AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂನ್​ 19 ರಂದು ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ

ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗಿರಿಧಾಮ ಬೆಳ್ಳಿ ಮೋಡಗಳ ನಿನಾದ, ಗಿಡ, ಮರ, ಬಳ್ಳಿಗಳ ಸೊಬಗು, ತುಂತುರು ಮಳೆ, ಮಂಜಿಗೆ ಖ್ಯಾತಿ ಪಡೆದಿದೆ. ನಂದಿ ಗಿರಿಧಾಮ ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಸುಂದರ ಪ್ರಕೃತಿಧಾಮ. ಇಲ್ಲಿಗೆ ಹೋಗಿ ಕೆಲಕಾಲ ವಿಹಾರ ಮಾಡಿದರೆ ಅದೇನೋ ಮನಸ್ಸಿಗೆ ಹಿತ. ಇಂತಹ ಸುಂದರ ಪ್ರಕೃತಿ ಗಿರಿಧಾಮದಲ್ಲಿ ಜೂನ್​. 19 ರಂದು ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಜೂನ್​ 19 ರಂದು ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ
ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ವಿವೇಕ ಬಿರಾದಾರ|

Updated on:Jun 03, 2025 | 8:47 PM

Share

ಚಿಕ್ಕಬಳ್ಳಾಪುರ, ಜೂನ್​ 03: ಚಿಕ್ಕಬಳ್ಳಾಪುರ (Chikkballapur) ತಾಲೂಕಿನ ನಂದಿ ಗಿರಿಧಾಮದಲ್ಲಿ (Nandi Hills) ಜೂನ್​ 19 ರಂದು ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಎಂ.ಸಿ.ಸುಧಾಕರ್​ಗೆ ತಿಳಿಸಿದ್ದು, ಗಿರಿಧಾಮದಲ್ಲಿ ಬರದ ಸಿದ್ದತೆಗಳು ನಡೆಯುತ್ತಿವೆ.

ನಂದಿ ಗಿರಿಧಾಮದ ಸುತ್ತಮುತ್ತ ಭೌಗೋಳಿಕ ವಿಸ್ತೀರ್ಣ ಹಂಚಿಕೊಂಡಿರುವ ಬಯಲುಸೀಮೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸಚಿವ ಸಂಪುಟ ಸಭೆ ವರದಾನವಾಗುವ ನಿರೀಕ್ಷೆಯಿದೆ. ತ್ರಿವಳಿ ಜಿಲ್ಲೆಗಳ ಸಮಸ್ಯೆಗಳು, ಮೂಲಭೂತ ಸಮಸ್ಯೆಗಳು, ವಿಶೇಷ ಪ್ಯಾಕೇಜ್‍ಗಳನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ. ಮೂರು ಜಿಲ್ಲೆಗಳ ಶಾಸಕರು, ತಮ್ಮ-ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಕ್ಷೇತ್ರಗಳ ಬಗ್ಗೆ ಪಟ್ಟಿ ತಯಾರಿ ಮಾಡಿಕೊಂಡು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಸನ್ನದ್ಧರಾಗಿದ್ದಾರೆ.

1986ರಲ್ಲಿ ನಂದಿ ಗಿರಿಧಾಮದಲ್ಲಿ ಎರಡನೇ ಸಾರ್ಕ್ ಶೃಂಗ ಸಮ್ಮೇಳನ ನಡೆದಿತ್ತು. ಮಹಾತ್ಮ ಗಾಂಧಿಜಿ, ಜವಾಹರಲಾಲ್ ನೆಹರು ಸೇರಿದಂತೆ ವಿಶ್ವದ ಖ್ಯಾತನಾಮರು ನಂದಿ ಗಿರಿಧಾಮದ ಪ್ರಕೃತಿಗೆ ಮನಸೋತಿದ್ದರು. ಈಗ ಸ್ವತಃ ರಾಜ್ಯ ಸರ್ಕಾರ ನಂದಿ ಗಿರಿಧಾಮದ ಪ್ರಕೃತಿ ಸೊಬಗಿನತ್ತ ಚಿತ್ತಹರಿಸಿದ್ದು, ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿರುವುದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ.

ಇದನ್ನೂ ಓದಿ
Image
ಗರ್ಭಿಣಿ ಪ್ರೇಯಸಿ ಜತೆ ಸೇರಿ ಪ್ರಿಯಕರನಿಂದ ಕಳ್ಳತನ, ಪೊಲೀಸ್ ಬಲೆಗೆ ಲವರ್ಸ್
Image
ನಾಪತ್ತೆಯಾಗಿದ್ದ ಬಾಲಕಿಯರು ಪತ್ತೆ: ವಾರ್ಡನ್ ಅಸಲಿ ಮುಖ ಬಿಚ್ಚಿಟ್ಟ ಮಕ್ಕಳು
Image
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
Image
ಪ್ರೀತಿಸುತ್ತಿದ್ದ ಮಾವನ ಮಗಳ ಜೊತೆ ಮದ್ವೆಗೆ ನಕಾರ: ಯುವಕ ಆತ್ಮಹತ್ಯೆ!

ಇದನ್ನೂ ಓದಿ: ಮಸೀದಿ ಕೊಠಡಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಮೌಲ್ವಿ ತಂದೆಯಿಂದಲೇ ಕೃತ್ಯ

ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ

ಇದೇ ವರ್ಷ ಏಪ್ರಿಲ್ 24 ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕರ್ನಾಟಕ ಸಚಿವ ಸಂಪುಟ ಸಭೆ ನಡೆದಿತ್ತು. ಕಳೆದ ವರ್ಷ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:49 pm, Tue, 3 June 25