- Kannada News Photo gallery Cricket photos IPL 2021:SRH Afghan spinner Mujeeb Ur Rahman doubtful for IPL
IPL 2021: ತಾಲಿಬಾನಿಗಳ ದುರಾಡಳಿತ: ಐಪಿಎಲ್ಗೆ SRH ಸ್ಟಾರ್ ಸ್ಪಿನ್ನರ್ ಅನುಮಾನ
IPL 2021: SRH ತಂಡವು ದ್ವಿತೀಯಾರ್ಧವನ್ನು ಸೆಪ್ಟೆಂಬರ್ 22 ರಂದು ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ.
Updated on: Sep 15, 2021 | 6:35 PM

ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತಿಯಾರ್ಧ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಹೊಸ ಸಂಕಷ್ಟ ಶುರುವಾಗಿದೆ. ತಂಡದ ಸ್ಟಾರ್ ಸ್ಪಿನ್ನರ್ ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್ ಟೂರ್ನಿಗಾಗಿ ಆಗಮಿಸುವುದು ಅನುಮಾನ ಎನ್ನಲಾಗಿದೆ.

ಏಕೆಂದರೆ ಅಫ್ಘಾನಿಸ್ತಾನದಲ್ಲಿರುವ ಮುಜೀಬ್ ಉರ್ ರೆಹಮಾನ್ ಯುಎಇಗೆ ವೀಸಾ ಪಡೆಯಲು ಸಾಧ್ಯವಾಗಿಲ್ಲ. ಅಫ್ಘಾನ್ನಲ್ಲಿ ತಾಲಿಬಾನಿಗಳ ದುರಾಡಳಿತ ತಾಂಡವಾಡುತ್ತಿದ್ದು, ಇದರಿಂದ ಯುವ ಕ್ರಿಕೆಟಿಗ ಪ್ರಯಾಣಕ್ಕೆ ಸಂಕಷ್ಟ ಎದುರಾಗಿ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನದಿಂದ ಯುಎಇಗೆ ವೀಸಾ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸನ್ ರೈಸರ್ಸ್ ಹೈದರಾಬಾದ್ ಸ್ಪಿನ್ನರ್ ಮುಜೀಬ್ ಉರ್ ರಹಮಾನ್ ಯಾವಾಗ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈಗಾಗಲೇ ತಂಡದ ಆರಂಭಿಕ ಆಟಗಾರ ಜಾನಿ ಬೈರ್ ಸ್ಟೋ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ವೆಸ್ಟ್ ಇಂಡೀಸ್ ಆಟಗಾರ ಶೆರ್ಫಾನ್ ರುದರ್ಫೋರ್ಡ್ ಸ್ಥಾನ ಪಡೆದಿದ್ದಾರೆ.

ಇದೀಗ ಮುಜೀಬ್ ಉರ್ ರೆಹಮಾನ್ ಆಗಮನದ ಬಗ್ಗೆ ಇನ್ನು ಸಷ್ಟತೆಯಿಲ್ಲ. ಹೀಗಾಗಿ ಹೊಸ ಆಟಗಾರರ ಖರೀದಿಗೆ ಸನ್ರೈಸರ್ಸ್ ಹೈದರಾಬಾದ್ ಮುಂದಾಗುವ ಸಾಧ್ಯತೆಯಿದೆ. ಇದಾಗ್ಯೂ ಎಸ್ಆರ್ಹೆಚ್ ತಂಡದಲ್ಲಿರುವ ಅಫ್ಘಾನಿಸ್ತಾನದ ಇನ್ನಿಬ್ಬರು ಆಟಗಾರರಾದ ಮೊಹಮ್ಮದ್ ನಬಿ ಹಾಗೂ ರಶೀದ್ ಖಾನ್ ಈಗಾಗಲೇ ಯುಎಇಗೆ ತಲುಪಿದ್ದಾರೆ.

ನಬಿ ಹಾಗೂ ರಶೀದ್ ಖಾನ್ ಇಂಗ್ಲೆಂಡ್ನಲ್ಲಿ ನಡೆದಿದ್ದ ದಿ ಹಂಡ್ರೆಡ್ ಲೀಗ್ ಮುಗಿಸಿ ಯುಎಇಗೆ ಆಗಮಿಸಿದ್ದರು. SRH ತಂಡವು ದ್ವಿತೀಯಾರ್ಧವನ್ನು ಸೆಪ್ಟೆಂಬರ್ 22 ರಂದು ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ.



















