Summer travel: ಬೇಸಿಗೆಯಲ್ಲಿ ಟ್ರಿಪ್ ಪ್ಲಾನ್ ಮಾಡಿದ್ದೀರಾ? ಹಾಗಾದರೆ ಈ ವಸ್ತುಗಳನ್ನು ನಿಮ್ಮ ಜೊತೆಗೆ ತೆಗೆದುಕೊಂಡು ಹೋಗಿ

ಬೇಸಿಗೆಯ ಪ್ರವಾಸವು ಇತರ ಋತಯಗಳಿಗೆ ಹೋಲಿಸಿದರೆ ವಿಭಿನ್ನವಾಗಿರುತ್ತದೆ. ಪ್ರವಾಸಕ್ಕೆ ತೆರಳುವಾಗ ಬಿಸಿಲಿನ ಶಾಖದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೆಲವೊಂದು ವಸ್ತುಗಳನ್ನು ನಮ್ಮ ಜೊತೆ ತೆಗೆದುಕೊಂಡು ಹೋಗಬೇಕಾಗುತ್ತದೆ. ನಿಮ್ಮ ಪ್ರವಾಸವನ್ನು ಸುಗಮವಾಗಿ ಮಾಡಲು ಈ ಐಟಂಗಳನ್ನು ತೆಗೆದುಕೊಂಡು ಹೋಗಿ.

TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 23, 2023 | 3:11 PM

Summer travel

ಈ ೧೧ ಅಗತ್ಯ ವಸ್ತುಗಳು ನಿಮ್ಮ ಮುಂದಿನ ಬೇಸಿಗೆಯ ಪ್ರವಾಸವನ್ನು ಹೆಚ್ಚು ಆನಂದದಾಯಕ ಮತ್ತು ಒತ್ತಡಮುಕ್ತವನ್ನಾಗಿಸುತ್ತದೆ. ಪ್ರವಾಸಕ್ಕೆ ತೆರಳುವಾಗ ಈ ವಸ್ತುಗಳನ್ನು ಮರೆಯದೆ ತೆಗೆದುಕೊಂಡು ಹೋಗಿ.

1 / 10
Summer travel

ಸನ್‌ಸ್ಕಿನ್: ಸನ್‌ಸ್ಕಿನ್‌ನನ್ನು ಪ್ರವಾಸದ ಸಮಯದಲ್ಲಿ ಆಗಾಗ್ಗೆ ಹಚ್ಚಿಕೊಳ್ಳುವ ಮೂಲಕ ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸಿ. ಪ್ರತಿ ಎರಡು ಗಂಟೆಗಳಿಗೊಮ್ಮೆ ಸನ್‌ಸ್ಕಿನ್‌ನನ್ನು ಮುಖಕ್ಕೆ ಹಚ್ಚುತ್ತಾ ಇರಿ. ಈ ಸನ್‌ಸ್ಕಿನ್ ನಿಮ್ಮ ಬೇಸಿಸಗೆ ಪ್ರವಾಸದಲ್ಲಿ ನಿಮ್ಮ ಜೊತೆ ಇರಬೇಕಾದ ಮುಖ್ಯ ವಸ್ತುವಾಗಿದೆ.

2 / 10
Summer travel

ಸನ್‌ಗ್ಲಾಸ್‌ಗಳು: ಪ್ರಕಾಶಮಾನವಾದ ಸೂರ್ಯನ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಒಂದು ಜೋಡಿ ಸನ್‌ಗ್ಲಾಸ್‌ನ್ನು ಪ್ರವಾಸದ ಸಮಯದಲ್ಲಿ ನಿಮ್ಮ ಜೊತೆ ಇರಿಸಿಕೊಳ್ಳಿ.

3 / 10
Summer travel

ಟೋಪಿ: ಟೋಪಿ ನಿಮ್ಮ ಬೇಸಿಗೆಯ ಉಡುಪಿಗೆ ಹೊಸ ಲುಕ್ ನೀಡುವುದು ಮಾತ್ರವಲ್ಲದೆ , ಸೂರ್ಯನ ಕಿರಣಗಳಿಂದ ನಿಮ್ಮ ಮುಖ ಮತ್ತು ನೆತ್ತಿಗೆ ಹೆಚ್ಚುವರಿ ರಕ್ಷಣೆಯನ್ನು ನೀಡುತ್ತದೆ.

4 / 10
Summer travel

ಸ್ವಿಮ್‌ಸೂಟ್: ನೀವು ಬೇಸಿಗೆಯ ರಜೆಯನ್ನು ಆನಂದಿಸಲು ಬೀಚ್ ಅಥವಾ ಪೂಲ್ ಇರುವ ಸ್ಥಳಗಳಿಗೆ ಹೋಗಲು ಇಷ್ಟ ಪಡುತ್ತೀರಾ ಅಲ್ವಾ. ಹಾಗಾಗಿ ಒಂದು ಸ್ವಿಮ್ ಸೂಟ್‌ನ್ನು ಜೊತೆಗೆ ತೆಗೆದುಕೊಂಡು ಹೋಗಿ.

