Indian Pickles: ಭಾರತೀಯ ಉಪ್ಪಿನಕಾಯಿಗಳ ಬಗ್ಗೆ ನಿಮಗೆಷ್ಟು ಗೊತ್ತು? ಇದು ಆರೋಗ್ಯಕ್ಕೆ ಹೇಗೆ ಉತ್ತಮ

ಉಪ್ಪಿನಕಾಯಿ ಊಟಕ್ಕೆ ರುಚಿಯನ್ನು ನೀಡುತ್ತದೆ. ಹಾಗೂ ಅದು ಜೀರ್ಣಕ್ರಿಯೆಯನ್ನು ಸಹ ಸುಗಮಗೊಳಿಸುತ್ತದೆ. ಭಾರತೀಯ ಊಟದಲ್ಲಿ ಉಪ್ಪಿನಕಾಯಿ ಇದ್ದೇ ಇರುತ್ತದೆ. ಮಾವಿನಕಾಯಿಯಿಂದ ಹಿಡಿದು ವಿವಿಧ ತರಕಾರಿಗಳವರೆಗೆ ಅನೇಕ ಬಗೆಯ ಉಪ್ಪಿನಕಾಯಿಗಳನ್ನು ಕಾಣಬಹುದು.

Indian Pickles: ಭಾರತೀಯ ಉಪ್ಪಿನಕಾಯಿಗಳ ಬಗ್ಗೆ ನಿಮಗೆಷ್ಟು ಗೊತ್ತು? ಇದು ಆರೋಗ್ಯಕ್ಕೆ ಹೇಗೆ ಉತ್ತಮ
ಸಾಂರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 23, 2023 | 12:17 PM

ಉಪ್ಪಿನಕಾಯಿಯನ್ನು ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳಿಂದ ಮಾಡಲಾಗುತ್ತದೆ. ಈ ಉಪ್ಪಿನಕಾಯಿ ಭಾರತೀಯ ಊಟಗಳಲ್ಲಿ ಪ್ರತಿನಿತ್ಯವೂ ಇರುತ್ತದೆ. ಇವುಗಳ ಸಿಹಿ, ಉಪ್ಪು, ಹುಳಿ, ಮತ್ತು ಮಸಾಲೆಯುಕ್ತ ಸುವಾಸನೆಯುಕ್ತ ರುಚಿಕರವಾದ ಮಿಶ್ರಣವು ಊಟದ ರುಚಿಯನ್ನು ಹೆಚ್ಚು ಮಾಡುತ್ತದೆ. ಈ ಉಪ್ಪಿನಕಾಯಿಯು ಜೀರ್ಣಾಂಗ ವ್ಯವಸ್ಥೆಯನ್ನು ಬೆಂಬಲಿಸುವ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಉಪ್ಪಿನಕಾಯಿಯನ್ನು ಬೇರೆ ಬೇರೆ ವಿಧಾನಗಳಲ್ಲಿ ತಯಾರಿಸಲಾಗುತ್ತದೆ. ಹಾಗೂ ತರಹೇವಾರಿ ಹಣ್ಣು ತರಕಾರಿಗಲನ್ನು ಬಳಸಿ ಬಗೆಬಗೆಯ ಉಪ್ಪಿನಕಾಯಿಯನ್ನು ತಯಾರಿಸುತ್ತಾರೆ.

ಎಲ್ಲಾ ಉಪ್ಪಿನಕಾಯಿಗಳು ಆರೋಗ್ಯಕರವೇ?

ಹೌದು ಉಪ್ಪಿನಕಾಯಿ ಆರೋಗ್ಯಕರ ಮತ್ತು ಸೂಪರ್ ಫುಡ್ ಎಂಬ ಬಿರುದನ್ನು ಗಳಿಸಿದೆ. ಅವುಗಳನ್ನು ಹುದುಗುವಿಕೆಯ ಪ್ರಕ್ರಿಯೆಯನ್ನು ಬಳಸಿ ತಯಾರಿಸಲ್ಪಡುವುದರಿಂದ, ಅವುಗಳಲ್ಲಿ ನಮ್ಮ ಕರುಳನ್ನು ಆರೋಗ್ಯಕರವಾಗಿರಿಸುವಂತಹ ಆರೋಗ್ಯ ಪ್ರಯೋಜಕ ಗುಣಗಳು ತುಂಬಿರುತ್ತವೆ. ಅಂಗಡಿಗಳಲ್ಲಿ ತಯಾರಿಸಿದ ಉಪ್ಪಿನಕಾಯಿಗಳನ್ನು ಬಳಸುವುದಕ್ಕಿಂತ ನೀವೇ ಸ್ವತಃ ಮನೆಯಲ್ಲಿ ರುಚಿಕರವಾದ ಬಗೆಬಗೆಯ ಉಪ್ಪಿನಕಾಯಿಗಳನ್ನು ತಯಾರಿಸುವುದು ಉತ್ತಮ.

ವಿವಿಧ ಬಗೆಯ ಭಾರತೀಯ ಉಪ್ಪಿನಕಾಯಿಗಳು:

ಮಾವಿನಕಾಯಿ ಉಪ್ಪಿನಕಾಯಿ: ಮಾವು ಬೇಸಿಗೆಯ ಪ್ರಿಯವಾದ ಹಣ್ಣಾಗಿದೆ. ಮತ್ತು ಅದರಲ್ಲಿ ತಯಾರಿಸುವ ಉಪ್ಪಿನಕಾಯಿ ಇನ್ನೂ ಜನಪ್ರಿಯವಾಗಿದೆ. ಮಾವಿನಕಾಯಿ ಉಪ್ಪಿನಕಾಯಿಯ ಹುಳಿ ಸಿಹಿ ಮಿಶ್ರಣದಿಂದಾಗಿ ಅದು ಭಾರತದಲ್ಲಿ ತನ್ನದೇ ಆದ ಪ್ರಸಿದ್ಧಿಯನ್ನು ಗಳಿಸಿದೆ. ಇದು ಫೈಬರ್, ವಿಟಮಿನ್ ಕೆ ಮತ್ತು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಈ ಉಪ್ಪಿನಕಾಯಿಯನ್ನು ಊಟದ ಜೊತೆ ತಿನ್ನುವುದರೊಂದಿಗೆ ನಿಮ್ಮ ದೇಹಕ್ಕೆ ಬೇಕಾದ ವಿವಿಧ ಪೋಷಕಾಂಶಗಳನ್ನು ಪಡೆಯಬಹುದು. ಊಟದೊಂದಿಗೆ ಮಾವಿನಕಾಯಿ ಉಪ್ಪಿನಕಾಯಿ ತಿನ್ನಲು ಬಲು ರುಚಿಕರವಾಗಿರುತ್ತದೆ.

ನಿಂಬೆ ಉಪ್ಪಿನಕಾಯಿ: ನಿಮ್ಮ ಬಳಿ ಸಾಕಷ್ಟು ನಿಂಬೆಹಣ್ಣುಗಳಿದ್ದರೆ, ಅವುಗಳಿಂದ ಸುಲಭವಾಗಿ ಉಪ್ಪಿನಕಾಯಿಯನ್ನು ತಯಾರಿಸಬಹುದು. ನಿಂಬೆಹಣ್ಣುಗಳು ರಸಭರಿತವಾಗಿರುತ್ತದೆ. ಮತ್ತು ಅವುಗಳಿಗೆ ಮೆಣಸಿನಕಾಯಿ, ಮೆಂತ್ಯೆ ಹಾಗೂ ಇತರ ಮಸಾಲೆಗಳನ್ನು ಸೇರಿಸಿ ಉಪ್ಪಿನಕಾಯಿ ತಯಾರಿಸಿದರೆ ಅದರ ರುಚಿ ಇನ್ನೂ ಅದ್ಭುತವಾಗಿರುತ್ತದೆ. ನಿಂಬೆ ಉಪ್ಪಿನಕಾಯಿಯು ವಿಟಮಿನ್ ಬಿ ಅಂಶದಿಂದ ಸಮೃದ್ಧವಾಗಿದೆ ಹಾಗೂ ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಕ್ಯಾರೆಟ್ ಉಪ್ಪಿನಕಾಯಿ: ಈ ಉಪ್ಪಿನಕಾಯಿಯನ್ನು ತಯಾರಿಸಲು ಚಳಿಗಾಲವು ತುಂಬಾ ಸೂಕ್ತವಾಗಿದೆ. ರಸಭರಿತವಾದ ಕ್ಯಾರೆಟ್‌ಗಳಿಗೆ ಸರಿಯಾದ ಮಸಾಲೆಗಳನ್ನು ಸೇರಿಸಿ ಉಪ್ಪಿನಕಾಯಿ ತಯಾರಿಸಿ ಅದನ್ನು ಊಟದ ಜೊತೆ ಸೇವಿಸಿದರೆ ಅದರ ರುಚಿ ಅದ್ಭುತವಾಗಿರುತ್ತದೆ. ಕ್ಯಾರೆಟ್ ವಿಟಮಿನ್ ಎ ಯಿಂದು ಸಮೃದ್ಧವಾಗಿದ್ದು, ಇದು ಕಣ್ಣುಗಳಿಗೆ ತುಂಬಾ ಒಳ್ಳೆಯದು.

