AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಜೊತೆ ವಿಲೀನವಾಗುವ ವದಂತಿ ಸುಳ್ಳು; ಟಿಎಂಸಿ ಸ್ಪಷ್ಟನೆ

ತೃಣಮೂಲ ಕಾಂಗ್ರೆಸ್ (TMC) ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲಾಗುತ್ತಿದೆ ಮತ್ತು ಮಮತಾ ಬ್ಯಾನರ್ಜಿ ಅವರಿಗೆ ಕಾಂಗ್ರೆಸ್‌ನಲ್ಲಿ ಉನ್ನತ ಹುದ್ದೆಗಳನ್ನು ಆಫರ್ ನೀಡಲಾಗಿದೆ ಎಂಬ ವರದಿಗಳನ್ನು ಟಿಎಂಸಿ ಪಕ್ಷವು ಸಂಪೂರ್ಣವಾಗಿ ನಿರಾಕರಿಸಿದೆ. ಈ ವರದಿಗಳು ಆಧಾರರಹಿತ ಎಂದು ಸ್ಪಷ್ಟಪಡಿಸಿರುವ ಟಿಎಂಸಿ, ಕೇವಲ ರಾಜಕೀಯ ಮೈತ್ರಿಗೆ ಮಾತ್ರ ತಮ್ಮ ಬಾಗಿಲು ತೆರೆದಿದೆ ಎಂದು ತಿಳಿಸಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗಿನ ಭೇಟಿಯ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾಧ್ಯಮಗಳ ವರದಿಗಳನ್ನು ಟಿಎಂಸಿ ನಾಯಕತ್ವ ತಳ್ಳಿಹಾಕಿದೆ. ಪಕ್ಷದ ಅಸ್ತಿತ್ವವನ್ನು ಬಿಟ್ಟುಕೊಡುವ ಯಾವುದೇ ಪ್ರಶ್ನೆಯೇ ಇಲ್ಲ ಎಂದು ಟಿಎಂಸಿ ಹಿರಿಯ ನಾಯಕರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಜೊತೆ ವಿಲೀನವಾಗುವ ವದಂತಿ ಸುಳ್ಳು; ಟಿಎಂಸಿ ಸ್ಪಷ್ಟನೆ
Mamata Banerjee Image Credit source: PTI
ಸುಷ್ಮಾ ಚಕ್ರೆ
|

Updated on: Jun 10, 2026 | 10:55 PM

Share

ನವದೆಹಲಿ, ಜೂನ್ 10: ತೃಣಮೂಲ ಕಾಂಗ್ರೆಸ್ (TMC) ಕಾಂಗ್ರೆಸ್ ಪಕ್ಷದ ಜೊತೆ ವಿಲೀನವಾಗಲಿದೆ ಎಂಬ ಮಾತುಗಳಿಗೆ ಯಾವುದೇ ಆಧಾರವಿಲ್ಲ ಎಂದು ಟಿಎಂಸಿ ನಾಯಕರು ಸ್ಪಷ್ಟಪಡಿಸಿದ್ದಾರೆ. ಎರಡೂ ಪಕ್ಷಗಳ ನಾಯಕರ ನಡುವೆ ಇತ್ತೀಚೆಗೆ ರಾಜಕೀಯ ಚರ್ಚೆಗಳು ನಡೆದಿದ್ದರೂ ಸಹ, ವಿಲೀನದ ಯಾವುದೇ ಪ್ರಸ್ತಾಪವನ್ನು ಉಭಯ ಪಕ್ಷಗಳು ಪರಿಗಣಿಸುತ್ತಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರಿಗೆ ಕಾಂಗ್ರೆಸ್‌ನಲ್ಲಿ ಉನ್ನತ ಹುದ್ದೆಗಳನ್ನು ನೀಡಲಾಗುತ್ತಿದೆ ಮತ್ತು ಪಕ್ಷಗಳನ್ನು ವಿಲೀನಗೊಳಿಸಲಾಗುತ್ತಿದೆ ಎಂಬ ಸುದ್ದಿಗಳು ಕೇವಲ ಊಹಾಪೋಹಗಳಾಗಿದ್ದು, ಇವುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.

