AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Healthy Summer Food: ಬೇಸಿಗೆಯಲ್ಲಿ ರುಚಿಕರ ಹಾಗೂ ಆರೋಗ್ಯಕರ ಎಳನೀರು ಹಲ್ವಾ ತಯಾರಿಸಿ ರೆಸಿಪಿ ಇಲ್ಲಿದೆ

ಎಳನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಆದರೆ ಪ್ರತೀ ದಿನ ಎಳನೀರು ಕುಡಿಯಲು ಯಾರಿಗೆ ತಾನೇ ಇಷ್ಟವಾಗುತ್ತೇ ಹೇಳಿ. ಆದ್ದರಿಂದ ಈ ಬೇಸಿಎಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ರುಚಿಕರ ಹಾಗೂ ಆರೋಗ್ಯಕರ ಎಳನೀರು ಹಲ್ವಾ ತಯಾರಿಸಿ ಸವಿಯಿರಿ.

Healthy Summer Food: ಬೇಸಿಗೆಯಲ್ಲಿ ರುಚಿಕರ ಹಾಗೂ ಆರೋಗ್ಯಕರ ಎಳನೀರು ಹಲ್ವಾ ತಯಾರಿಸಿ ರೆಸಿಪಿ ಇಲ್ಲಿದೆ
ಎಳನೀರು ಹಲ್ವಾ ರೆಸಿಪಿImage Credit source: Manjaly Halwa
ಅಕ್ಷತಾ ವರ್ಕಾಡಿ
|

Updated on: Mar 23, 2023 | 7:00 AM

Share

ಮುಖ್ಯಾಂಶಗಳು

  • ಬೇಸಿಗೆ ಆರಂಭವಾಗಿದೆ, ಈ ಸಮಯದಲ್ಲಿ ನಿಮ್ಮ ದೇಹವನ್ನು ತೇವಾಂಶ ಕಳೆದುಕೊಳ್ಳದಂತೆ ಕಾಪಾಡುವುದು ಅಗತ್ಯವಾಗಿದೆ. ಆದ್ದರಿಂದ ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಎಳನೀರು ಉತ್ತಮ ಆಯ್ಕೆಯಾಗಿದೆ.
  • ಇತ್ತೀಚೆಗಷ್ಟೇ ಭಟ್​ ಆ್ಯಂಡ್​​ ಭಟ್​​ ಫೇಸ್​ ಬುಕ್​​ ಪೇಜ್​ನಲ್ಲಿ ಈ ಆರೋಗ್ಯಕರ ಎಳನೀರು ಹಲ್ವಾ ಮಾಡುವ ಪಾಕ ವಿಧಾನವನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್​​ ಇಲ್ಲಿದೆ ನೋಡಿ.
  • ಎಳನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಆದರೆ ಪ್ರತೀ ದಿನ ಎಳನೀರು ಕುಡಿಯಲು ಯಾರಿಗೆ ತಾನೇ ಇಷ್ಟವಾಗುತ್ತೇ ಹೇಳಿ. ಆದ್ದರಿಂದ ಈ ಬೇಸಿಎಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ರುಚಿಕರ ಹಾಗೂ ಆರೋಗ್ಯಕರ ಎಳನೀರು ಹಲ್ವಾ ತಯಾರಿಸಿ ಸವಿಯಿರಿ.

ಬೇಸಿಗೆ ಆರಂಭವಾಗಿದೆ, ಈ ಸಮಯದಲ್ಲಿ ನಿಮ್ಮ ದೇಹವನ್ನು ತೇವಾಂಶ ಕಳೆದುಕೊಳ್ಳದಂತೆ ಕಾಪಾಡುವುದು ಅಗತ್ಯವಾಗಿದೆ. ಆದ್ದರಿಂದ ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಎಳನೀರು ಉತ್ತಮ ಆಯ್ಕೆಯಾಗಿದೆ. ಎಳನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಆದರೆ ಪ್ರತೀ ದಿನ ಎಳನೀರು ಕುಡಿಯಲು ಯಾರಿಗೆ ತಾನೇ ಇಷ್ಟವಾಗುತ್ತೇ ಹೇಳಿ. ಆದ್ದರಿಂದ ಈ ಬೇಸಿಎಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ರುಚಿಕರ ಹಾಗೂ ಆರೋಗ್ಯಕರ ಎಳನೀರು ಹಲ್ವಾ ತಯಾರಿಸಿ ಸವಿಯಿರಿ. ಹಲ್ವಾ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ. ಇತ್ತೀಚೆಗಷ್ಟೇ ಭಟ್​ ಆ್ಯಂಡ್​​ ಭಟ್​​ ಫೇಸ್​ ಬುಕ್​​ ಪೇಜ್​ನಲ್ಲಿ ಈ ಆರೋಗ್ಯಕರ ಎಳನೀರು ಹಲ್ವಾ ಮಾಡುವ ಪಾಕ ವಿಧಾನವನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್​​ ಇಲ್ಲಿದೆ ನೋಡಿ.

