- Kannada News Photo gallery Gruha Jyothi Scheme: Over 85 lakh applications received for Gruha Jyoti Scheme
Gruha Jyothi Scheme: ಗೃಹ ಜ್ಯೋತಿ ಯೋಜನೆಗೆ ಹರಿದು ಬಂತು 85 ಲಕ್ಷಕ್ಕೂ ಹೆಚ್ಚು ಅರ್ಜಿಗಳು!
ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ರಾಜ್ಯದಲ್ಲಿ ದಿನ ಕಳೆದಂತೆ ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿವೆ. ಕಳೆದ ಕೆಲ ದಿನಗಳಲ್ಲಿ 85, 91,005 ಗ್ರಾಹಕರು ನೋಂದಾಣಿಸಿಕೊಂಡಿದ್ದಾರೆ. ಆ ಮೂಲಕ ಗೃಹ ಜ್ಯೋತಿ ಯೋಜನೆಗೆ ಸಾರ್ವಜನಿಕರಿಂದ ಭಾರೀ ಸ್ಪಂದನೆ ದೊರೆತಿದೆ.
Updated on: Jun 30, 2023 | 7:22 PM

ಗೃಹ ಜ್ಯೋತಿ ಯೋಜನೆಗೆ ರಾಜ್ಯದಲ್ಲಿ ದಿನ ಕಳೆದಂತೆ ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿದ್ದು, ಕಳೆದ ಕೆಲ ದಿನಗಳಲ್ಲಿ 85, 91,005 ಗ್ರಾಹಕರು ನೋಂದಣಿ ಮಾಡಿಕೊಂಡಿಕೊಂಡಿದ್ದಾರೆ. ಆ ಮೂಲಕ ಗೃಹ ಜ್ಯೋತಿ ಯೋಜನೆಗೆ ಸಾರ್ವಜನಿಕರಿಂದ ಭಾರೀ ಸ್ಪಂದನೆ ದೊರೆತಿದೆ.

ಜೂನ್ 30 ಶುಕ್ರವಾರ ಒಂದೇ ದಿನ ಸಂಜೆ 6 ಗಂಟೆಯವರೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 1,52,532 ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.

ಸೆಸ್ಕ್ ವ್ಯಾಪ್ತಿಯಲ್ಲಿ ಇಂದು ಒಂದೇ ದಿನಕ್ಕೆ 58,354 ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಅದೇ ರೀತಿಯಾಗಿ ಜೆಸ್ಕಾಂ ವ್ಯಾಪ್ತಿಯಲ್ಲಿ 40932 ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.

ಹೆಸ್ಕಾಂ ವ್ಯಾಪ್ತಿಯಲ್ಲಿ ಜೂನ್ 18 ರಿಂದ ಇಲ್ಲಿಯವರೆಗೂ ಒಟ್ಟು 1779148 ಗ್ರಾಹಕರು ನೋಂದಾಯಿಸಿಕೊಂಡಿದ್ದು, ಹುಕ್ಕೇರಿ (HRECS) ವ್ಯಾಪ್ಯಿಯಲ್ಲಿ ಗೃಹ ಜ್ಯೋತಿ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೂ 41380 ಜನರು ನೋಂದಾಯಿಸಿದ್ದಾರೆ.

ಮೆಸ್ಕಾಂ ವ್ಯಾಪ್ತಿಯಲ್ಲಿ ಒಂದೇ ದಿನಕ್ಕೆ 50125 ಸೇರಿದಂತೆ ರಾಜ್ಯದ್ಯಂತ ಒಟ್ಟು 85, 91,005 ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.




