ಜುಲೈ 2ರಂದು ಸಚಿವ ಸಂಪುಟ ಸಭೆ: ಜೂನ್ 30ರಿಂದ ಜುಲೈ 3ರವರೆಗೆ ನಂದಿ ಗಿರಿಧಾಮಕ್ಕೆ ಪ್ರವಾಸಿಗರಿಗೆ ಪ್ರವೇಶವಿಲ್ಲ
ನಂದಿ ಗಿರಿಧಾಮದ ಜೊತೆಗೆ ಸ್ಕಂದಗಿರಿಯಲ್ಲೂ ಚಾರಣಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಮತ್ತು ಕೆಳಭಾಗದಲ್ಲಿರುವ ಬಹುನಂದೀಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಕೆಲ ಸಚಿವರು ದೇವರ ದರ್ಶನಕ್ಕಾಗಿ ಅಗಮಿಸಲಿರುವುದರಿಂದ ಜುಲೈ 2ರಂದು ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಭಕ್ತರ ಭೇಟಿಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಚಿಕ್ಕಬಳ್ಳಾಪುರ, ಜೂನ್ 28: ಸಿದ್ದರಾಮಯ್ಯ ಸರ್ಕಾರ ಜುಲೈ 2ರಂದು ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ನಡೆಸಲಿರುವುದರಿಂದ ಜೂನ್ 30 ಸಾಯಂಕಾಲ 6 ಗಂಟೆಯಿಂದ ಜುಲೈ 3 ಮಧ್ಯಾಹ್ನ 3 ಗಂಟೆಯವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಜಿಲ್ಲಾಧಿಕಾರಿ ಪಿಎನ್ ರವೀಂದ್ರ, ನಂದಿ ಹಿಲ್ಸ್ ಗೆ ಸಿಂಗಲ್ ರಸ್ತೆ ಇರೋದ್ರಿಂದ ಮತ್ತು ಸಭೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿರುವುದರಿಂದ ಪ್ರವಾಸಿಗರನ್ನು ನಿರ್ಬಂಧಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಸಿದ್ಧತೆಯ ಭಾಗವಾಗಿ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ರಸ್ತೆಗಳನ್ನು ದುರಸ್ತಿ ಮಾಡಿಸುವ ಕಾರ್ಯದಲ್ಲಿ ತೊಡಗಿರುವುದನ್ನು ನೋಡಬಹುದು.
ಇದನ್ನೂ ಓದಿ: ಪ್ರವಾಸಿತಾಣ ನಂದಿಗಿರಿಧಾಮ 1 ತಿಂಗಳು ಬಂದ್: ವೀಕೆಂಡ್ನಲ್ಲಿ ಮಾತ್ರ ಓಪನ್..!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