- Kannada News Photo gallery Heavy Monsoon Rain across Uttara Kannada district, Many areas submerged by flood, Kannada news
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ: ನೀರಿನ ನಡುಗಡ್ಡೆಗಳಾದ ಚೆಂಡಿಯಾ ಗ್ರಾಮದ ಮನೆಗಳು
ಕರ್ನಾಟಕ ಹಲವೆಡೆ ಮಳೆರಾಯನ ಅಬ್ಬರ ಮುಂದುವರೆದಿದೆ. ಕೆಲವೆಡೆ ವರುಣಾರ್ಭಟಕ್ಕೆ ಜಮೀನುಗಳು ಜಲಾವೃತವಾಗಿವೆ. ಮನೆಗಳಂತೂ ನೀರಿನ ನಡುವೆ ಇರುವ ದ್ವೀಪಗಳಂತಾಗಿವೆ. ಜನರು ನೀರಿನಲ್ಲಿಯೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಮನೆಯ ಮುಂದೆ ಹಳ್ಳದಂತಹ ವಾತಾವಾರಣ ನಿರ್ಮಾಣವಾಗಿದೆ. ಕಷ್ಟಪಟ್ಟು ರೈತ ಬೆಳೆದಿದ್ದ ಅಡಕೆ ಮರಗಳು ಜಲಾವೃತವಾಗಿರುವ ಚಿತ್ರಣ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬಂದಿದೆ.
Updated on: Jul 06, 2024 | 3:40 PM

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಹೊನ್ನವಾರ ತಾಲೂಕಿನ ಭಸ್ಕೆರೆಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 500 ಎಕರೆಯಲ್ಲಿ ಬೆಳೆದಿರೋ ಅಡಕೆ ಮರಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಬೆಳೆ ಕಳೆದುಕೊಂಡ ಅನ್ನದಾತ ಕಂಗಲಾಗಿ ನಿಂತಿದ್ದಾನೆ. ಇಷ್ಟೆ ಅಲ್ಲದೇ, ಗ್ರಾಮದ ಪಕ್ಕದಲ್ಲಿ ಹರಿಯೋ ಹಳ್ಳ ಆರ್ಭಟಿಸುತ್ತಿದ್ದು, 200 ಮನೆಗಳಿಗೆ ಜಲದಿಗ್ಬಂಧನವಾಗೋ ಭೀತಿ ಎದುರಾಗಿದೆ.

ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ಮನೆಗಳಂತೂ ನೀರಿನ ನಡುಗಡ್ಡೆಗಳಂತೆ ಕಾಣಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಗೆ ಇಲ್ಲಿನ ಜನ ಮಳೆ ನೀರಿನಲ್ಲೇ ವಾಸಿಸಬೇಕಾದ ದುಸ್ಥಿತಿ ಎದುರಾಗಿದೆ. ಇಂದು ಬೆಳ್ಳಂಬೆಳಗ್ಗೆಯೇ ನಾಲ್ಕೈದು ಮನೆಗಳು ಜಲಾವೃತವಾಗಿದ್ದು, ಇಲ್ಲಿನ ಜನ ನೀರಿನಲ್ಲೇ ಓಡಾಡ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲೂ ವರುಣಾರ್ಭಟ ಜೋರಾಗಿದೆ. ಉದ್ಯಾವರದ ಪಾಪನಾಶಿನಿ ನದಿ ಮೈತುಂಬಿ ಹರೀತಿದೆ. ಕುಂದಾಪುರ ತಾಲೂಕಿನ ಹೊಸ ಅಂಗಡಿ ತೊಂಬಟ್ಟು ಬಳಿಯ ಇರ್ಕಿಗದ್ದೆ ಫಾಲ್ಸ್ ಧುಮ್ಮಿಕ್ಕುತ್ತಿದೆ. ಜಿಲ್ಲೆಯಲ್ಲಿನ ಮಳೆ ಗಮನದಲ್ಲಿ ಇಟ್ಟುಕೊಂಡು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

ಉಡುಪಿಯ ಪಡುಕರೆ ಬೀಚ್ನಲ್ಲಿ ರಕ್ಕಸ ಗಾತ್ರ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಸಮುದ್ರದ ಅಲೆಗಳ ಅಬ್ಬರ ಇನ್ನೂ ಜಾಸ್ತಿಯಾದ್ರೆ ರಸ್ತೆ ಸಂಪರ್ಕ ಕಡಿತವಾಗೋ ಭೀತಿ ಎದುರಾಗಿದೆ. ಈ ಮಧ್ಯೆ ಪ್ರವಾಸಿಗರು ಸಮುದ್ರ ತಡೆಗೋಡೆಯ ಮಧ್ಯೆ ನಿಂತು ಪ್ರವಾಸಿಗರ ರಿಸ್ಕಿ ತೆಗೆದುಕೊಳ್ತಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೋರು ಮಳೆಯಾಗ್ತಿದೆ. ಇದೇ ಕಾರಣಕ್ಕೆ ಬೆಳಗಾವಿ ತಾಲೂಕಿನ ಹಲವು ಭಾಗದಲ್ಲಿ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ತುರಮರಿ ಗ್ರಾಮದಲ್ಲಿ ಮಳೆ ಅಬ್ಬರಕ್ಕೆ ಭತ್ತದ ಗದ್ದೆ ಮತ್ತು ಕಬ್ಬಿನ ಗದ್ದೆ ಹಳ್ಳದಂತೆ ಮಾರ್ಪಟ್ಟಿವೆ.

ದಾವಣಗೆರೆ ಜಿಲ್ಲೆ ಉಕ್ಕಡಗಾತ್ರಿಯಲ್ಲಿ ತುಂಗಭದ್ರಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಉಕ್ಕಡಗಾತ್ರಿ ಸ್ನಾನಘಟ್ಟ ಹಾಗೂ ಅಂಗಡಿಗಳು ಮುಳುಗಡೆಯಾಗಿವೆ. ಇತ್ತ ಜಗಳೂರು ತಾಲೂಕಿನ 5 ದಶಕದ ಕನಸು ನನಸಾಗಿದ್ದು, 30 ಕೆರೆಗೆ ತುಂಗಭದ್ರ ನದಿ ನೀರು ಹರಿಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಭದ್ರಾ ಡ್ಯಾಂಗೆ ಒಂದೇ ದಿನ 2.6 ಅಡಿ ನೀರು ಹರಿದುಬಂದಿದೆ.



