
ನಟಿ ಶ್ರೀನಿಧಿ ಶೆಟ್ಟಿ ಅವರು ‘ಕೆಜಿಎಫ್ 2’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ‘ಕೆಜಿಎಫ್’ ಸರಣಿ ಅವರ ಮೊದಲ ಸಿನಿಮಾ. 2018ರಿಂದ ಇಲ್ಲಿಯವರೆಗೆ ಅವರು ನಟಿಸಿರೋದು ಮೂರು ಸಿನಿಮಾಗಳಲ್ಲಿ ಮಾತ್ರ.

‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾ ಬಳಿಕ ಶ್ರೀನಿಧಿ ಶೆಟ್ಟಿಗೆ ಖ್ಯಾತಿ ಹೆಚ್ಚಿತು. ಹೀಗಾಗಿ, ಅವರು ಸಂಭಾವನೆ ಹೆಚ್ಚಿಸಿಕೊಂಡರು. ಇದೇ ಅವರಿಗೆ ಮುಳುವಾಗಿದೆ.

‘ಕೋಬ್ರಾ’ ಸಿನಿಮಾದಲ್ಲಿ ನಟಿಸೋಕೆ ಶ್ರೀನಿಧಿ ಶೆಟ್ಟಿ 6-7 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಬಳಿಕ ಅವರು ಇದೇ ಮೊತ್ತದಲ್ಲಿ ಸಂಭಾವನೆ ನಿರೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ನಿರ್ಮಾಪಕರು ರೆಡಿ ಇಲ್ಲ.

ಸದ್ಯ ಶ್ರೀನಿಧಿ ಶೆಟ್ಟಿ ಕೈಯಲ್ಲಿ ಯಾವುದೇ ಹೊಸ ಸಿನಿಮಾ ಇಲ್ಲ. ಅವರ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಶ್ರೀನಿಧಿ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹೊಸ ಹೊಸ ಫೋಟೋಶೂಟ್ ಮಾಡಿಸಿ ಅವರು ಗಮನ ಸೆಳೆಯುತ್ತಿದ್ದಾರೆ.