ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ದೋಷಿ ಎಂದ ಸೂರತ್ ಕೋರ್ಟ್; ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿದೆ

|

Updated on: Mar 23, 2023 | 3:06 PM

ರಾಹುಲ್ ಗಾಂಧಿ ಮಾಡಿರುವ ಮೋದಿ ಸರ್​​ನೇಮ್ ಟೀಕೆಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್​​​ನ ಸೂರತ್ ನ್ಯಾಯಾಲಯವು ಕಾಂಗ್ರೆಸ್ ನಾಯಕ ದೋಷಿ ಎಂದು ತೀರ್ಪು ಪ್ರಕಟಿಸಿದೆ.ಈ ತೀರ್ಪು ಬಗ್ಗೆ ರಾಜಕೀಯ ಮುಖಂಡರ ಪ್ರತಿಕ್ರಿಯೆ ಇಲ್ಲಿದೆ

1 / 8
  ಅವರ ಕರಾಳ ಕೃತ್ಯಗಳನ್ನು ನಾವು ಬಯಲು ಮಾಡುತ್ತಿದ್ದೇವೆ ಎಂಬ ಕಾರಣಕ್ಕೆ  ಹೇಡಿ, ಸರ್ವಾಧಿಕಾರಿ ಬಿಜೆಪಿ ಸರ್ಕಾರ ರಾಹುಲ್ ಗಾಂಧಿ ಮತ್ತು ವಿಪಕ್ಷಗಳಿಂದ ಭಯಗೊಂಡಿದೆ. ನಾವು ಜೆಪಿಸಿಗಾಗಿ ಒತ್ತಾಯಿಸುತ್ತೇವೆ. ಮೋದಿ ಸರ್ಕಾರ ರಾಜಕೀಯ ದಿವಾಳಿಯಾಗಿದೆ.ಇಡಿ ಪೊಲೀಸರನ್ನು ಕಳುಹಿಸುತ್ತದೆ.ರಾಜಕೀಯ ಭಾಷಣಗಳ ಮೇಲೆ ಕೇಸುಗಳನ್ನು ಹಾಕುತ್ತಾರೆ. ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ- ಮಲ್ಲಿಕಾರ್ಜುನ ಖರ್ಗೆ

2 / 8
‘ಸಾಮ್, ದಾಮ್, ದಂಡ್, ಭೇದ್’ (ಪುಸ್ತಕದಲ್ಲಿರುವ ಪ್ರತಿಯೊಂದು ತಂತ್ರ) ಮೂಲಕ ರಾಹುಲ್ ಗಾಂಧಿಯವರ ಧ್ವನಿಯನ್ನು ಹತ್ತಿಕ್ಕಲು ಅಧಿಕಾರದ ಭಯಭೀತ ಯಂತ್ರವು ಪ್ರಯತ್ನಿಸುತ್ತಿದೆ. ನನ್ನ ಸಹೋದರ ಎಂದಿಗೂ ಹೆದರುವುದಿಲ್ಲ, ಅವನು ಎಂದಿಗೂ ಹೆದರಲಿಲ್ಲ. ಅವನು ಸತ್ಯವನ್ನೇ ಹೇಳಿ ಬದುಕಿದ್ದಾನೆ ಸತ್ಯವನ್ನು ಹೇಳುತ್ತಲೇ ಇರುತ್ತಾನೆ. ದೇಶದ ಜನರ ಪರ ಧ್ವನಿ ಎತ್ತುವುದನ್ನು ಮುಂದುವರಿಸುತ್ತಾನೆ- ಪ್ರಿಯಾಂಕಾ ಗಾಂಧಿ

3 / 8
ಬಿಜೆಪಿಯೇತರ ನಾಯಕರು ಹಾಗೂ ಪಕ್ಷಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಷಡ್ಯಂತ್ರ ನಡೆಯುತ್ತಿದೆ. ನಮಗೆ ಕಾಂಗ್ರೆಸ್ ಜೊತೆ ಭಿನ್ನಾಭಿಪ್ರಾಯವಿದೆ, ಆದರೆ ಈ ರೀತಿ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಸಿಲುಕಿಸುವುದು ಸರಿಯಲ್ಲ. ಪ್ರಶ್ನೆ ಕೇಳುವುದು ಸಾರ್ವಜನಿಕರು ಮತ್ತು ಪ್ರತಿಪಕ್ಷಗಳ ಕೆಲಸ. ನಾವು ನ್ಯಾಯಾಲಯವನ್ನು ಗೌರವಿಸುತ್ತೇವೆ ಆದರೆ ನಿರ್ಧಾರವನ್ನು ಒಪ್ಪುವುದಿಲ್ಲ- ಅರವಿಂದ ಕೇಜ್ರಿವಾಲ್

