Sports Calendar 2023: ಕ್ರಿಕೆಟ್ ಹೊರತುಪಡಿಸಿ ಈ ವರ್ಷ ನಡೆಯಲ್ಲಿರುವ ಪ್ರಮುಖ ಕ್ರೀಡಾಕೂಟ​ಗಳಿವು

Edited By:

Updated on: Jan 01, 2023 | 10:21 AM

Sports Calendar 2023: 2022ರಲ್ಲಿ ಭಾರತದ ಪಾಲಿಗೆ ಕ್ರೀಡಾ ವಿಭಾಗದಲ್ಲಿ ಹೇಳಿಕೊಳ್ಳುವಂತದ್ದು ಅಷ್ಟಾಗಿ ನಡೆಯಲಿಲ್ಲ. ಆದರೆ 2023 ರಲ್ಲಿ ಕ್ರೀಡಾ ಲೋಕದಲ್ಲಿ ಅನೇಕ ದೊಡ್ಡ ಪಂದ್ಯಾವಳಿಗಳು ಮತ್ತು ಚಾಂಪಿಯನ್‌ಶಿಪ್‌ಗಳೇ ನಡೆಯಲಿವೆ.

1 / 5
2022ರಲ್ಲಿ ಭಾರತದ ಪಾಲಿಗೆ ಕ್ರೀಡಾ ವಿಭಾಗದಲ್ಲಿ ಹೇಳಿಕೊಳ್ಳುವಂತದ್ದು ಅಷ್ಟಾಗಿ ನಡೆಯಲಿಲ್ಲ. ಆದರೆ 2023 ರಲ್ಲಿ ಕ್ರೀಡಾ ಲೋಕದಲ್ಲಿ ಅನೇಕ ದೊಡ್ಡ ಪಂದ್ಯಾವಳಿಗಳು ಮತ್ತು ಚಾಂಪಿಯನ್‌ಶಿಪ್‌ಗಳೇ ನಡೆಯಲಿವೆ. ಭಾರತೀಯ ಆಟಗಾರರು ಕೂಡ ವಿವಿಧ ಕ್ರೀಡಾ ವಿಭಾಗಗಳಲ್ಲಿ ತಮ್ಮ ಸಾಮಥ್ಯ್ರ ಪ್ರದರ್ಶಿಸಲಿದ್ದಾರೆ. ಹಾಗಾದರೆ ಈ ವರ್ಷ ಯಾವಾಗ ಮತ್ತು ಎಲ್ಲಿ ಯಾವ ಕ್ರೀಡಾ ಈವೆಂಟ್ ನಡೆಯಲ್ಲಿದೆ ಎಂಬುದರ ವಿವರ ಇಲ್ಲಿದೆ.

2 / 5
2023ರ ಮೊದಲ ಮೆಗಾ ಈವೆಂಟ್ ರೂಪದಲ್ಲಿ ಪುರುಷರ ಹಾಕಿ ವಿಶ್ವಕಪ್ ನಡೆಯಲಿದೆ.  ವರ್ಷದ ಮೊದಲ ತಿಂಗಳಲ್ಲಿ ಭಾರತದಲ್ಲಿ ಆಯೋಜನೆಯಾಗುತ್ತಿರುವ ಈ ಪಂದ್ಯಾವಳಿಯು 13 ರಿಂದ 29 ಜನವರಿ 2023 ರವರೆಗೆ ನಡೆಯುತ್ತದೆ. ಇಲ್ಲಿ 16 ತಂಡಗಳು ಭಾಗವಹಿಸಲಿದ್ದು, ಈ ಪಂದ್ಯಾವಳಿ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆಯಲಿದೆ. ಪದಕ ಗೆಲ್ಲುವ ಉದ್ದೇಶದಿಂದ ಭಾರತ ಈ ವಿಶ್ವಕಪ್ ಪ್ರವೇಶಿಸಲಿದೆ.

3 / 5
ಚೀನಾ ಆತಿಥ್ಯ ವಹಿಸಲಿರುವ ಏಷ್ಯನ್ ಗೇಮ್ಸ್ ಕೂಡ 2023ರಲ್ಲಿಯೇ ನಡೆಯಲಿದೆ. ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8, 2023 ರವರೆಗೆ ಹ್ಯಾಂಗ್‌ಝೌನಲ್ಲಿ ನಡೆಯಲಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಐತಿಹಾಸಿಕ ಪ್ರದರ್ಶನದ ನಂತರ, ಭಾರತೀಯ ಅಥ್ಲೀಟ್‌ಗಳು ಈಗ ಏಷ್ಯನ್ ಗೇಮ್ಸ್ ಮೇಲೆ ಕಣ್ಣಿಟ್ಟಿದ್ದಾರೆ. ಇದು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಹಾದಿಯನ್ನು ಸುಗಮಗೊಳಿಸುತ್ತದೆ.

4 / 5
ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕೂಡ ಇದೇ ವರ್ಷ ನಡೆಯಲಿದೆ. ಈ ಚಾಂಪಿಯನ್‌ಶಿಪ್ ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ಆಗಸ್ಟ್ 19 ರಿಂದ 27 ರವರೆಗೆ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ಸ್ ಅನ್ನು ಗಮನದಲ್ಲಿಟ್ಟುಕೊಂಡು, ಇದನ್ನು ಸತತ ಎರಡನೇ ವರ್ಷ ಆಯೋಜಿಸಲಾಗಿದೆ. 2022 ರಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತೊಮ್ಮೆ ಪದಕವನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ.

5 / 5
2022 ರಲ್ಲಿ ಫಿಫಾ ಪುರುಷರ ವಿಶ್ವಕಪ್ ಮುಗಿದಿದ್ದು, 2023 ರಲ್ಲಿ ಫಿಫಾ ಮಹಿಳಾ ವಿಶ್ವಕಪ್ ನಡೆಯಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜುಲೈ 20 ರಿಂದ ಆಗಸ್ಟ್ 20 ರವರೆಗೆ ಈ ಮೆಗಾ ಈವೆಂಟ್​ಗೆ ಆತಿಥ್ಯ ವಹಿಸಲಿವೆ. ಈ ವಿಶ್ವಕಪ್‌ನಲ್ಲಿ 32 ತಂಡಗಳು ಭಾಗವಹಿಸಲಿವೆ.

Published On - 10:21 am, Sun, 1 January 23