ಇದರ ನಡುವೆಯೂ ಕಾಂಗ್ರೆಸ್ ಮತ್ತು ಟಿಎಂಸಿ ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲು ಸಿದ್ಧವಾಗಿವೆ. ಸಾಮಾನ್ಯ ರಾಜಕೀಯ ಹಿತಾಸಕ್ತಿಯ ವಿಷಯಗಳ ಕುರಿತು ಚರ್ಚೆಗಳನ್ನು ಮುಂದುವರಿಸಿವೆ ಎಂದು ಮೂಲಗಳು ಹೇಳಿವೆ. ವರದಿಯ ಪ್ರಕಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಇತ್ತೀಚೆಗೆ ತಮ್ಮ ಪಕ್ಷಗಳ ನಡುವೆ ಸಮನ್ವಯತೆಯನ್ನು ಸುಧಾರಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಟಿಎಂಸಿ ಸಂಸದೆ ಸುಶ್ಮಿತಾ ದೇವ್ ರಾಜೀನಾಮೆ

ಟಿಎಂಸಿ ಪಕ್ಷವು ದೊಡ್ಡ ಮಟ್ಟದ ಆಂತರಿಕ ಸವಾಲನ್ನು ಎದುರಿಸುತ್ತಿರುವ ಸಮಯದಲ್ಲಿಯೇ ಈ ಮಾತುಕತೆ ನಡೆದಿರುವುದು ತೀವ್ರ ಗಮನ ಸೆಳೆದಿದ್ದು, ಪಕ್ಷದ ಮುಂದಿನ ರಾಜಕೀಯ ಕಾರ್ಯತಂತ್ರದ ಬಗ್ಗೆ ಹಲವು ವಹಾಪೋಹಗಳಿಗೆ ಕಾರಣವಾಗಿದೆ. ಹಿರಿಯ ಕಾಂಗ್ರೆಸ್ ನಾಯಕರು ನವದೆಹಲಿಯಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದ ನಂತರ ಕಾಂಗ್ರೆಸ್-ಟಿಎಂಸಿ ವಿಲೀನದ ವದಂತಿಗಳು ಮತ್ತಷ್ಟು ತೀವ್ರಗೊಂಡವು.

ಇದನ್ನೂ ಓದಿ: ಕಾಂಗ್ರೆಸ್ ಜೊತೆ ವಿಲೀನವಾಗುತ್ತಾ ಟಿಎಂಸಿ? ಮಮತಾ ಬ್ಯಾನರ್ಜಿಗೆ ದೊಡ್ಡ ಹುದ್ದೆಯ ಆಫರ್

