
ಅಮೇರಿಕಾದ ಹಾಸಿಗೆ ತಯಾರಿಸುವ ಕಂಪನಿಯೊಂದು ನಡೆಸಿದ ಅಧ್ಯಯನದ ಪ್ರಕಾರ ಒಂದು ವಾರದವರೆಗೆ ತೊಳೆಯದೆ ಇರುವ ದಿಂಬು ಕವರ್ಗಳು ನಿಮ್ಮ ಮನೆಯ ಟಾಯ್ಲೆಟ್ ಸೀಟ್ನಲ್ಲಿ ಉಳಿದುಕೊಳ್ಳುವ ಬ್ಯಾಕ್ಟೀರಿಯಾಗಳಿಗಿಂತ 17 ಸಾವಿರ ಪಟ್ಟು ಹೆಚ್ಚು ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.

ಫೋನ್: ಸೋಂಕು ಹರಡುವ ಪಟ್ಟಿಯಲ್ಲಿ ಫೋನ್ ಅಗ್ರಸ್ಥಾನದಲ್ಲಿದೆ. ವಿವಿಧ ಅಧ್ಯಯನಗಳ ಪ್ರಕಾರ ನಿಮ್ಮ ಸ್ಮಾರ್ಟ್‌ಫೋನ್ ಟಾಯ್ಲೆಟ್ ಸೀಟ್‌ಗಿಂತ ಸರಾಸರಿ 10 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳಿಗೆ ನೆಲೆಯಾಗಿದೆ.

ಕೀಬೋರ್ಡ್: ಕೆಲಸದ ಅವಧಿಗಳಲ್ಲಿ ನೀವು ಆಗಾಗ್ಗೆ ಸ್ಪರ್ಶಿಸುವ ಮತ್ತೊಂದು ಸೂಕ್ಷ್ಮ ವಸ್ತು ಕೀಬೋರ್ಡ್. ಅರಿಝೋನಾ ವಿಶ್ವವಿದ್ಯಾಲಯದ ಅಧ್ಯಯನವು ಸರಾಸರಿ ಕೀಬೋರ್ಡ್ ಪ್ರತಿ ಚದರ ಇಂಚಿಗೆ 3,000 ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ.

ರಿಮೋಟ್ : ಹೂಸ್ಟನ್ ವಿಶ್ವವಿದ್ಯಾಲಯದ ಅಧ್ಯಯನವು ಸರಾಸರಿ ರಿಮೋಟ್ ಕಂಟ್ರೋಲ್ ಪ್ರತಿ ಚದರ ಇಂಚಿಗೆ 200 ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ. ಇದು ಆಗಾಗ್ಗೆ ಸ್ಪರ್ಶಿಸಲ್ಪಡುತ್ತದೆ ಮತ್ತು ಅಷ್ಟೇನೂ ಸ್ವಚ್ಛವಾಗಿರುವುದಿಲ್ಲ.

ನೀರಿನ ನಲ್ಲಿ: ನೀವು ನಿಮ್ಮ ಕೈಗಳನ್ನು ತೊಳೆದ ನಂತರ ಸೋಪ್ ಅಥವಾ ಹ್ಯಾಂಡ್ ವಾಶ್ನಿಂದ ಟ್ಯಾಪ್ ಅನ್ನು ಸ್ವಲ್ಪ ಸ್ವಚ್ಛಗೊಳಿಸಿ. ಮನೆಯ ಎಲ್ಲರೂ ಇದನ್ನು ಸ್ವರ್ಶಿಸುವುದರಿಂದ ನೈರ್ಮಲ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ.

ರೆಫ್ರಿಜರೇಟರ್ ಡೋರ್: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಡೇವಿಸ್ ನಡೆಸಿದ ಅಧ್ಯಯನವು ಸರಾಸರಿ ರೆಫ್ರಿಜರೇಟರ್ ಬಾಗಿಲು ಪ್ರತಿ ಚದರ ಇಂಚಿಗೆ 500 ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ.

ಮೌಸ್: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಅಧ್ಯಯನವು ಸರಾಸರಿ ಮೌಸ್ ಪ್ರತಿ ಚದರ ಇಂಚಿಗೆ 1,500 ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ.