Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ ಪಾಠ ಮಾಡಿ, ಮೊರಾರ್ಜಿ ವಸತಿ ಶಾಲೆಯಲ್ಲಿ ಊಟ ಸವಿದ ಸಿಎಂ

ಮುಡಾ, ವಾಲ್ಮೀಕಿ ಹಗರಣದ ಜೊತೆ ಬೆಲೆ ಏರಿಕೆ ಬಿಸಿ ರಾಜ್ಯ ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಅದರಲ್ಲೂ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಪತ್ನಿ ಹೆಸರು ಕೇಳಿಬಂದಿದೆ. ಈ ಬಗ್ಗೆ ವಿಪಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದು, ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದ್ರೆ, ಸಿದ್ದರಾಮಯ್ಯ ಈ ಎಲ್ಲಾ ರಾಜಕೀಯ ಜಂಜಾಟ ಮರೆತು ಶಾಲೆಗೆ ತೆರಳಿ ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ ಪಾಠ ಮಾಡಿದ್ದಾರೆ. ಅಲ್ಲದೇ ಅವರೊಂದಿಗೆ ಬೋಜನೆ ಸೇವಿಸಿ ರಿಲ್ಯಾಕ್ಸ್ ಆಗಿದ್ದಾರೆ.

ರಮೇಶ್ ಬಿ. ಜವಳಗೇರಾ
|

Updated on:Jul 05, 2024 | 4:31 PM

ಹಲವು ರಾಜಕೀಯ ಆರೋಪಗಳ ಮಧ್ಯ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳೊಂದಿಗೆ ಕಾಲ ಕಳೆದಿದ್ದಾರೆ. ಹೌದು.. ಇಂದು (ಜುಲೈ 05) ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ  ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ.

1 / 9
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ  ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ ಪಾಠ ಮಾಡಿದರು. ಸಂಧಿಗಳ ಬಗ್ಗೆ ವಿದ್ಯಾರ್ಥಿಗಳನ್ನು ಪ್ರಶ್ನಿಸಿ ಬಳಿಕ ತಾವೇ ಉತ್ತರಿಸಿದರು.

2 / 9
ಸಂಧಿ ಎಂದರೇನು, ಸಂಧಿಗಳಲ್ಲಿ ಎಷ್ಟು ವಿಧಗಳಿವೆ? ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದು ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.

3 / 9
ಪ್ರವರ್ಗ, ಅಲ್ಪ ಪ್ರಾಣ-ಮಹಾ ಪ್ರಾಣದ ಬಗ್ಗೆ ಮಕ್ಕಳಿಗೆ ಪಾಠ ಮಾಡಿದರು. ಅಲ್ಲದೇ  ಸ್ವರ-ದೀರ್ಘ ಸ್ವರದ ಬಗ್ಗೆಯೂ ಮಕ್ಕಳಿಗೆ ಸಿಎಂ ಪಾಠ ಮಾಡಿದ್ದು,  ವ್ಯಂಜನಾಕ್ಷರ ಅಂದರೇನು, ವರ್ಗೀಯ-ಅವರ್ಗೀಯ ವ್ಯಂಜಗಳಿವೆ ಎಂದರು.

4 / 9
ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಎಂದ ಸಿಎಂ ಕೇಳಿದ ಪ್ರಶ್ನಿಗೆ ಮಕ್ಕಳು ಸಹ ಉತ್ತರಿಸಿದರು. ಆದ್ರೆ, ಉತ್ತರ ಅಸ್ಪಷ್ಟವಾಗಿದ್ದರಿಂದ ಕೊನೆಗೆ ಸಿಎಂ, ವಿದ್ಯಾರ್ಥಿಗಳ ಹೇಳಿದ ಉತ್ತರವನ್ನು ತಿದ್ದಿದರು.

