
ಸ್ವಿಸ್ ಓಪನ್‌ನಲ್ಲಿ ಶುಭಾರಂಭ ಮಾಡಿರುವ ಭಾರತದ ಸ್ಟಾರ್ ಶೆಟ್ಲರ್ ಪಿವಿ ಸಿಂಧು ಬಾಸೆಲ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 21-9, 21-16 ನೇರ ಸೆಟ್ಗಳಿಂದ ಜೆಂಜಿರಾ ಸ್ಟಾಡೆಲ್‌ಮನ್ ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಎಂಟ್ರಿಕೊಟ್ಟಿದ್ದಾರೆ. ಸಿಂಧು ತಮ್ಮ ಮುಂದಿನ ಪಂದ್ಯದಲ್ಲಿ ಇಂಡೋನೇಷ್ಯಾದ ಕುಸುಮಾ ವಾರ್ದಾನಿಯನ್ನು ಎದುರಿಸಲಿದ್ದಾರೆ.

ಸಿಂಧು ಹೊರತಾಗಿ ಪುರುಷರ ಸಿಂಗಲ್ಸ್ನಲ್ಲಿ ಕಿಡಂಬಿ ಶ್ರೀಕಾಂತ್, ಎಚ್.ಎಸ್. ಪ್ರಣಯ್, ಮಿಥುನ್ ಮಂಜುನಾಥ್ ಮತ್ತು ಪುರುಷರ ಡಬಲ್ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಕೂಡ ಎರಡನೇ ಸುತ್ತಿಗೆ ತಲುಪಿದ್ದಾರೆ.

ಪುರುಷರ ಸಿಂಗಲ್ಸ್ನಲ್ಲಿ 21-16, 15-21, 21-18 ರಲ್ಲಿ ವೆಂಗ್ ಹಾಂಗ್ ಯಾಂಗ್ ಅವರನ್ನು ಸೋಲಿಸಿದ ಶ್ರೀಕಾಂತ್, ಮುಂದಿನ ಪಂದ್ಯದಲ್ಲಿ ಲೀ ಚೆಯುಕ್ ಯಿಯು ಅವರನ್ನು ಎದುರಿಸಲಿದ್ದಾರೆ.

ಹಾಗೆಯೇ ಮತ್ತೊಬ್ಬ ಶೆಟ್ಲರ್ ಪ್ರಣಯ್ ಅವರು 21-17, 19-21, 21-17ರಲ್ಲಿ ಶಿ ಯು ಕಿ ಅವರನ್ನು ಸೋಲಿಸಿದ್ದು, ತಮ್ಮ ಎರಡನೇ ಸುತ್ತಿನಲ್ಲಿ ಕ್ರಿಸ್ಟೋ ಪೊಪೊವ್ ವಿರುದ್ಧ ಸೆಣಸಲಿದ್ದಾರೆ.

ಮಿಥುನ್ ಮಂಜುನಾಥ್ ಕೂಡ ತಮ್ಮ ಮೊದಲ ಪಂದ್ಯದಲ್ಲಿ ಜೊರಾನ್ ಕ್ವೀಕೆಲ್ ವಿರುದ್ಧ 21-8, 21-17 ಸೆಟ್ಗಳ ಅಂತರದಲ್ಲಿ ಗೆದ್ದು, ಎರಡನೇ ಸುತ್ತಿಗೆ ಮುನ್ನಡೆದ್ದಿದ್ದಾರೆ. ಇದೀಗ ತಮ್ಮ ಎರಡನೇ ಸುತ್ತಿನಲ್ಲಿ ಚೈನೀಸ್ ತೈಪೆಯ ಚಿಯಾ ಹಾವೊ ಲೀ ಅವರನ್ನು ಎದುರಿಸಲಿದ್ದಾರೆ

ಇನ್ನು ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಮತ್ತು ಚಿರಾಗ್ 21-15, 21-18 ಸೆಟ್ಗಳಿಂದ ಬೂನ್ ಕ್ಸಿನ್ ಯುವಾನ್ ಮತ್ತು ವಾಂಗ್ ಟಿಯೆನ್ ಸಿಯನ್ನು ಸೋಲಿಸಿದರು. ಭಾರತದ ಜೋಡಿ ಈಗ ಎರಡನೇ ಸುತ್ತಿನಲ್ಲಿ ಚೈನೀಸ್ ತೈಪೆಯ ಫಾಂಗ್-ಚಿಹ್ ಲೀ ಮತ್ತು ಫಾಂಗ್-ಜೆನ್ ಲೀ ಅವರನ್ನು ಎದುರಿಸಲಿದೆ.
Published On - 12:36 pm, Thu, 23 March 23