ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್; ವಿಡಿಯೋ ನೋಡಿ
Team India's Fun Side: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ತಯಾರಿಯಲ್ಲಿರುವ ಟೀಮ್ ಇಂಡಿಯಾ ಆಟಗಾರರು ಅಭ್ಯಾಸದ ವೇಳೆ ತಮಾಷೆಯ ಘಟನೆಯಲ್ಲಿ ಭಾಗಿಯಾಗಿದ್ದಾರೆ. ವೇಗದ ಬೌಲರ್‌ಗಳಾದ ಅರ್ಷದೀಪ್ ಸಿಂಗ್ ಮತ್ತು ಆಕಾಶ್ ದೀಪ್, ತಂಡದ ಬೌಲಿಂಗ್ ಕೋಚ್ ಮೋರ್ನೆ ಮಾರ್ಕೆಲ್ ಅವರೊಂದಿಗೆ WWE ಶೈಲಿಯ ಕುಸ್ತಿಯಾಡಿದ್ದಾರೆ. ಈ ತಮಾಷೆಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಜುಲೈ 2 ರಿಂದ 6 ರವರೆಗೆ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಸೋಲನ್ನು ಎದುರಿಸಿರುವ ಟೀಂ ಇಂಡಿಯಾ ಮತ್ತೆ ಗೆಲುವಿನ ಲಯಕ್ಕೆ ಮರಳುವತ್ತ ಗಮನಹರಿಸುತ್ತಿದೆ. ಇದಕ್ಕಾಗಿ ತಂಡದ ಆಟಗಾರರು ಕೂಡ ಕೆಲವು ದಿನಗಳಿಂದ ಮೈದಾನದಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಈ ಸಿದ್ಧತೆಗಳ ನಡುವೆ ಒಂದು ತಮಾಷೆಯ ಘಟನೆ ಎಲ್ಲರ ಗಮನ ಸೆಳೆದಿದ್ದು, ಇದರಲ್ಲಿ ತಂಡದ ಇಬ್ಬರು ಆಟಗಾರರು ತಂಡದ ಬೌಲಿಂಗ್ ಕೋಚ್ ಜೊತೆ ಕುಸ್ತಿಯಾಡಿ ಸೋತಿದ್ದಾರೆ.
ಅಭ್ಯಾಸ ಅವಧಿಯಲ್ಲಿ WWE ಫೈಟ್
ಇಂಗ್ಲೆಂಡ್ ತಂಡದ ಎರಡನೇ ಟೆಸ್ಟ್ನಲ್ಲಿ ಮಣಿಸುವ ಸಲುವಾಗಿ ಟೀಂ ಇಂಡಿಯಾ ಆಟಗಾರರು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ವೇಳೆ ತಂಡದ ವೇಗದ ಬೌಲರ್‌ಗಳಾದ ಅರ್ಷದೀಪ್ ಸಿಂಗ್ ಮತ್ತು ಆಕಾಶ್ ದೀಪ್ ಅವರು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮೋರ್ನೆ ಮಾರ್ಕೆಲ್ ಅವರೊಂದಿಗೆ WWE ಫೈಟ್ ಆಡಿದ್ದಾರೆ. ಆದರೆ ಮಾರ್ಕೆಲ್ ವಿರುದ್ಧ ಮೇಲುಗೈ ಸಾಧಿಸಲು ಅರ್ಷದೀಪ್ಗೆ ಸಾಧ್ಯವಾಗಿಲ್ಲ. ತಮಾಷೆಯಿಂದ ಕೂಡಿದ್ದ ಈ WWE ಫೈಟ್ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