5 / 9
ಇದೇ ವೇಳೆ ಕರ್ನಾಟಕದಲ್ಲಿ ಮೊರಾರ್ಜಿ ದೇಸಾಯಿ ಶಾಲೆ ಆರಂಭಿಸಿದ್ದು ಯಾರು ಎಂದು ಪ್ರಶ್ನಿಸಿದರು. ಇದಕ್ಕೆ ವಿದ್ಯಾರ್ಥಿಗಳು ನೀವೇ ಎಂದು ಉತ್ತರಿಸಿದರು. ಬಳಿಕ ಸಿಎಂ 1994-95ರಲ್ಲಿ ಮೊರಾರ್ಜಿ ದೇಸಾಯಿ ಆರಂಭಿಸಿದ್ದಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು. ಇದಕ್ಕೆ ಮಕ್ಕಳು ಚಪ್ಪಾಳೆ ತಟ್ಟಿ ಖುಷಿಪಟ್ಟರು

6 / 9
 ಅಲ್ಲದೇ ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಮಕ್ಕಳಿಗೆ ಬಸವಣ್ಣನವರ ಮಹತ್ವ ತಿಳಿಸಿದ್ದು, ಮನುಷ್ಯರ ನಡುವಿನ ತಾರತಮ್ಯ, ಜಾತಿ ವ್ಯವಸ್ಥೆ ವಿರೋಧಿಸಿದ್ದರು. ಬಸವಣ್ಣ 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ನಡೆಸಿದ್ದರು ಎಂದು ಪಾಠ ಮಾಡಿದರು.

7 / 9
ನಂತರ ಕೊನೆದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊರಾರ್ಜಿ ದೇಸಾಯಿ ಶಾಲೆ ವಿದ್ಯಾರ್ಥಿಗಳ ಜೊತೆ ಗ್ರೂಪ್ ಫೋಟೋ ತೆಗೆಸಿಕೊಂಡರು. ಬಳಿಕ ಮಕ್ಕಳೊಂದಿಗೆ ಕೂತು ವಸತಿ ಶಾಲೆಯ ಊಟ ಸವಿದರು.

8 / 9
ಮಕ್ಕಳೊಂದಿಗೆ ಸಿಎಂ ಸಿದ್ದರಾಮಯ್ಯ ರಾಗಿ ಮುದ್ದೆ, ಅನ್ನ ಸಾಂಬರ್, ಹಪ್ಪಳ ಊಟ ಮೈಸೂರು ಪಾಕ್ ಸವಿದರು. ಅಲ್ಲದೇ ಊಟ ಎಲ್ಲಾ ಚೆನ್ನಾಗಿ ಕೊಡುತ್ತಾರಾ ಎಂದು ವಿದ್ಯಾರ್ಥಿಗಳ ಬಳಿ ವಿಚಾರಿಸಿದರು.

9 / 9

Published On - 4:30 pm, Fri, 5 July 24

Follow us
ಹಿಮಾನಿ ಶವವನ್ನು ಸೂಟ್‌ಕೇಸ್‌ನಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ಪತ್ತೆ

ಮಹಿಳೆಯರ ಸ್ಫೂರ್ತಿದಾಯಕ ಪಯಣ ಹಂಚಿಕೊಳ್ಳಲು ಪ್ರಧಾನಿ ಮೋದಿ ಅವಕಾಶ

ನಟ್ಟು ಬೋಲ್ಟು ಹೇಳಿಕೆ: ಡಿಕೆಶಿ ಬಳಸಿದ ಭಾಷೆ ಸರಿ ಇಲ್ಲ ಎಂದ ನಾಗಾಭರಣ

ಡಾ ರಾಜ್​ಕುಮಾರ್ ಅವರ ಒಂದು ಸನ್ನೆಗೆ ಲಕ್ಷ ಜನ ಸೇರ್ತಿದ್ರು: ಸಾಧು ಕೋಕಿಲ

ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಮೇಲ್ವಿಚಾರಕ: ವಿದ್ಯಾರ್ಥಿನಿ ಕಣ್ಣೀರು

ಪ್ರತಿಭಟನೆಗಳಿಗೆ ಬಂದ್ ಒಂದೇ ಅಸ್ತ್ರವಲ್ಲ, ಅದು ಬ್ರಹ್ಮಾಸ್ತ್ರ: ನಾರಾಯಣಗೌಡ

ಉತ್ತರ ಕನ್ನಡ ಜಿಲ್ಲೆಲಿ ಅತಿ ಹೆಚ್ಚು ಉಷ್ಣಾಂಶ ದಾಖಲು: ಡಿಸಿ ಹೇಳಿದ್ದಿಷ್ಟು

ಗಿರ್‌ನಲ್ಲಿ ಪ್ರಧಾನಿ ಮೋದಿಯ ಸಿಂಹ ಸಫಾರಿಯ ಕ್ಷಣಗಳ ವಿಡಿಯೋ ಇಲ್ಲಿದೆ

ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ: ಸಿದ್ದರಾಮಯ್ಯ

ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