IND vs ENG: ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಸ್ಮೃತಿ ಮಂಧಾನ
Smriti Mandhana's T20 Century: ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸ್ಮೃತಿ ಮಂಧಾನ ಚೊಚ್ಚಲ ಟಿ20 ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. 51 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ ಅವರು 17 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ಈ ಶತಕದೊಂದಿಗೆ ಅವರು ಮೂರು ಸ್ವರೂಪಗಳಲ್ಲೂ ಶತಕ ಬಾರಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.

ಇಂಗ್ಲೆಂಡ್ ಹಾಗೂ ಭಾರತ ಮಹಿಳಾ (India Women vs England Women) ತಂಡಗಳ ನಡುವೆ ಇಂದಿನಿಂದ ಆರಂಭವಾಗಿರುವ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಚೊಚ್ಚಲ ಅಂತರರಾಷ್ಟ್ರೀಯ ಟಿ20 ಶತಕ ಬಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ವಾಸ್ತವವಾಗಿ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಖಾಯಂ ನಾಯಕಿ ಹರ್ಮನ್‌ಪ್ರೀತ್ ಕೌರ್ ಆಡುತ್ತಿಲ್ಲ. ಅವರ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವಹಿಸಿಕೊಂಡಿರುವ ಸ್ಮೃತಿ ಮಂಧಾನ ಜವಬ್ದಾರಿಯುತ ಬ್ಯಾಟಿಂಗ್ ಮಾಡಿದಲ್ಲದೆ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದಿದ್ದಾರೆ. ವೈಯಕ್ತಿಕವಾಗಿ ಶತಕ ಸಿಡಿಸಿದಲ್ಲದೆ ಸ್ಮೃತಿ ಈ ಶತಕದ ಮೂಲಕ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಇಂಗ್ಲೆಂಡ್‌ನಲ್ಲಿ ಇತಿಹಾಸ ನಿರ್ಮಿಸಿದ ಸ್ಮೃತಿ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಸ್ಮೃತಿ ಮಂಧಾನ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಪ್ರತಿಯೊಬ್ಬ ಇಂಗ್ಲೆಂಡ್ ಬೌಲರ್‌ಗೂ ಪಾಠ ಕಲಿಸಿದರು. ಕೇವಲ 27 ಎಸೆತಗಳಲ್ಲಿ 50 ರನ್‌ಗಳ ಗಡಿ ತಲುಪಿದ ಸ್ಮೃತಿ, ಅರ್ಧಶತಕದ ನಂತರ ವೇಗವಾಗಿ ರನ್ ಗಳಿಸಿ 51 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ ಸ್ಮೃತಿ 14 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು.
1️⃣1️⃣2️⃣ runs 6️⃣2️⃣ deliveries 1️⃣5️⃣ fours 3️⃣ sixes
An innings of the highest calibre from Captain Smriti Mandhana 👏
Scorecard ▶️ https://t.co/iZwkYt8agO#TeamIndia | #ENGvIND | @mandhana_smriti pic.twitter.com/ZkiIErL1kI
— BCCI Women (@BCCIWomen) June 28, 2025
ಈ ಶತಕದೊಂದಿಗೆ ಸ್ಮೃತಿ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ಭಾರತದ ಎರಡನೇ ಮಹಿಳಾ ಬ್ಯಾಟರ್ ಎಂಬ ದಾಖಲೆಯನ್ನು ಬರೆದರು. ಸ್ಮೃತಿಗೂ ಮೊದಲು ಈ ಸಾಧನೆಯನ್ನು ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಾಡಿದ್ದರು. ಹರ್ಮನ್‌ಪ್ರೀತ್ ಕೌರ್ ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ 15 ಬೌಂಡರಿಗಳನ್ನು ಬಾರಿಸಿದ್ದರೆ, ಸ್ಮೃತಿ ಮಂಧಾನ 17 ಬೌಂಡರಿಗಳನ್ನು ಬಾರಿಸುವ ಮೂಲಕ ಶತಕದ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳ ವಿಷಯದಲ್ಲಿ ಹರ್ಮನ್‌ಪ್ರೀತ್ ಅವರನ್ನು ಹಿಂದಿಕ್ಕಿದರು.
210 ರನ್ ಕಲೆಹಾಕಿದ ಭಾರತ
ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಒಟ್ಟು 62 ಎಸೆತಗಳನ್ನು ಎದುರಿಸಿ 180.64 ಸ್ಟ್ರೈಕ್ ರೇಟ್‌ನಲ್ಲಿ 112 ರನ್ ಗಳಿಸಿದರು. ಸ್ಮೃತಿ ಅವರ ಇನ್ನಿಂಗ್ಸ್‌ನಿಂದಾಗಿ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 210 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಮಂಧಾನ ಜೊತೆಗೆ, ಹರ್ಲೀನ್ ಡಿಯೋಲ್ ಕೂಡ ಸ್ಫೋಟಕ ಇನ್ನಿಂಗ್ಸ್ ಆಡಿ 23 ಎಸೆತಗಳಲ್ಲಿ 186.95 ಸ್ಟ್ರೈಕ್ ರೇಟ್‌ನಲ್ಲಿ 7 ಬೌಂಡರಿಗಳ ಸಹಿತ 43 ರನ್ ಕಲೆಹಾಕಿದರು.
IND vs ENG: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ; ಮೊದಲ ಪಂದ್ಯದಿಂದ ಹರ್ಮನ್‌ಪ್ರೀತ್ ಔಟ್
ಮೂರು ಮಾದರಿಯಲ್ಲೂ ಶತಕ
ಈ ಶತಕದೊಂದಿಗೆ, ಸ್ಮೃತಿ ಮಂಧಾನ ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಿದ್ದು, ಮೂರು ಸ್ವರೂಪಗಳಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರಿಗಿಂತ ಮೊದಲು, ಯಾವುದೇ ಭಾರತೀಯ ಮಹಿಳಾ ಆಟಗಾರ್ತಿ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಟಿ20ಐ ಹೊರತುಪಡಿಸಿ, ಸ್ಮೃತಿ ಟೆಸ್ಟ್‌ನಲ್ಲಿ 2 ಶತಕಗಳು ಮತ್ತು ಏಕದಿನದಲ್ಲಿ 11 ಶತಕಗಳನ್ನು ಸಿಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:14 pm, Sat, 28 June 25
