
ಬಾಬರ್ ಅಲಿ : ಅತಿ ಚಿಕ್ಕ ವಯಸ್ಸಿನಲ್ಲಿ ಮುಖ್ಯೋಪಾಧ್ಯಾಯ ಎನ್ನುವ ಖ್ಯಾತಿ ಗಳಿಸಿದವರು ಈ ಬಾಬರ್ ಅಲಿ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯವರಾದ ಬಾಬರ್ ಅಲಿಯವರು ಒಂಬತ್ತು ವರ್ಷದವರಾಗಿದ್ದಾಗಲೇ ತಮಗಿಂತ ಸಣ್ಣ ವಯಸ್ಸಿನ ಹಾಗೂ ಸಹಪಾಠಿಗಳಿಗೆ ಪಾಠ ಹೇಳಿಕೊಡಲು ಶುರು ಮಾಡಿದ್ದರು. ಹೀಗಾಗಿ ಬಿಬಿಸಿ, ಇವರಿಗೆ ವಿಶ್ವದ ಅತ್ಯಂತ ಕಿರಿಯ ಮುಖ್ಯೋಪಾಧ್ಯಾಯ ಎಂಬ ಬಿರುದು ನೀಡಿತು. ಇದೀಗ ಬಾಬರ್ ಅಲಿಯವರು 'ಆನಂದ ಶಿಕ್ಷಾ ನಿಕೇತನ ಹೆಸರಿನ ಪುಟ್ಟ ಶಾಲೆಯೊಂದನ್ನು ತೆರೆದು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ.

ಸೈಕಲ್ ಗುರೂಜಿ ಆದಿತ್ಯ ಕುಮಾರ್ : ಸೈಕಲ್ ಗುರೂಜಿ ಎಂದೇ ಖ್ಯಾತಿ ಪಡೆದಿರುವ ಆದಿತ್ಯ ಕುಮಾರ್ ಸ್ಲಮ್ ಮಕ್ಕಳಿಗೆ ಹೇಳಿಕೊಡುತ್ತಿರುವ ಮಾದರಿ ಶಿಕ್ಷಕರೆನಿಸಿಕೊಂಡಿದ್ದಾರೆ 1995 ರಿಂದಲೂ ಲಕ್ನೋದ ಸ್ಲಮ್ ಗಳಲ್ಲಿ ಇರುವ ಮಕ್ಕಳಿಗೆ ಪಾಠ ಹೇಳಲು 60 ರಿಂದ 65 ಕಿ.ಮೀ ವರೆಗೂ ನಿತ್ಯ ಸೈಕಲ್ ತುಳಿದುಕೊಂಡೆ ಬರುವ ಮೂಲಕ ತಮ್ಮ ಕೈಲಾದ ಕೆಲಸವನ್ನು ಮಾಡುತ್ತಿದ್ದಾರೆ.

ಅಬ್ದುಲ್ ಮಲ್ಲಿಕ್ : ಈ ಶಿಕ್ಷಕನು ಮಕ್ಕಳಿಗಾಗಿ ನಿತ್ಯವು ನದಿಯಲ್ಲಿ ಈಜಿಕೊಂಡೇ ಬಂದು ಮಕ್ಕಳಿಗೆ ಪಾಠ ಮಾಡುತ್ತಾರೆ. ಕೇರಳದ ಮಲ್ಲಪುರಂ ಜಿಲ್ಲೆಯ ಪ್ರಾಥಮಿಕ ಶಾಲೆಯ ಈ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಬಸ್ಸಿನಲ್ಲಿ ಪ್ರಯಾಣ ಮಾಡಿದರೆ ಮೂರು ಗಂಟೆ ವ್ಯರ್ಥವಾಗುತ್ತದೆ ಎನ್ನುವ ಕಾರದಿಂದ ನದಿಯಲ್ಲಿ ಈಜಿಕೊಂಡು ಶಾಲೆಗೆ ತೆರಳಿ ಪಾಠ ಮಾಡಿ ಬರುವುದು ಇವರ ಮಕ್ಕಳಿಗೆ ಒಳ್ಳೆಯ ಭವಿಷ್ಯ ಕಟ್ಟಿಕೊಡಬೇಕೆನ್ನುವ ಇವರ ಮನೋಭಾವ ಎಲ್ಲರಿಗೂ ಸ್ಫೂರ್ತಿಯಾಗಿದೆ.

ರಾಜೇಶ್ ಕುಮಾರ್ ಶರ್ಮಾ : ದೆಹಲಿಯ ಮೆಟ್ರೊ ಬ್ರಿಡ್ಜ್ ಕೆಳಗೆ ಸರಿ ಸುಮಾರು 200 ಮಕ್ಕಳಿಗೆ ಪಾಠ ಮಾಡುತ್ತಿರುವ ರಾಜೇಶ್ ಕುಮಾರ್ ಶರ್ಮಾರವರ ಈ ಶಿಕ್ಷಣ ಸೇವೆಯು ಎಲ್ಲರಿಗೂ ಕೂಡ ಮಾದರಿಯಾಗಿದೆ. ಕಳೆದ 2005 ರಲ್ಲಿ ಶುರುವಾದ ಇವರ ಶಾಲೆ ಅಂಡರ್ ದಿ ಬ್ರಿಡ್ಜ್ ಸ್ಕೂಲ್ ಎಂದೇ ಖ್ಯಾತಿ ಪಡೆದಿದ್ದು ಇವರಿಂದ ಅಲ್ಲಿನ ಸ್ಲಮ್ ಮಕ್ಕಳು ಓದುವ ಬರಹವನ್ನು ಕಲಿಯುವಂತಾಗಿದೆ.

ಆನಂದ್ ಕುಮಾರ್ : ಬಿಹಾರದ ಆನಂದ್ ಕುಮಾರ್ ಹೆಸರು ಎಲ್ಲರಿಗೂ ಚಿರಪರಿಚಿತರು. ಸೂಪರ್ 30 ಕೋಚಿಂಗ್ ಇನ್‌ಸ್ಟಿಟ್ಯೂಟ್ ಮೂಲಕ ಲಕ್ಷಾಂತರ ಮಕ್ಕಳನ್ನು ಐಐಟಿಗಳನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಆನಂದ್ ಅವರು ಲಕ್ಷಾಂತರ ಬಡ ಮಕ್ಕಳ ಕನಸನ್ನು ನನಸು ಮಾಡಿದ ವ್ಯಕ್ತಿಯಾಗಿದ್ದು, ಈಗಾಗಲೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳು ಸಂದಿವೆ.