South Indian Hero: ಸಿನಿಪ್ರಿಯರಿಗೆ ‘ಸೌತ್​ ಇಂಡಿಯನ್​ ಹೀರೋ’ ಬಗ್ಗೆ ಯಾಕಿಷ್ಟು ಕುತೂಹಲ? ಇಲ್ಲಿದೆ ಉತ್ತರ..

Updated on: Feb 20, 2023 | 8:16 PM

New Kannada Movie: ಫೆಬ್ರವರಿ 24ರಂದು ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾ ರಿಲೀಸ್​ ಆಗುತ್ತಿದೆ. ಈ ಚಿತ್ರಕ್ಕೆ ನರೇಶ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಟ್ರೇಲರ್​ ಮೂಲಕ ಈ ಸಿನಿಮಾ ಗಮನ ಸೆಳೆದಿದೆ.

1 / 5
ಕಾಮಿಡಿ ಶೈಲಿಯ ಸಿನಿಮಾಗಳನ್ನು ಕಟ್ಟಿಕೊಡುವಲ್ಲಿ ನಿರ್ದೇಶಕ ನರೇಶ್​ ಕುಮಾರ್​ ಫೇಮಸ್​. ಈ ಹಿಂದೆ ಅವರು ‘ಫಸ್ಟ್​ ರ‍್ಯಾಂಕ್ ರಾಜು’ ಹಾಗೂ ‘ರಾಜು ಕನ್ನಡ ಮೀಡಿಯಂ’ ಚಿತ್ರಗಳ ಮೂಲಕ ಗಮನ ಸೆಳೆದಿದ್ದರು. ಈಗ ‘ಸೌತ್​ ಇಂಡಿಯನ್​ ಹೀರೋ’ ಚಿತ್ರಕ್ಕೆ ಆ್ಯಕ್ಷನ್​-ಕಟ್ ಹೇಳಿದ್ದಾರೆ.

ಕಾಮಿಡಿ ಶೈಲಿಯ ಸಿನಿಮಾಗಳನ್ನು ಕಟ್ಟಿಕೊಡುವಲ್ಲಿ ನಿರ್ದೇಶಕ ನರೇಶ್​ ಕುಮಾರ್​ ಫೇಮಸ್​. ಈ ಹಿಂದೆ ಅವರು ‘ಫಸ್ಟ್​ ರ‍್ಯಾಂಕ್ ರಾಜು’ ಹಾಗೂ ‘ರಾಜು ಕನ್ನಡ ಮೀಡಿಯಂ’ ಚಿತ್ರಗಳ ಮೂಲಕ ಗಮನ ಸೆಳೆದಿದ್ದರು. ಈಗ ‘ಸೌತ್​ ಇಂಡಿಯನ್​ ಹೀರೋ’ ಚಿತ್ರಕ್ಕೆ ಆ್ಯಕ್ಷನ್​-ಕಟ್ ಹೇಳಿದ್ದಾರೆ.

2 / 5

ಶೀರ್ಷಿಕೆಯಿಂದಲೇ ಸದ್ದು ಮಾಡಿದ ಸಿನಿಮಾ ‘ಸೌತ್​ ಇಂಡಿಯನ್​ ಹೀರೋ’. ಎಲ್ಲ ಸಿನಿಪ್ರಿಯರಿಗೆ ಈ ಚಿತ್ರದ ಬಗ್ಗೆ ಕೌತುಕ ಇದೆ. ಯಾಕೆಂದರೆ ಈ ಸಿನಿಮಾದೊಳಗೆ ಬಣ್ಣದ ಲೋಕದ ಕಥೆ ಇದೆ. ಸ್ಟಾರ್​ ನಟನ ಕಹಾನಿ ಇದೆ. ಅಭಿಮಾನಿಗಳ ಸ್ಟೋರಿ ಕೂಡ ಇದೆ.

3 / 5

ದಕ್ಷಿಣ ಭಾರತದ ಸಿನಿಮಾಗಳ ಶೈಲಿಯೇ ಬೇರೆ. ಬಾಲಿವುಡ್​, ಹಾಲಿವುಡ್​ ಮಂದಿಗಿಂತಲೂ ಭಿನ್ನವಾಗಿ ಕಥೆ ಹೇಳುವ ಟ್ರೆಂಡ್​ ಸೌತ್​ ಇಂಡಿಯಾದಲ್ಲಿದೆ. ಈ ವಿಚಾರವನ್ನೇ ಇಟ್ಟುಕೊಂಡು ‘ಸೌತ್​ ಇಂಡಿಯನ್​ ಹೀರೋ’ ಚಿತ್ರ ಸಿದ್ಧವಾಗಿದೆ.

4 / 5

ಸಾರ್ಥಕ್​ ಅವರು ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ಈ ಸಿನಿಮಾದಲ್ಲಿ ಹಲವು ಗೆಟಪ್​ ಇದೆ. ಹತ್ತಾರು ರೀತಿಯಲ್ಲಿ ಅವರು ಪ್ರೇಕ್ಷಕರ ಎದುರು ಕಾಣಿಸಿಕೊಳ್ಳಲಿದ್ದಾರೆ. ಈ ಗೆಟಪ್​ಗಳ ಹಿಂದಿನ ಕಥೆ ಏನು ಎಂಬುದನ್ನು ಚಿತ್ರಮಂದಿರದಲ್ಲೇ ನೋಡಿ ತಿಳಿಯಬೇಕು.

5 / 5

ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಶಿಮಾ ನಟಿಸಿದ್ದಾರೆ. ಯೋಗರಾಜ್​ ಭಟ್​ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರರಂಗದ ಒಳಜಗಳ, ಫ್ಯಾನ್ಸ್​ ನಡುವಿನ ಕಿತ್ತಾಟ, ಸಿನಿಮಾ ನಟರ ರಾಜಕೀಯ ಎಂಟ್ರಿ ಸೇರಿದಂತೆ ಹಲವು ವಿಷಯಗಳು ಈ ಚಿತ್ರದಲ್ಲಿವೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us