ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕಪ್ಕೋಟ್, ಲೋಹರ್ಖೇಟ್, ಶಮಾ, ಸೌಂಗ್ ಸೇರಿದಂತೆ ದಾನಪುರದಲ್ಲಿ ರಾತ್ರಿಯಿಡೀ ಸುರಿದ ಭಾರಿ ಮಳೆಯ ನಂತರ ಉತ್ತರಾಖಂಡದ ಬಾಗೇಶ್ವರದಲ್ಲಿ ಸರಯೂ ನದಿ ಭೋರ್ಗರೆಯುತ್ತಾ ಹರಿಯುತ್ತಿದ್ದು, ಹಲವು ಕಟ್ಟಡಗಳು ಮುಳುಗಿವೆ. ಉತ್ತರಾಖಂಡದಲ್ಲಿ ಧಾರಾಕಾರ ಮಳೆಯಿಂದಾಗಿ ಚಾರ್ ಧಾಮ್ ಯಾತ್ರೆಗೆ ಅಡ್ಡಿ ಉಂಟಾಗಿದೆ. ಭೂಕುಸಿತಗಳು ಮತ್ತು ಬಂಡೆಗಳು ಬೀಳುವುದರಿಂದ ಕೇದಾರನಾಥ ಮತ್ತು ಬದರಿನಾಥದ ಪ್ರಮುಖ ಮಾರ್ಗಗಳು ಮುಚ್ಚಿಹೋಗಿವೆ. ಇದರಿಂದಾಗಿ ನೂರಾರು ಯಾತ್ರಿಕರು ಸಿಲುಕಿಕೊಂಡಿದ್ದಾರೆ. ಭೂಕುಸಿತದಿಂದಾಗಿ ಕೇದಾರನಾಥ-ಸೋನ್‌ಪ್ರಯಾಗ ಯಾತ್ರೆ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.
ಉತ್ತರಾಖಂಡ, ಜೂನ್ 28: ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕಪ್ಕೋಟ್, ಲೋಹರ್ಖೇಟ್, ಶಮಾ, ಸೌಂಗ್ ಸೇರಿದಂತೆ ದಾನಪುರದಲ್ಲಿ ರಾತ್ರಿಯಿಡೀ ಸುರಿದ ಭಾರಿ ಮಳೆಯ ನಂತರ ಉತ್ತರಾಖಂಡದ ಬಾಗೇಶ್ವರದಲ್ಲಿ ಸರಯೂ ನದಿ ಭೋರ್ಗರೆಯುತ್ತಾ ಹರಿಯುತ್ತಿದ್ದು, ಹಲವು ಕಟ್ಟಡಗಳು ಮುಳುಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jun 28, 2025 10:41 PM
Latest Videos