AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vitamin E capsules: ಆರೋಗ್ಯಕರ ಚರ್ಮ ಮತ್ತು ಕೂದಲಿಗೆ ವಿಟಮಿನ್ ಇ ಕ್ಯಾಪ್ಸುಲ್‌

ವಿಟಮಿನ್ ಇ ಕ್ಯಾಪ್ಸುಲ್‌ಗಳು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮುಖದ ಸುಕ್ಕುಗಳನ್ನು ಕಡಿಮೆ ಮಾಲು ಮತ್ತು ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಇದು ಸಹಕಾರಿಯಾಗಿದೆ.

Vitamin E capsules: ಆರೋಗ್ಯಕರ ಚರ್ಮ ಮತ್ತು ಕೂದಲಿಗೆ ವಿಟಮಿನ್ ಇ ಕ್ಯಾಪ್ಸುಲ್‌
Image Credit source: BeBeautiful
ಅಕ್ಷತಾ ವರ್ಕಾಡಿ
|

Updated on: Mar 24, 2023 | 7:00 AM

Share

ವಿಟಮಿನ್ ಇ ಕ್ಯಾಪ್ಸುಲ್‌ಗಳು ಚರ್ಮ ಮತ್ತು ಕೂದಲಿಗೆ ಅನುಕೂಲಕರ ಮತ್ತು ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ. ಈ ವಿಟಮಿನ್ ಇ ಕ್ಯಾಪ್ಸುಲ್‌ಗಳು ಹಲವು ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ. ಇವುಗಳನ್ನು ಮುಖ ಹಾಗೂ ಕೂದಲಿನ ಮೇಲೆ ಯಾವ ರೀತಿ ಬಳಸಬೇಕು ಮತ್ತು ಇದು ಯಾವೆಲ್ಲಾ ಉಪಯೋಗವನ್ನು ಹೊಂದಿದೆ ಎಂಬದರ ಬಗ್ಗೆ ನಿಮಗೆ ತಿಳಿದಿಲ್ಲವೇ? ಅದನ್ನು ಹೇಗೆ ಬಳಸುವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾಯಿಶ್ಚರೈಸರ್:

ವಿಟಮಿನ್ ಇ ಕ್ಯಾಪ್ಸುಲ್‌ನ್ನು ತೆರೆಯಿರಿ ಮತ್ತು ಅದರಲ್ಲಿನ ಎಣ್ಣೆಯನ್ನು ನೇರವಾಗಿ ನಿಮ್ಮ ಚರ್ಮಕ್ಕೆ ಅನ್ವಯಿಸಿ. ನಿಧಾನವಾಗಿ ಎಣ್ಣೆಯನ್ನು ಚರ್ಮಕ್ಕೆ ಅನ್ವಯಿಸಿ ಇದು ನಿಮ್ಮ ನಿಮ್ಮ ತ್ವಚೆಯನ್ನು ಹೈಡ್ರೇಟ್ ಮಾಡಲು ಸಹಕರಿಸುತ್ತದೆ. ಶುಷ್ಕ ಚರ್ಮವನ್ನು ಹೊಂದಿರುವವರಿಗೆ ವಿಟಮಿನ್ ಇ ಕ್ಯಾಪಸುಲ್ ವಿಶೇಷವಾಗಿ ಪ್ರಯೋಜಕಾರಿಯಾಗಿದೆ.

ವಯಸ್ಸಾಗುವಿಕೆಯ ವಿರೋಧಿ ಚಿಕಿತ್ಸೆ:

ವಿಟಮಿನ್ ಇ ಎಣ್ಣೆಯ ಕೆಲವು ಹನಿಗಳನ್ನು ತೆಗೆದುಕೊಳ್ಳಿ ಮತ್ತು ರಾತ್ರಿಯಲ್ಲಿ ನೀವು ಮಲಗುವ ಮೊದಲು ನಿಮ್ಮ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಅದನ್ನು ಅನ್ವಯಿಸಿ. ವಿಟಮಿನ್ ಇ ಕ್ಯಾಪ್ಸುಲ್ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಅದು ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಿ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ.

ಸನ್‌ಬರ್ನ್ ಚಿಕಿತ್ಸೆ:

ವಿಟಮಿನ್ ಇ ಕ್ಯಾಪ್ಸುಲ್ ಬಿಸಿಲಿನಿಂದ ಸುಟ್ಟ ಚರ್ಮವನ್ನು ಶಮನಗೊಳಿಸಲು ಮತ್ತು ಗುಣಪಡಿಸಲು ಸಹಾಯ ಮಾಡುತ್ತದೆ.

