ದಿವ್ಯಾಂಗ ಆದಿತ್ಯ ಆರ್ ಬೇಲೂರು ಅವರ 7 ವರ್ಷಗಳ ಸತತ ಪರಿಶ್ರಮದಿಂದ ರಚನೆಯಾದ ಪುಸ್ತಕವನ್ನು ಇಂದು ಬಿಡುಗಡೆ ಮಾಡಲಾಯಿತು. ಮೈಸೂರಿನ ರೇಸ್ ಕ್ಲಬ್ ಹೌಸ್‌ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 264 ಪುಟಗಳನ್ನು ಹೊಂದಿರುವ ‘ಯೂ ವಿಲ್ ಆಲ್ ಸೀ’ ಎಂಬ ಶೀರ್ಷಿಕೆಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ, ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ಸಹ ಉಪಸ್ಥಿತರಿದ್ದರು.ನಿರಂಜನ್ ನಿಕ್ಕಂ ಮತ್ತು ಡಾ ಪ್ಯಾಮಿಲಾ ಸನತ್ ಆದಿತ್ಯ ಅವರಿಗೆ ಪುಸ್ತಕ ಬರೆಯಲು ಸಹಕಾರ ನೀಡಿದ್ದಾರೆ. ಜೊತೆಗೆ, ಇಂದಿನ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ. ಮೋತಿ ಪುಸ್ತಕ ಬಿಡುಗಡೆ ಮಾಡಿದರು. ಪುಸ್ತಕ ವಾಸ್ತವ ಹಾಗೂ ಕಾಲ್ಪನಿಕ ವಿಚಾರಗಳನ್ನು ಒಳಗೊಂಡಿದೆ.
Ad
1 / 12
ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ದಿವ್ಯಾಂಗ ಲೇಖಕ ಆದಿತ್ಯ ಬೇಲೂರು
2 / 12
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗಣ್ಯರು
3 / 12
ವಾಸ್ತವ ಹಾಗೂ ಕಾಲ್ಪನಿಕ ವಿಚಾರಗಳನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡಿದ ಗಣ್ಯರು
4 / 12
You'll All See ಪುಸ್ತಕ ಬಿಡುಗಡೆ
5 / 12
7 ವರ್ಷಗಳ ಸತತ ಪರಿಶ್ರಮದಿಂದ ಮೂಡಿದ 264 ಪುಟಗಳ You'll All See ಪುಸ್ತಕ
6 / 12
ವೇದಿಕೆ ಮೇಲೆ ಗಣ್ಯರು
7 / 12
ಕಾರ್ಯಕ್ರಮದಲ್ಲಿ ಲೇಖಕರ ಜೊತೆ ನಟಿ ರಾಧಿಕಾ ನಾರಾಯಣ್
8 / 12
ನಟಿ ರಾಧಿಕಾ ನಾರಾಯಣ್
9 / 12
ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಬಂಧು ಮಿತ್ರರು
10 / 12
ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರು
11 / 12
ಪುಸ್ತಕದ ಬಗ್ಗೆ ಲೇಖಕರ ಜೊತೆ ಸಂವಾದ
12 / 12
ಪುಸ್ತಕ ಬಿಡುಗಡೆ ವೇಳೆ ಸಂತಸ ಹಂಚಿಕೊಂಡ ಲೇಖಕ ಆದಿತ್ಯ ಬೇಲೂರು