4 / 8
ನಾವು ಭಯಪಡುವುದಿಲ್ಲ, ನಾವು ತಲೆಬಾಗುವುದಿಲ್ಲ, ನಾವು ಸತ್ಯಕ್ಕಾಗಿ ಹೋರಾಡುತ್ತೇವೆ-ರಣದೀಪ್ ಸಿಂಗ್ ಸುರ್ಜೇವಾಲಾ

5 / 8
ಇದು ಹೊಸ ಭಾರತ. ಅನ್ಯಾಯದ ವಿರುದ್ಧ ದನಿ ಎತ್ತಿದರೆ ನಿಮ್ಮ ಮೇಲೆ ಇಡಿ-ಸಿಬಿಐ, ಪೊಲೀಸ್, ಎಫ್‌ಐಆರ್‌ ಹಾಕಲಾಗುತ್ತದೆ. ಸತ್ಯವನ್ನು ಮಾತನಾಡಿದ್ದಕ್ಕಾಗಿ ಮತ್ತು ಸರ್ವಾಧಿಕಾರಿಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ರಾಹುಲ್ ಗಾಂಧಿಗೂ ಶಿಕ್ಷೆಯಾಗುತ್ತಿದೆ. ದೇಶದ ಕಾನೂನು ರಾಹುಲ್ ಗಾಂಧಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವನ್ನು ನೀಡುತ್ತದೆ ಮತ್ತು ಅವರು ಅದನ್ನು ಮಾಡುತ್ತಾರೆ. ನಾವು ಹೆದರುವುದಿಲ್ಲ- ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್

6 / 8
ರಾಹುಲ್ ಗಾಂಧಿ ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ತಪ್ಪಿದ್ದನ್ನು ತಪ್ಪು ಎಂದು ಹೇಳುವ ಧೈರ್ಯ ಅವರಲ್ಲಿದೆ. ನಿರಂಕುಶಾಧಿಕಾರಿ ಈ "ಧೈರ್ಯ" ದ ಬಗ್ಗೆ ಆತಂಕಗೊಂಡಿದ್ದಾನೆ.ನಾವು ಹೋರಾಡಿ ಗೆಲ್ಲುತ್ತೇವೆ- ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ

7 / 8
ರಾಹುಲ್ ಗಾಂಧಿ ವಿರುದ್ಧ ನ್ಯಾಯಾಲಯದ ತೀರ್ಪನ್ನು ಗೌರವಯುತವಾಗಿ ಒಪ್ಪುವುದಿಲ್ಲ. ವಿರೋಧವು ಪ್ರಜಾಪ್ರಭುತ್ವದ ತಿರುಳಾಗಿದೆ. ಭಿನ್ನಾಭಿಪ್ರಾಯವನ್ನು ಹತ್ತಿಕ್ಕಬಾರದು. ಭಾರತವು ವಿಮರ್ಶೆಯ ಬಲವಾದ ಸಂಪ್ರದಾಯವನ್ನು ಹೊಂದಿದೆ. ಇದನ್ನು ಒಂದು ಸಿದ್ಧಾಂತ, ಒಂದು ಪಕ್ಷ, ಒಬ್ಬ ನಾಯಕನ ದೃಷ್ಟಿಕೋನಕ್ಕೆ ತಗ್ಗಿಸುವ ಪ್ರಯತ್ನವು ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ- ಎಎಪಿ ವಕ್ತಾರ ರಾಘವ್ ಚಡ್ಡಾ

8 / 8
ನ್ಯಾಯಾಂಗವನ್ನು ಗೌರವಿಸಿಕೊಂಡೇ ಹೇಳುತ್ತೇನೆ ರಾಹುಲ್ ಗಾಂಧಿಯವರ ವಿರುದ್ಧದ ಶಿಕ್ಷೆ ಜಾಸ್ತಿಯೇ ಆಯಿತು. ಇದು ದೂರಗಾಮಿ ಪರಿಣಾಮಗಳನ್ನು ಉಂಟುಮಾಡುತ್ತದೆ.ಪ್ರತಿಪಕ್ಷ ನಾಯಕರನ್ನು ನಿರಂತರ ಗುರಿಯಾಗಿಸುವುದು ಖಂಡನೀಯ. ಇದು ಜನರ ಪರವಾಗಿ ಮಾತನಾಡುವ ಮತ್ತು ಸರ್ಕಾರದ ಜಿ-ಹುಜೂರ್ ಆಗಲು ನಿರಾಕರಿಸುವ ದನಿಯಡಗಿಸುವುದಿಲ್ಲ- ಪ್ರಿಯಾಂಕಾ ಚತುರ್ವೇದಿ

Published On - 3:00 pm, Thu, 23 March 23