5 / 10
Summer travel

ಪೋರ್ಟೆಬಲ್ ಚಾರ್ಜರ್: ಇದು ನಿಮ್ಮ ಬಳಿ ಇರಬೇಕಾದ ಮುಖ್ಯ ವಸ್ತುಗಳಲ್ಲಿ ಒಂದಾಗಿದೆ. ಮೊಬೈಲ್‌ನಿಂದ ಹಿಡಿದು ಯಾವುದೇ ಸಾಧನವನ್ನು ಈ ಪೋರ್ಟೆಬಲ್ ಚಾರ್ಜರ್‌ನಿಂದ ಚಾರ್ಜ್ ಮಾಡಿಕೊಳ್ಳಬಹುದು. ಮತ್ತು ಪ್ರತಿಯೊಂದು ಸಾಧನಕ್ಕೂ ಹೊಂದಿಕೊಳ್ಳುವ ಚಾರ್ಜಿಂಗ್ ಕೇಬಲ್‌ಗಳನ್ನು ತನ್ನಿ. ಹಗುರವಾದ ಉಡುಪುಗಳನ್ನು ಪ್ಯಾಕ್ ಮಾಡಿ. ಜೊತೆಗೆ ಲಘು ಜಾಕೆಟ್ ಅಥವಾ ಸ್ವೆಟರ್‌ನ್ನು ಕೂಡಾ ತೆಗೆದುಕೊಂಡು ಹೋಗಲು ಮರೆಯದಿರಿ.

6 / 10
Summer travel

ಪ್ರಯಾಣದ ದಿಂಬು: ದೀರ್ಘ ಕಾಲದ ವಿಮಾನ ಅಥವಾ ಕಾರ್ ಪ್ರಯಾಣವು ಆಯಾಸವನ್ನುಂಟುಮಾಡಬಹುದು. ಪ್ರಯಾಣದಲ್ಲಿ ಸುಗಮವಾಗಿ ನಿದ್ರಿಸಲು ಪ್ರಯಾಣದ ದಿಂಬನ್ನು ತೆಗೆದುಕೊಂಡು ಹೋಗಿ.

7 / 10
Summer travel

ಕೀಟ ನಿವಾರಕಗಳು: ಪ್ರವಾಸದ ಸಮಯದಲ್ಲಿ ಸೊಳ್ಳೆ ಅಥವಾ ಇತರ ಕೀಟಗಳ ಕಾಟದಿಂದ ತಪ್ಪಿಸಿಕೊಳ್ಳಲು ಕೀಟನಾಶಕ ಸ್ಪೆಗಳನ್ನು ಜೊತೆಗಿರಿಸಿಕೊಳ್ಳಿ.

8 / 10
Summer travel

ನೀರಿನ ಬಾಟಲಿ: ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಯನ್ನು ಪ್ರವಾಸದ ಸಮಯದಲ್ಲಿ ಬಳಸುವ ಮೂಲಕ ಹೆಚ್ಚು ನೀರು ಕುಡಿಯುತ್ತಾ ನಿಮ್ಮನ್ನು ನೀಡು ಹೈಡ್ರೀಕರಿಸಿಕೊಳ್ಳಬಹುದು. ನಿಮ್ಮ ಲಗೇಜ್‌ನಲ್ಲಿ ಜಾಗ ಉಳಿಸಿಕೊಳ್ಳಲು ಶಾಂಪೂ, ಕಂಡೀಷನರ್, ಬಾಡಿವಾಶ್‌ಗಳಂತಹ ಸ್ನಾನದ ವಸ್ತುಗಳನ್ನು ಇಡಲು ಸಣ್ಣ ಬ್ಯಾಗ್‌ನ್ನು ಲಗೇಜ್‌ನಲ್ಲಿ ಇರಿಸಿಕೊಳ್ಳಿ.

9 / 10
Summer travel

ಆರಾಮದಾಯಕ ಬೂಟುಗಳು: ಹೈಕಿಂಗ್‌ನಿಂದ ಹಿಡಿದು ಹೊಸ ನಗರಗಳನ್ನು ಅನ್ವೇಷಿಸುವವರೆಗೆ ಬೇಸಿಗೆಯ ಸಾಹಸೀಮಯ ಪ್ರವಾಸವನ್ನು ಆನಂದಿಸಲು ಆರಾಮದಾಯಕ ಹಗುರವಾದ ಬೂಟುಗಳನ್ನು ಧರಿಸಿ.

10 / 10

Published On - 3:10 pm, Thu, 23 March 23

Follow us