ಬಂಜಾರ ಸಮುದಾಯದ ಮಕ್ಕಳಿಗೆ ನೈಜ ಕಲಿಕೆಗೆ ಒತ್ತು ಕೊಡುವ ನಿಟ್ಟಿನಲ್ಲಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳ ಮಾಡಿರುವ ಪರಮೇಶ್ವರ ಗದ್ಯಾಳ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆಗಳ ಮೇಲೆ ಕಲಿಕಾ ಬರಹ. ಶಾಲೆಯ ತರಗತಿಗಳ ಹೊರ ಭಾಗದಲ್ಲಿ ರಾಷ್ಟ್ರ, ರಾಜ್ಯ ಸೇರಿದಂತೆ ವಿವಿಧ ನಕ್ಷೆಗಳ ಚಿತ್ರ ಬಿಡಿಸೋ ಮೂಲಕ ಚಿತ್ರ ಕಲಿಕೆಗೆ ಒತ್ತು
ಶಾಲಾ ಕಟ್ಟಡದ ರಿಪೇರಿ, ವಿದ್ಯುತ್ ಸಂಪರ್ಕ ಅಡುಗೆ ಮನೆ ಹಾಗೂ ಶೌಚಾಲಯ ದುರಸ್ತಿ ಮಾಡಿಸಿದ ಶಿಕ್ಷಕ ಪರಮೇಶ್ವರ ಗದ್ಯಾಳ. ಇದಕ್ಕಾಗಿ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ಹಣ ಖರ್ಚು ಮಾಡಿದ ಪರಮೇಶ್ವರ್ ಟೀಚರ್
ಬಂಜಾರ ಸಮುದಾಯದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯ ಮಾಡಿದ್ದಾಗಿ ಸಂತೃಪ್ತ ಭಾವದಿಂದ ಹೇಳಿದ ಶಿಕ್ಷಕ ಪರಮೇಶ್ವರ್.
ನೈಜ ಕಲಿಕೆಗೆ ಉತ್ತಮ ವಾತಾವರಣವಿರಬೇಕು ಎಂಬ ಉದ್ದೇಶದಿಂದಲೇ ಹಣ ಖರ್ಚು ಮಾಡಿದ ಶಿಕ್ಷಕ ಪರಮೇಶ್ವರ್ ಗದ್ಯಾಳ ಕಾರ್ಯಕ್ಕೆ ಶೈಕ್ಷಣಿಕ ವಲಯ ಹಾಗೂ ಸಾರ್ವಜನಿಕರಲ್ಲಿ ಮೆಚ್ಚುಗೆಯೋ ಮೆಚ್ಚುಗೆ.