ವರದಿಗಳ ಪ್ರಕಾರ, ಟಿಎಂಸಿಯ 58 ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದಿದ್ದಾರೆ. ರಾಜ್ಯಸಭೆ ಸೇರಿದಂತೆ ಪಕ್ಷದ ಸಂಸದರಲ್ಲೂ ಅಸಮಾಧಾನದ ಲಕ್ಷಣಗಳು ಗೋಚರಿಸುತ್ತಿವೆ. ಇಂದು ರಾಜ್ಯಸಭಾ ಸಂಸದೆ ಸುಶ್ಮಿತಾ ದೇವ್ ಅಕೂಡ ಟಿಎಂಸಿ ಪಕ್ಷ ಮತ್ತು ರಾಜ್ಯಸಭಾ ಸದಸ್ಯತ್ವ ಎರಡಕ್ಕೂ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ, ಜೂನ್ 8ರಂದು ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಅವರು ಕೂಡ ರಾಜ್ಯಸಭೆ ಸ್ಥಾನಕ್ಕೆ ಹಾಗೂ ಟಿಎಂಸಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ಸಿಗಲಿ ಎಂದು ಶಕ್ತಿ ದೇವತೆಗೆ ವಿಶೇಷ ಪೂಜೆ
ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ಸಿಗಲಿ ಎಂದು ಶಕ್ತಿ ದೇವತೆಗೆ ವಿಶೇಷ ಪೂಜೆ
ನಾಳೆ ಪ್ರಧಾನಿ ಮೋದಿ-ಸಿಎಂ ಡಿ.ಕೆ. ಶಿವಕುಮಾರ್ ಭೇಟಿ
ನಾಳೆ ಪ್ರಧಾನಿ ಮೋದಿ-ಸಿಎಂ ಡಿ.ಕೆ. ಶಿವಕುಮಾರ್ ಭೇಟಿ
ಒಂದು ವರ್ಷದಲ್ಲಿ 13 ಸಿನಿಮಾ: ಹಳೆಯ ದಿನಗಳ ನೆನೆದ ಶ್ರುತಿ
ಒಂದು ವರ್ಷದಲ್ಲಿ 13 ಸಿನಿಮಾ: ಹಳೆಯ ದಿನಗಳ ನೆನೆದ ಶ್ರುತಿ
ಗೃಹಲಕ್ಷ್ಮಿ ಯೋಜನೆಗೆ ಮೇಜರ್ ಸರ್ಜರಿ: ಮಹತ್ವದ ಅಪ್ಡೇಟ್ ನೀಡಿದ ಸಿಎಂ ಡಿಕೆಶಿ
ಗೃಹಲಕ್ಷ್ಮಿ ಯೋಜನೆಗೆ ಮೇಜರ್ ಸರ್ಜರಿ: ಮಹತ್ವದ ಅಪ್ಡೇಟ್ ನೀಡಿದ ಸಿಎಂ ಡಿಕೆಶಿ
ಪೊಲೀಸರಿಗೂ ಎಚ್ಚರಿಕೆ ಕೊಟ್ಟ ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಪೊಲೀಸರಿಗೂ ಎಚ್ಚರಿಕೆ ಕೊಟ್ಟ ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭೇಟಿಯಾದ ಡಿಕೆ ಶಿವಕುಮಾರ್
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭೇಟಿಯಾದ ಡಿಕೆ ಶಿವಕುಮಾರ್
36 ಸಾವಿರ ಕೋಟಿ ರೂ. ಲೂಟಿ ಆರೋಪ:ಲೋಕಾಯುಕ್ತಕ್ಕೂ ಬಿಜೆಪಿ ದೂರು
36 ಸಾವಿರ ಕೋಟಿ ರೂ. ಲೂಟಿ ಆರೋಪ:ಲೋಕಾಯುಕ್ತಕ್ಕೂ ಬಿಜೆಪಿ ದೂರು
ಜೂನ್​​ 12ರಂದು ಕೊಲ್ಲೂರಿಗೆ ತಮಿಳುನಾಡು ಸಿಎಂ ವಿಜಯ್​​ ಭೇಟಿ
ಜೂನ್​​ 12ರಂದು ಕೊಲ್ಲೂರಿಗೆ ತಮಿಳುನಾಡು ಸಿಎಂ ವಿಜಯ್​​ ಭೇಟಿ
ಬಿಸಿಎಂ ಹಾಸ್ಟೆಲ್​​​​​ನಲ್ಲಿ ಹುಡುಗ-ಹುಡುಗಿಯರಿಂದ ಬಿಂದಾಸ್ ಎಣ್ಣೆ ಪಾರ್ಟಿ
ಬಿಸಿಎಂ ಹಾಸ್ಟೆಲ್​​​​​ನಲ್ಲಿ ಹುಡುಗ-ಹುಡುಗಿಯರಿಂದ ಬಿಂದಾಸ್ ಎಣ್ಣೆ ಪಾರ್ಟಿ
ನಾಮಪತ್ರ ರದ್ದಾಗಲೆಂದೇ ಕಾಂಗ್ರೆಸ್ ಫಾರ್ಮ್ ತುಂಬಿತ್ತಾ? ಬಿಜೆಪಿ ಲೇವಡಿ
ನಾಮಪತ್ರ ರದ್ದಾಗಲೆಂದೇ ಕಾಂಗ್ರೆಸ್ ಫಾರ್ಮ್ ತುಂಬಿತ್ತಾ? ಬಿಜೆಪಿ ಲೇವಡಿ