- Kannada News Photo gallery Tata Motors revealed Harrier EV at Auto Expo 2023, check out specs, range, features and images
Auto Expo 2023: ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಅನಾವರಣಗೊಂಡ ಟಾಟಾ ಹ್ಯಾರಿಯರ್
ಟಾಟಾ ಮೋಟಾರ್ಸ್ ಕಂಪನಿಯು ದೆಹಲಿ ಆಟೋ ಎಕ್ಸ್ ಪೋದಲ್ಲಿ ಹ್ಯಾರಿಯರ್ ಎಲೆಕ್ಟ್ರಿಕ್ ಆವೃತ್ತಿಯನ್ನ ಅನಾವರಣಗೊಳಿಸಿದೆ. ಹೊಸ ಎಲೆಕ್ಟ್ರಿಕ್ ಎಸ್ ಯುವಿ ಕಾರು ಮಾದರಿಯ ಎರಡನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಅನಾವರಣಗೊಂಡಿದ್ದು, ಹೊಸ ಇವಿ ಕಾರು ಮಾದರಿಯು 2024ರ ವೇಳೆ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.
Updated on:Jan 12, 2023 | 6:49 PM

ಹೊಸ ಎಲೆಕ್ಟ್ರಿಕ್ ಎಸ್ ಯುವಿ ಕಾರು ಮಾದರಿಯು ಕಂಪನಿಯ ಎರಡನೇ ತಲೆಮಾರಿನ ತಂತ್ರಜ್ಞಾನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಂಡಿದೆ.

ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಹೊಸ ಹ್ಯಾರಿಯರ್ ಇವಿ ಅನಾವರಣಗೊಳಿಸಿದೆ.

OMEGA ಆರ್ಕಿಟೆಕ್ಚರ್ ಆಧರಿಸಿ ನಿರ್ಮಾಣವಾಗಿ ಹೊಸ ಕಾರಿನಲ್ಲಿ ಹಲವಾರು ಹೊಸ ಫೀಚರ್ಸ್, ಸುಧಾರಿತ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದೆ.

ಸಾಮಾನ್ಯ ಕಾರಿನ ವಿನ್ಯಾಸವನ್ನೇ ಆಧರಿಸಿರುವ ಹೊಸ ಕಾರು ಶಾರ್ಪ್ ಎಡ್ಜ್ ನೊಂದಿಗೆ ಫ್ಯೂಚರಿಸ್ಟಿಕ್ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಭರ್ಜರಿ ಮೈಲೇಜ್ ಹಿಂದಿರುಗಿಸಲಿದೆ.

ಕರ್ವ್ ಇವಿ ಕಾನ್ಸೆಪ್ಟ್ ಮಾದರಿಯಿಂದ ಕೆಲವು ವಿನ್ಯಾಸಗಳ ಪ್ರೇರಣೆ ಹೊಂದಿರುವ ಹೊಸ ಕಾರಿನಲ್ಲಿ ಭರ್ಜರಿ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದೆ.

ಪ್ರತಿ ಚಾರ್ಜ್ ಗೆ 450 ಕಿ.ಮೀ ನಿಂದ 500 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ ಹೊಸ ಹ್ಯಾರಿಯರ್ ಎಲೆಕ್ಟ್ರಿಕ್ ಕಾರು

ಬ್ಯಾಟರಿ ಆಯ್ಕೆ , ತಂತ್ರಜ್ಞಾನ ಜೋಡಣೆಗೆ ಅನುಗುಣವಾಗಿ ಎಕ್ಸ್ ಶೋರೂಂ ಪ್ರಕಾರ ರೂ. 25 ಲಕ್ಷದಿಂದ ರೂ. 30 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.
Published On - 4:16 pm, Thu, 12 January 23