ಎಳನೀರು ಹಲ್ವಾ ರೆಸಿಪಿ

ಬೇಕಾಗುವ ಪದಾರ್ಥಗಳು:

  • 1 ಎಳನೀರು
  • 3 ಲೋಟ ಸಕ್ಕರೆ
  • 1 ಲೋಟ ಜೋಳದ ಹಿಟ್ಟು
  • 2 ಲೋಟ ನೀರು
  • 4 ಚಮಚ ತುಪ್ಪ
  • 1/2 ಕಪ್​​​ ಹಾಲಿನಲ್ಲಿ ಬೆರೆಸಿದ ಕೇಸರಿ
  • 1/2 ಕಪ್​​​ ತುಪ್ಪದಲ್ಲಿ ಹುರಿದ ಗೇರುಬೀಜ

ಇದನ್ನೂ ಓದಿ: ಉಳಿದಿರುವ ಆಲೂ ಭಾಜಿಯಿಂದ ಸುಲಭವಾಗಿ ತಯಾರಿಸಬಹುದಾದ ಪಾಕವಿಧಾನ ಇಲ್ಲಿದೆ

ಎಳನೀರು ಹಲ್ವಾ ಮಾಡುವ ವಿಧಾನ:

ಮೊದಲಿಗೆ ಒಂದು ಎಳನೀರು ಮತ್ತು ಅದರ ಗಂಜಿಯನ್ನು ತೆಗೆದುಕೊಂಡು ಪಾತ್ರೆಗೆ ಹಾಕಿಡಿ. ನಂತರ ಎಳನೀರು ಸೇರಿಸಿ ಅದರ ಗಂಜಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಈಗ ಸಕ್ಕರೆಯನ್ನು ಸೇರಿಸಿ. ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಈಗಾಗಲೇ ನುಣ್ಣಗೆ ರುಬ್ಬಿ ಇಟ್ಟ ಈ ಎಳನೀರಿನ ಹಿಟ್ಟನ್ನು ಕಾಯಿಸಿ. ನಂತರ ಒಂದು ಚಿಕ್ಕ ಪಾತ್ರೆಯಲ್ಲಿ ಜೋಳದ ಹಿಟ್ಟು ಹಾಕಿ, ಅದಕ್ಕೆ ಸ್ವಲ್ಪ ನೀರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಈಗ ಪಾತ್ರೆಯಲ್ಲಿ ಕಾಯಿಸಿದ ಎಳನೀರಿನ ಮಿಶ್ರಣಕ್ಕೆ ಹಾಕಿ. ಇದನ್ನೆಲ್ಲ ಈಗ ತಳ ಹಿಡಿಯದಂತೆ ಕಡಿಮೆ ಉರಿಯಲ್ಲಿ ಕಾಯಿಸಿ. ಇದಕ್ಕೆ ಈಗ ತುಪ್ಪವನ್ನು ಸೇರಿಸಿ. ನಂತರ ಹಾಕಿನಲ್ಲಿ ನೆನೆಸಿಟ್ಟ ಕೇಸರಿಯನ್ನು ಸೇರಿಸಿ. ನಂತರ ತುಪ್ಪದಲ್ಲಿ ಹುರಿದಿಟ್ಟ ಗೇರು ಬೀಜ ಸೇರಿಸಿ. ಈಗ ಬಿಸಿ ಬಿಸಿ ಹಲ್ವಾ ಸಿದ್ಧವಾಗಿದೆ. ಒಂದು ಬಟ್ಟಲಿಗೆ ಎಣ್ಣೆಯನ್ನು ಸವರಿ ಅದಕ್ಕೆ ಈಗ ಬಿಸಿ ಹಲ್ವಾವನ್ನು ಹಾಕಿ ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಒಂದೇ ಸಮನಾಗಿ ಕತ್ತರಿಸಿ. ಈಗ ರುಚಿ ರುಚಿಯಾದ ಎಳನೀರು ಹಲ್ವಾ ಸಿದ್ಧವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