ಖಾರ್ಟೂಮ್ (ಸುಡಾನ್): ಸೇನೆ ಮತ್ತು ದೇಶದ ಪ್ರಮುಖ ಅರೆಸೇನಾ ಪಡೆಗಳ ನಡುವೆ ನಡೆದ ಗುಂಡಿನ ಚಕಾಮಕಿಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಜನ ವಸತಿ ಪ್ರದೇಶದ ಮೇಲೆ ಗುಂಡಿನ ದಾಳಿ ನಡೆದಿದ್ದರಿಂದ ಅನೇಕ ಸಾವುನೋವುಗಳು ಸಂಭವಿಸಿದ್ದು, ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. (Image: AFP)
ದಾವಣಗೆರೆ ಜಿಲ್ಲೆಯ ಎಂಟು ಜನ ಸೇರಿ ಕರ್ನಾಟಕದ 31 ಜನರು ಇವರು ವಾಸವಾಗಿರುವ ಮನೆಗಳ ಮೇಲೂ ಗುಂಡಿನ ದಾಳಿ ನಡೆದಿದ್ದು, ನೀರು ಆಹಾರ ವಿಲ್ಲದೆ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾರ್ಟೂಮ್ ನಗರದಲ್ಲಿ ಒಂದೇ ಮನೆಯಲ್ಲಿ ವಾಸ ಇರುವ 31 ಜನ ದಾವಣಗೆರೆ ಶಿವಮೊಗ್ಗ ಹಾಗೂ ಮೈಸೂರಿನ ಕೂಲಿ ಕಾರ್ಮಿಕರಾಗಿದ್ದಾರೆ. ಕಳೆದ ಐದು ವರ್ಷದಿಂದ ಕೆಲಸ ಹುಡುಕಿಕೊಂಡು ಸುಡಾನ್ ಹೋಗಿದ್ದರು. ಸದ್ಯ ಗುಂಡಿನ ದಾಳಿಯಿಂದಾಗಿ ಕನ್ನಡಿಗರು ಆತಂಕದಲ್ಲಿದ್ದಾರೆ. (ಫೋಟೋ- ಸಂಕಷ್ಟದಲ್ಲಿರುವ ಕನ್ನಡಿಗರು)
ಕರ್ನಾಟಕದ ಕಾರ್ಮಿಕರು ವಾಸ ಇರುವ ಕಟ್ಟಡಕ್ಕೂ ಗುಂಡಿನದಾಳಿ ನಡೆದಿದ್ದು, ಭೀತಿಗೊಂಡಿರುವ ಕನ್ನಡಿಗರು ನೆರವಾಗುವಂತೆ ಟಿವಿ9ಗೆ ಮನವಿ ಮಾಡಿದ್ದಾರೆ. ಘಟನೆಯ ಫೋಟೋ, ವಿಡಿಯೋಗಳನ್ನು ಟಿವಿ9ಗೆ ಕಳುಹಿಸಿದ ಕನ್ನಡಿಗರು ಸರ್ಕಾರದ ಗಮನಕ್ಕೆ ತರುವಂತೆ ವಿನಂತಿಸುತ್ತಿದ್ದಾರೆ. ಸದ್ಯ ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರ ಪೈಕಿ ಬಹುತೇಕರು ಗಿಡಮೂಲಿಕೆಗಳ ಔಷಧಿ ಮಾರಾಟ ಮಾಡಲು ಹೋದವರಾಗಿದ್ದಾರೆ. ಜೊತೆಗೆ ಕೂಲಿ ಕೆಲಸ ಸಹ ಮಾಡುತ್ತಿದ್ದಾರೆ. (Image: AFP)
ಕನ್ನಡಿಗರು ಕಳುಹಿಸಿದ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಹೇಳಿದಂತೆ, ಸುತ್ತಮುತ್ತ ಗುಂಡಿನ ದಾಳಿಗಳು ನಡೆದಿವೆ. ಮಾಹಿತಿ ಪ್ರಕಾರ ರಾಕೇಟ್ ದಾಳಿಗಳು ನಡೆಯುವ ಹಾಗೂ ವಿಮಾನದ ಮೂಲಕ ಬಾಂಬ್ಗಳನ್ನು ಹಾಕುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಲ್ಲದೆ, ಗುಂಡಿನ ದಾಳಿ ಹಿನ್ನೆಲೆ ಸ್ಥಳಾಂತರಗೊಳ್ಳುವಂತೆ ಕನ್ನಡಿಗರು ನೆಲೆಸಿರುವ ಕಟ್ಟದಲ್ಲಿರುವ ಪೊಲೀಸ್ ಸಿಬ್ಬಂದಿಯೊಬ್ಬರು ಹೇಳಿದ್ದಾಗಿ ತಿಳಿಸಿದ್ದಾರೆ. (Image: AP)
ಸದ್ಯ ಕನ್ನಡಿಗರು ನೆಲೆಸಿರುವ ಖಾರ್ಟೂಮ್ ನಗರದಲ್ಲಿರುವ ಜನರು ಭೀತಿಯಿಂದ ಇದ್ದು, ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ನೆರವಿಗೆ ದಾವಿಸುವಂತೆ ಮನವಿ ಮಾಡುತ್ತಿದ್ದಾರೆ. ಕೇರಳದ ವ್ಯಕ್ತಿಯೊಬ್ಬರು ಶನಿವಾರ (ಏಪ್ರಿಲ್ 15) ಸುಡಾನ್‌ನಲ್ಲಿ ಗುಂಡಿನ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಕಣ್ಣೂರು ಜಿಲ್ಲೆಯಲ್ಲಿ ಅವರ ಕುಟುಂಬಕ್ಕೆ ಮಾಹಿತಿ ತಿಳಿಸಲಾಗಿದೆ. ಅಳಕೋಡು ಪಂಚಾಯಿತಿ ವ್ಯಾಪ್ತಿಯ ನೆಲ್ಲಿಪ್ಪರ ಗ್ರಾಮದ ಆಲ್ಬರ್ಟ್ ಆಗಸ್ಟಿನ್ (48) ಮೃತ ಭಾರತೀಯ. (Photo: Soumyaranjan)
ಸುಡಾನ್‌ನ ರಾಜಧಾನಿ ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಆಲ್ಬರ್ಟ್ ಸಾವನ್ನು ದೃಢಪಡಿಸಿದೆ ಮತ್ತು ಮುಂದಿನ ವ್ಯವಸ್ಥೆಗಳಿಗಾಗಿ ಕುಟುಂಬ ಮತ್ತು ವೈದ್ಯಕೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಟ್ವೀಟ್ ಮಾಡಿದೆ. ಆಲ್ಬರ್ಟ್ ಸುಡಾನ್‌ನ ದಾಲ್ ಗ್ರೂಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. (Image: twitter/RuthNesoba)
Published On - 7:12 pm, Sun, 16 April 23