ ಜೀ5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.

6 / 7
ಅಜಯ್ ದೇವಗನ್ ನಟನೆಯ ಬ್ಲಾಕ್ ಬಸ್ಟರ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ರೈಡ್’ ಈ ಸಿನಿಮಾದ ಎರಡನೇ ಭಾಗ ‘ರೈಡ್ 2’ ಕೆಲ ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಯ್ತು. ರಿತೇಶ್ ದೇಶ್​ಮುಖ್, ಅಜಯ್ ದೇವಗನ್ ನಟನೆಯ ಈ ಸಿನಿಮಾ ನೆಟ್​ಫ್ಲಿಕ್ಸ್​​ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

7 / 7
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ

ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು

‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು

ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!

ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!

ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ

ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ

ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ

ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ

ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!