AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಡೆಂಟರಿ ಜೀವನಶೈಲಿ ಮತ್ತು ಒತ್ತಡ ಹೃದಯಾಘಾತಗಳಿಗೆ ಕಾರಣವಾಗುತ್ತಿವೆ: ಡಾ ಕೆಎಸ್ ಸದಾನಂದ, ಹೃದ್ರೋಗ ತಜ್ಞ

ಸೆಡೆಂಟರಿ ಜೀವನಶೈಲಿ ಮತ್ತು ಒತ್ತಡ ಹೃದಯಾಘಾತಗಳಿಗೆ ಕಾರಣವಾಗುತ್ತಿವೆ: ಡಾ ಕೆಎಸ್ ಸದಾನಂದ, ಹೃದ್ರೋಗ ತಜ್ಞ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 28, 2025 | 8:29 PM

Share

ಮೊಬೈಲ್ ಬಳಕೆಯ ಸಮಯವನ್ನು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅದು ನಿಸ್ಸಂದೇಹವಾಗಿ ಒತ್ತಡವನ್ನು ಕಡಿಮೆ ಮಾಡುತ್ತದೆ, ಯುವಕ ಯುವತಿಯರಲ್ಲಿ ಹೃದಯಾಘಾತ ಉಂಟಾಗುತ್ತಿರುವುದಕ್ಕೆ ಧೂಮಪಾನ ಮತ್ತು ಡ್ರಗ್ಸ್​ ಸೇವನೆ ಕಾರಣವಾಗಿರುವ ಸಾಧ್ಯತೆ ಇದೆ. ಸೆಡೆಂಟರಿ ಜೀವನ ಶೈಲಿ ಅಳವಡಿಸಿಕೊಂಡವರು ಅದರಿಂದ ಹೊರಬಂದು ಅರೋಗ್ಯಕರ ಜೀವನ ಶೈಲಿ ತಮ್ಮದಾಗಿಸಿಕೊಳ್ಳಬೇಕು ಎಂದು ಡಾ ಸದಾನಂದ ಹೇಳುತ್ತಾರೆ.

ಮೈಸೂರು, ಜೂನ್ 28: ಚಿಕ್ಕ ವಯಸ್ಸಿನವರು ಹೃದಯಾಘಾತಗಳಿಗೆ (heart attacks) ಬಲಿಯಾಗುತ್ತಿರುವ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಇದಕ್ಕೆ ಕಾರಣಗಳನ್ನು ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞ ಮತ್ತು ಅಧೀಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ ಕೆಎಸ್ ಸದಾನಂದ (Dr KS Sadananda) ವಿವರಿಸಿದ್ದಾರೆ. ಅವರು ಹೇಳುವ ಪ್ರಕಾರ ಇತ್ತೀಚಿನ ವರ್ಷಗಳ ಹೃದಯಾಘಾತಗಳ ಪ್ರಮಾಣ ಗಮನಿಸಿದರೆ ಶೇಕಡ 50 ರಷ್ಟು ಜನ 50ಕ್ಕಿತ ಕಡಿಮೆ ವಯಸ್ಸಿನವರಾಗಿರುತ್ತಾರೆ ಮತ್ತು ಇವರಲ್ಲಿ ಶೇಕಡ 40ರಷ್ಟು ಜನ 40ಕ್ಕಿಂತ ಕಡಿಮೆ ವಯಸ್ಸಿನವರು! ಮಧುಮೇಹ, ಅಧಿಕ ರಕ್ತದೊತ್ತಡ, ಕೊಬ್ಬಿನಾಂಶ ಹೆಚ್ಚಾಗಿರೋದು, ಒತ್ತಡ ಮೊದಲಾದವು ಹೃದ್ರೋಗಗಳಿಗೆ ಮತ್ತು ಹೃದಯಾಘಾತಗಳಿಗೆ ಕಾರಣವಾಗಿವೆ. ಮೊಬೈಲ್ ಬಳಕೆಯಿಂದ ದೇಹಕ್ಕೆ ಅವಶ್ಯವಿರುವ ವ್ಯಾಯಾಮ ಸಿಗುತ್ತಿಲ್ಲ, ಆನಾರೋಗ್ಯ ತಂಡೊಡ್ಡುವ ಆಹಾರಗಳನ್ನು ತರಿಸಿಕೊಳ್ಳುವುದು ಬಹಳ ಸುಲಭವಾಗಿರುವುದರಿಂದ ಅದು ಹೃದಯದ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದೆ ಎಂದು ಡಾ ಸದಾನಂದ ಹೇಳುತ್ತಾರೆ.

ಇದನ್ನೂ ಓದಿ: ಯುವಕರ ಹಠಾತ್ ಹೃದಯಾಘಾತ: ಸರ್ಕಾರ ನೇಮಿಸಿದ ಸಮಿತಿ ವರದಿಯಲ್ಲಿ ಆತಂಕಕಾರಿ ಅಂಶ ಬಯಲು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