4 / 6
ಕಾಂಟಿನೋ ಇಟಿಬಿ -100 ವಿಶೇಷತೆ: ಕಾಂಟಿನೋ ಇಟಿಬಿ -100 ಇ-ಬೈಕ್ ಅನ್ನು ಗ್ರಾಮೀಣ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಡಿಟ್ಯಾಚೇಬಲ್, ರೀಚಾರ್ಜ್ ಮಾಡಬಹುದಾದ ಬ್ಯಾಟರಿ ಮತ್ತು ಮೂರು ಡ್ರೈವಿಂಗ್ ಮೋಡ್‌ಗಳನ್ನು (ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಪೆಡಲ್) ನೀಡಲಾಗಿದೆ. 260W ಎಲೆಕ್ಟ್ರಿಕ್ ಮೋಟಾರ್ ಇದರಲಿದ್ದು, ಹೈಬ್ರಿಡ್ ಮೋಡ್‌ನಲ್ಲಿ 60 ಕಿಮೀ ಮತ್ತು ಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ 30 ಕಿಮೀ ವರೆಗೆ ಚಲಿಸಬಹುದು. ಹಾಗೆಯೇ ಬಳಕೆದಾರರು ಮೋಟಾರ್ ಮೋಡ್ ಮತ್ತು ಪೆಡಲ್ ಮೋಡ್ ನಡುವೆ ಸುಲಭವಾಗಿ ಬದಲಾಯಿಸಿಕೊಳ್ಳುವ ಅವಕಾಶ ಇದರಲ್ಲಿದೆ.