
ಟಿ20 ವಿಶ್ವಕಪ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ರೋಚಕ ಗೆಲುವು ದಾಖಲಿಸಿತ್ತು. ಆ ಮೂಲಕ ಬರೋಬ್ಬರಿ 17 ವರ್ಷಗಳ ಬಳಿಕ ಭಾರತ ತಂಡ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ.

ಟಿ20 ವಿಶ್ವಕಪ್ ಗೆದ್ದು ತಾಯ್ನಾಡಿಗೆ ಬಂದಿರುವ ಭಾರತ ತಂಡಕ್ಕೆ ಅಭೂತಪೂರ್ವ ಸ್ವಾಗತ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗಣ್ಯರು ಸೇರಿದಂತೆ ಹಲವರು ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ವಿಶ್ವಕಪ್ ಗೆದ್ದ ದಿನವೇ ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ 125 ಕೋಟಿ ರೂ. ಬಹುಮಾನ ಘೋಷಿಸಿತ್ತು. ಈ ಬಹುಮಾನದ ಮೊತ್ತವನ್ನು ಆಟಗಾರರಿಗೆ ಬಿಸಿಸಿಐ ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವಿತರಣೆ ಮಾಡಿದೆ

ಬಹುಮಾನ ವಿತರಣೆ, ಸನ್ಮಾನ ಕಾರ್ಯಕ್ರಮದ ಬಳಿಕ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಜಮಾಯಿಸಿದ್ದ ಲಕ್ಷಾಂತರ ಅಭಿಮಾನಿಗಳತ್ತ ಭಾರತ ತಂಡದ ಆಟಗಾರರು ಟಿ20 ವಿಶ್ವಕಪ್ ಟ್ರೋಫಿಯನ್ನು ಪ್ರದರ್ಶಿಸಿದರು.

ಟಿ20 ವಿಶ್ವಕಪ್ ಗೆದ್ದ ಹಿನ್ನೆಲೆ ಭಾರತ ತಂಡ ವಿಜಯೋತ್ಸವ ಯಾತ್ರೆ ಮಾಡಿದ್ದು, ಈ ವೇಳೆ ವಿರಾಟ್ ಕ್ಲೋಹಿ ತಮ್ಮ ಅಭಿಮಾನಿಗಳತ್ತ ಕೈ ಬೀಸಿದರು.

ದೆಹಲಿಯಿಂದ ಮುಂಬೈಗೆ ಆಗಮಿಸಿದ್ದ ಭಾರತ ತಂಡ ಇಂದು ಸಂಜೆ ತೆರೆದ ಬಸ್ನಲ್ಲಿ ವಿಜಯಯಾತ್ರೆಯನ್ನು ನಡೆಸಿತು. ನಾರಿಮನ್ ಪಾಯಿಂಟ್ನಿಂದ ಶುರುವಾಗುವ ವಿಜಯೋತ್ಸವ ಮೆರವಣಿಗೆ ಪ್ರಸಿದ್ಧ ಮರೈನ್ ಡ್ರೈವ್ ಬೀಚ್ ಮೂಲಕ ವಾಂಖೇಡೆ ಸ್ಟೇಡಿಯಂಗೆ ತಲುಪಿತು.

ಈ ವೇಳೆ ಸಮುದ್ರದ ಕಿನಾರೆ ಮರೈನ್ ಡ್ರೈವ್ ಬೀಚ್ನ ರಸ್ತೆಯ ಎರಡೂ ಬದಿಯಲ್ಲಿ ಲಕ್ಷಾಂತರ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತ್ತಿದ್ದರು.

ಭಾರತ ತಂಡದ ವಿಜಯೋತ್ಸವ ಯಾತ್ರೆ ವೇಳೆ ರೋಹಿತ್ ಶರ್ಮಾ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಟಿಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ತಮ್ಮ ಅಭಿಮಾನಿಗಳಿಗೆ ಎತ್ತಿ ತೋರಿಸುವ ಮೂಲಕ ಫೋಟೋಗೂ ಫೋಸ್ ನೀಡಿದ್ದಾರೆ.

ಟೀಂ ಇಂಡಿಯಾ ವಿಜಯೋತ್ಸವದ ವೇಳೆ ಟಿ20 ವಿಶ್ವಕಪ್ ಟ್ರೋಫಿಯನ್ನು ನೆರೆದಿದ್ದ ಲಕ್ಷಾಂತರ ಅಭಿಮಾನಿಗಳಿಗೆ ತೋರಿಸುವ ಮೂಲಕ ಸಂಭ್ರಮಿಸಿದ್ದಾರೆ.

ಮುಂಬೈನಲ್ಲಿ ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕೆಲ ಕಾಲ ಮಳೆರಾಯ ಅಡ್ಡಿ ಪಡಿಸಿದ್ದ ಮುಂಬೈನ ವಾಖೆಂಡೆ ಮೈದಾನದಲ್ಲಿ ಜೋರು ಮಳೆ ಆಗಿತ್ತು. ಧಾರಾಕಾರ ಮಳೆ ಬಂದರೂ ಕೂಡ ಅಭಿಮಾನಿಗಳು ಭಾರತ ತಂಡವನ್ನು ಸ್ವಾಗತಿಸಲು ಕಾದು ಕುಳಿತ್ತಿದ್ದರು.