ಗಾಯದ ಚಿಕಿತ್ಸೆ:

ಹಾನಿಗೊಳಗಾದ ಚರ್ಮವನ್ನು ಗುಣಪಡಿಸಲು ಮತ್ತು ಸಹಜ ಸ್ಥಿತಿಗೆ ಮರಳಿಸಲು ವಿಟಮಿನ್ ಇ ಕ್ಯಾಪ್ಸುಲ್ ಸಹಾಯ ಮಾಡುತ್ತದೆ. ಗಾಯವಾಗಿರುವ ಸ್ಥಳಕ್ಕೆ ಪ್ರತಿದಿನ ವಿಟಮಿನ್ ಇ ಎಣ್ಣೆಯನ್ನು ಅನ್ವಯಿಸಿ.

ಕೂದಲು ಬೆಳವಣಿಗೆಯ ಚಿಕಿತ್ಸೆ:

ವಿಟಮಿನ್ ಇ ಎಣ್ಣೆಯನ್ನು ನಿಮ್ಮ ನೆತ್ತಿಯ ಮೇಲೆ ಮಸಾಜ್ ಮಾಡುವುದರಿಂದ ಅದು ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವಿಟಮಿನ್ ಇ ಯ ರಕ್ತ ಪರಿಚಲನೆಯನ್ನು ವರ್ಧಿಸುವ ಗುಣಲಕ್ಷಣಗಳ ಪರಿಣಾಮವಾಗಿ, ಅದು ಕೂದಲಿನ ಕಿರುಚೀಲವನ್ನು ಪೋಷಿಸುತ್ತದೆ.

ಇದನ್ನೂ ಓದಿ: ಡಾರ್ಕ್ ಸರ್ಕಲ್ಸ್​ ಬರಲು ಕಾರಣವೇನು? ಜೀವನಶೈಲಿಯೋ..ಅನುವಂಶಿಕ ಸಮಸ್ಯೆಯೋ?

ಹೇರ್ ಕಂಡಿಷನರ್:

ನಿಮ್ಮ ನಿಯಮಿತ ಕಂಡಿಷನರ್‌ಗೆ ಕೆಲವು ಹನಿ ವಿಟಮಿನ್ ಇ ಎಣ್ನೆಯನ್ನು ಸೇರಿಸುವುದರಿಂದ ನಿಮ್ಮ ಕೂದಲನ್ನು ಪೋಷಣೆ ಮಾಡಲು ಅದು ಸಹಾಯ ಮಾಡುತ್ತದೆ ಮತ್ತು ಹೈಡ್ರೇಟ್ ಮಾಡುತ್ತದೆ. ಜೊತೆಗೆ ಕೂದಲನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ.

ಕೂದಲು ಒಡೆಯುದಕ್ಕೆ ಚಿಕಿತ್ಸೆ:

ಕೂದಲಿನ ಒಡೆಯುವುದನ್ನು ವಿಟಮಿನ್ ಇ ಎಣ್ಣೆಯಿಂದ ನಿವಾರಿಸಬಹುದು. ಕೂದಲಿನ ತುದಿಗೆ ವಿಟಮಿನ್ ಇ ಎಣ್ಣೆಯನ್ನು ಅನ್ವಯಿಸುವ ಮೂಲಕ ಕೂದಲು ಭಾಗವಾಗುವುದನ್ನು ತಡೆಯಬಹುದು. ನಿಮ್ಮ ಚರ್ಮ ಅಥವಾ ಕೂದಲಿನ ಮೇಲೆ ಉತ್ತಮ ಗುಣಮಟ್ಟದ ವಿಟಮಿನ್ ಇ ಕ್ಯಾಪ್ಸುಲ್‌ಗಳನ್ನು ಮಾತ್ರ ಬಳಸಿ. ಮತ್ತು ಇದು ನೈಸರ್ಗಿಕ ಪದಾರ್ಥಗಳಿಂದ ತಯಾರಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ವಿಟಮಿನ್ ಈ ಕ್ಯಾಪ್ಸುಲ್‌ಗಳ ನಿಯಮಿತ ಬಳಕೆಯು ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ : 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