AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೋಶ್ ಟಂಗ್​ ಕರಾರುವಾಕ್ ದಾಳಿಯಿಂದ ಆಸ್ಟ್ರೇಲಿಯಾಗೆ 60 ಕೋಟಿ ರೂ. ನಷ್ಟ..!

Ashes 2025: ಆ್ಯಶಸ್ ಸರಣಿಯ 4ನೇ ಪಂದ್ಯದಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಇಂಗ್ಲೆಂಡ್ ವೇಗಿ ಜೋಶ್ ಟಂಗ್ ಒಟ್ಟು 7 ವಿಕೆಟ್ ಕಬಳಿಸಿ ಮಿಂಚಿದ್ದರು. ಪರಿಣಾಮ ಅಲ್ಪ ಮೊತ್ತಕ್ಕೆ ಕುಸಿದ ಆಸ್ಟ್ರೇಲಿಯಾ ತಂಡವು 14 ವರ್ಷಗಳ ಬಳಿಕ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಮಂಡಿಯೂರಿದೆ. ಅದು ಕೂಡ ಕೇವಲ 2 ದಿನಗಳಲ್ಲೇ ಎಂಬುದು ಇಲ್ಲಿ ಉಲ್ಲೇಖಾರ್ಹ.

ಝಾಹಿರ್ ಯೂಸುಫ್
|

Updated on: Dec 28, 2025 | 8:26 AM

Share
ಬರೋಬ್ಬರಿ 14 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ ತಂಡ ಟೆಸ್ಟ್ ಪಂದ್ಯ ಗೆದ್ದಿದೆ. ಈ ಸ್ಮರಣೀಯ ಗೆಲುವಿನ ರೂವಾರಿ ಇಂಗ್ಲೆಂಡ್ ವೇಗಿ ಜೋಶ್ ಟಂಗ್. ಇದೀಗ ಜೋಶ್ ಟಂಗ್ ಅವರ ಮಿಂಚಿನ ದಾಳಿಯಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸುಮಾರು 60.6 ಕೋಟಿ ರೂ. ನಷ್ಟ ಅನುಭವಿಸಿದೆ ಎಂದರೆ ನಂಬಲೇಬೇಕು.

1 / 6
ಮೆಲ್ಬೋರ್ನ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಆಘಾತದ ಮೇಲೆ ಆಘಾತ ನೀಡುವಲ್ಲಿ ಜೋಶ್ ಟಂಗ್ ಯಶಸ್ವಿಯಾಗಿದ್ದರು.

2 / 6
ಅಲ್ಲದೆ ಈ ಪಂದ್ಯದಲ್ಲಿ 11.2 ಓವರ್​ಗಳನ್ನು ಎಸೆದ ಜೋಶ್ ಟಂಗ್ ನಿಖರ ದಾಳಿಯ ಮೂಲಕ ಕೇವಲ 45 ರನ್ ನೀಡಿ 5 ವಿಕೆಟ್ ಉರುಳಿಸಿದ್ದರು. ಪರಿಣಾಮ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 152 ರನ್​ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ 110 ರನ್​ಗಳಿಗೆ ಸರ್ವಪತನ ಕಂಡಿದ್ದರು.

3 / 6
ಇದಾಗ್ಯೂ ದ್ವಿತೀಯ ಇನಿಂಗ್ಸ್​ನಲ್ಲಿ ಬೃಹತ್ ಮೊತ್ತ ಪೇರಿಸುವ ಇರಾದೆಯೊಂದಿಗೆ ಕಣಕ್ಕಿಳಿದ ಆಸ್ಟ್ರೇಲಿಯಾ ತಂಡವನ್ನು ಇಂಗ್ಲೆಂಡ್ ವೇಗಿಗಳು ಕಾಡಿದರು. ಅದರಲ್ಲೂ ಉತ್ತಮ ಫಾರ್ಮ್​​ನಲ್ಲಿದ್ದ ಮಾರ್ನಸ್ ಲಾಬುಶೇನ್ (8) ಹಾಗೂ ಉಸ್ಮಾನ್ ಖ್ವಾಜಾ (0) ವಿಕೆಟ್ ಪಡೆದು ಆಸ್ಟ್ರೇಲಿಯಾ ತಂಡಕ್ಕೆ ಜೋಶ್ ಟಂಗ್ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು. ಪರಿಣಾಮ ದ್ವಿತೀಯ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡ 132 ರನ್​ಗಳಿಗೆ ಆಲೌಟ್ ಆಯಿತು.

4 / 6
ಅದರಂತೆ 175 ರನ್​ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು ಎರಡನೇ ದಿನದಾಟದೊಳಗೆ ಗುರಿ ಮುಟ್ಟುವ ಮೂಲಕ 4 ವಿಕೆಟ್​ಗಳ ಜಯ ಸಾಧಿಸಿತು. ಇತ್ತ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಕೇವಲ 2 ದಿನಗಳಲ್ಲೇ ಮುಗಿದಿದ್ದರಿಂದ ಇದೀಗ ಕ್ರಿಕೆಟ್​ ಆಸ್ಟ್ರೇಲಿಯಾಗೆ ಸುಮಾರು 60.6 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.

5 / 6
ಏಕೆಂದರೆ ಈ ಪಂದ್ಯವನ್ನು ವೀಕ್ಷಿಸಲು ಮೊದಲೆರಡು ದಿನಗಳು 90 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸ್ಟೇಡಿಯಂಗೆ ಆಗಮಿಸಿದ್ದರು. ಅತ್ತ ಆಸ್ಟ್ರೇಲಿಯಾದಲ್ಲಿ ಕ್ರಿಸ್ಮಸ್ ರಜೆ ಇರುವುದರಿಂದ 5 ದಿನದಾಟಗಳ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ 5 ಪೌಂಡ್​ ಮಿಲಿಯನ್​ಗಿಂತಲೂ ಆದಾಯಗಳಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಜೋಶ್ ಟಂಗ್​ನ ನಿಖರ ದಾಳಿಯಿಂದ ತತ್ತರಿಸಿದ ಆಸ್ಟ್ರೇಲಿಯಾ ತಂಡವು ಎರಡು ಇನಿಂಗ್ಸ್​ಗಳ ಮೂಲಕ ಎದುರಿಸಿದ್ದು 479 ಎಸೆತಗಳನ್ನು ಮಾತ್ರ.  ಪರಿಣಾಮ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಕೇವಲ 2 ದಿನಗಳಲ್ಲೇ ಕೊನೆಗೊಂಡಿದ್ದು, ಇದರಿಂದ ಕ್ರಿಕೆಟ್ ಆಸ್ಟ್ರೇಲಿಯಾಗೆ ಸುಮಾರು 60.6 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.

6 / 6