ನೆಲ್ಲಿಕಾಯಿ ಉಪ್ಪಿನಕಾಯಿ: ನೆಲ್ಲಿಕಾಯಿ ಹುಳಿ ಮತ್ತು ಕಹಿ ರುಚಿಗಳಿಂದ ತುಂಬಿದ್ದು ಹೆಚ್ಚಿನ ಜನರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಹಾಗಾಗಿ ಇವುಗಳಿಂದ ಉಪ್ಪಿನಕಾಯಿ ತಯಾರಿಸಿ ಬಳಿಕ ಇದನ್ನು ತಿನ್ನಬಹುದು. ಈ ನೆಲ್ಲಿಕಾಯಿ ಉಪ್ಪಿನಕಾಯಿ ರೋಗನಿರೋಧಕ ಶಕ್ತಿಯನ್ನು ಹೊಂದಿವೆ ಹಾಗೂ ಇದು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದನ್ನೂ ಓದಿ: Pickle: ಉಪ್ಪಿನಕಾಯಿ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ ಇಲ್ಲಿದೆ ಮಾಹಿತಿ

ಬೆಳ್ಳುಳ್ಳಿ ಉಪ್ಪಿನಕಾಯಿ: ಬೆಳ್ಳುಳ್ಳಿ ಯಾವುದೇ ಖಾದ್ಯದ ಪರಿಮಳವನ್ನು ಹೆಚ್ಚಿಸುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಅದು ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮತ್ತು ಸ್ವಲ್ಪ ಪ್ರಮಾಣದ ಬೆಳ್ಳುಳ್ಳಿ ಉಪ್ಪಿನಕಾಯಿ ಸೇವಿಸುವುದರಿಂದ ನಮ್ಮ ದೇಹವು ಜ್ವರ ಮತ್ತು ನೆಗಡಿಯ ವಿರುದ್ಧ ಹೋರಾಡಲು ಅದು ಸಹಾಯ ಮಾಡುತ್ತದೆ.

ಹಸಿ ಮೆಣಸಿನಕಾಯಿ ಉಪ್ಪಿನಕಾಯಿ: ನೀವು ಮಸಾಲೆಯುಕ್ತ ಊಟವನ್ನು ಬಯಸಿದರೆ ಊಟದ ಜೊತೆಗೆ ಒಂದು ಚಮಚ ಹಸಿಮೆಣಸಿನಕಾಯಿ ಉಪ್ಪಿನಕಾಯಿಯನ್ನು ಸೇವಿಸಿ. ಹಸಿಮೆಣಸಿನಕಾಯಿ ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ ಮತ್ತು ಅವುಗಳನ್ನು ಊಟದ ಜೊತೆ ಸೇರಿಸುವುದರಿಂದ ನಿಮ್ಮ ದೇಹದ ಕಬ್ಬಿನಾಂಶವನ್ನು ಹೆಚ್ಚಿಸಬಹುದು.

ತರಕಾರಿ ಉಪ್ಪಿನಕಾಯಿ: ತರಕಾರಿ ಉಪ್ಪಿನಕಾಯಿಯಲ್ಲಿ ವಿವಿಧ ಬಗೆಯ ಪೋಷಕಾಂಶಗಳು ತುಂಬಿರುತ್ತವೆ. ಇವುಗಳಲ್ಲಿ ಕ್ಯಾರೆಟ್, ಹೂಕೋಸು, ನಿಂಬೆ, ಮಾವಿನಕಾಯಿ, ಹಸಿಮೆಣಸಿನಕಾಯಿ ಹಾಗೂ ಹೆಚ್ಚಿನ ತರಕಾರಿಗಳು ಸೇರಿರುತ್ತವೆ. ಈ ರುಚಿಕರವಾದ ತರಕಾರಿ ಉಪ್ಪಿನಕಾಯಿ ಊಟದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