Updated on: Jan 02, 2023 | 2:49 PM
ಸೈಂಟ್ ಮೇರಿಸ್ ದ್ವೀಪ. ಕರಾವಳಿಯ ಪ್ರವಾಸಿಗರ ಸ್ವರ್ಗ. ದೇಶದಲ್ಲೇ ಪ್ರಸಿದ್ಧಿ ಪಡೆದ ಸುಂದರ ಸ್ವರ್ಚ ಐಲ್ಯಾಂಡ್. ವರ್ಷಾಚರಣೆ ಹಿನ್ನಲೆ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಸಮುದ್ರದ ನಡು ಗಡ್ಡೆಯಲ್ಲಿ ನಿಂತು ಜನ ಮಸ್ತ್ ಎಂಜಾಯ್ ಮಾಡ್ತಿದ್ದಾರೆ.
ಕಣ್ಣು ಹಾಯಿಸಿದಷ್ಟು ನೀಲಿ ಜಲ ಸಾಗರದ, ಬಿಳಿ ಹಾಲ್ನೊರೆಯ ಮಧ್ಯೆ ತೇಲುತ್ತಾ ಸಾಗುವ ಹಡಗು. ಹಡಗಿನಲ್ಲಿ ಪ್ರವಾಸಿಗರ ಸಂಭ್ರಮ ಸಡಗರ. ಅಂದಹಾಗೆ ಇವರೆಲ್ಲ ಹೀಗೆ ಸಂಭ್ರಮಿಸುತ್ತಾ ಹೋಗ್ತಾ ಇರೋದು ಎಲ್ಲಿಗೆ ಗೊತ್ತಾ. ಸೈಂಟ್ ಮೇರಿಸ್ ಐಲ್ಯಾಂಡ್‌ಗೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಲವಾರು ಬೀಚ್ ಇದ್ರೂ ಪ್ರವಾಸಿಗರಿಗೆ ಮುಕ್ತವಾಗಿರುವ ಐಲ್ಯಾಂಡ್ ಅಂತ ಇರೋದು, ಉಡುಪಿಯ ಮಲ್ಪೆಯಿಂದ ಆರು ಕಿಲೋಮೀಟರ್ ದೂರದಲ್ಲಿ ಇರೋ ಸೈಂಟ್ ಮೇರಿಸ್ ದ್ವೀಪ ಮಾತ್ರ. ಹೀಗಾಗಿ ಪ್ರವಾಸಿಗರಿಗೆ ಐಲ್ಯಾಂಡ್‌ಗೆ ಹೋಗ್ಬೇಕು ಅಂತ ಆಸೆ ಸಹಜ.
ಸದ್ಯ ದೂರದ ಬೆಂಗಳೂರು ಕೇರಳ ಸೇರಿದಂತೆ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರಕೃತಿ ಸೌಂದರ್ಯ ನೋಡಿ ಖುಷಿ ಪಡುತ್ತಿದ್ದಾರೆ. ಸೆಲ್ಪಿ ತೆಗೆದು ಒಂದಷ್ಟು ಕಲಾ ಆನಂದಿಸುತ್ತಿದ್ದಾರೆ.
ಆದ್ರೆ ಈ ಬಾರಿ ಸೈಂಟ್ ಮೇರಿಸ್ ದ್ವೀಪಕ್ಕೆ ಬರುವವರಿಗೆ ಕೊಂಚ ನಿರಾಸೆಯಾಗುತ್ತಿದೆ. ಯಾಕಂದ್ರೆ, ಕಳೆದ ವರ್ಷ ಬಂಡೆಯ ಮೇಲೆ ಸೆಲ್ಫಿ ಕ್ಲಿಕಿಸಲು ಹೋಗಿ ಸಾವು ಸಂಭವಿಸಿತ್ತು. ಹಾಗಾಗಿ ಈ ಸಲ ಸಮುದ್ರದಲ್ಲಿ ಈಜಾಡಲು, ದೊಡ್ಡದಾದ ಬಂಡೆ ಏರಲು ಅವಕಾಶ ಇಲ್ಲ. ದೂರದಿಂದಲೇ ಸಮುದ್ರ ಅಲೆಗಳ ಅಂದ, ಕಲ್ಲು ಬಂಡೆಗಳ ಚಂದ ನೋಡಿ ಖುಷಿ ಪಡೆಯಬಹುದು.
ಇನ್ನೂ, ಐಲ್ಯಾಂಡ್ ಪ್ರಯಾಣಿಸಲು ಬೋಟ್‌ಗಳಿಗೆ ದುಬಾರಿ ವೆಚ್ಚ ಭರಿಸುವ ಅನಿವಾರ್ಯತೆ ಕೂಡ ಪ್ರವಾಸಿಗರದ್ದಾಗಿದೆ. ಹೀಗಾಗಿ ಸ್ವಲ್ಪ ಬೋಟ್ ರೇಟ್ ಕಡಿಮೆ ಮಾಡಿ ಎನ್ನುವ ಆಗ್ರಹ ಕೂಡ ಪ್ರವಾಸಿಗರದ್ದು.
Published On - 2:49 pm, Mon, 2 January 23