ಅವಲಕ್ಕಿ ಈ ರೀತಿ ಬಳಸಿದರೆ ಆರೋಗ್ಯ ಸಮಸ್ಯೆಯೇ ಬರಲ್ಲ

Updated By: ಅಕ್ಷತಾ ವರ್ಕಾಡಿ

Updated on: Apr 19, 2025 | 2:38 PM

ಅವಲಕ್ಕಿ ಶ್ರೀ ಕೃಷ್ಣನಿಗೂ ಪ್ರೀಯ. ಹಾಗಾಗಿಯೇ ಇದನ್ನು ಆರೋಗ್ಯದ ಗಣಿ ಎನ್ನುತ್ತಾರೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಅವಲಕ್ಕಿಯನ್ನು ಒಂದಲ್ಲಾ ಒಂದು ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಇದು ಕೇವಲ ತಿಂಡಿ, ತಿನಿಸುಗಳನ್ನು ಮಾಡಲು ಮಾತ್ರ ಉಪಯೋಗ ಮಾಡುವುದಲ್ಲ ಬದಲಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗೆ ಮನೆಮದ್ದಾಗಿ ಉಪಯೋಗ ಮಾಡಲಾಗುತ್ತದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

1 / 4
ಕೃಷ್ಣನಿಗೆ ಪ್ರೀಯವಾದ ಅವಲಕ್ಕಿಯಲ್ಲಿ ಅಮೃತಕ್ಕಿರುವ ಶಕ್ತಿ ಇದೆ. ಇವುಗಳನ್ನು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಕೆ ಮಾಡಲಾಗುತ್ತದೆ. ಅದಲ್ಲದೆ ಅವಲಕ್ಕಿ ಸೇವನೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿರುವುದಿಲ್ಲ. ಹಾಗಾಗಿ ನಿಮಗೂ ಕೂಡ ಜೀರ್ಣಕ್ರಿಯೆ, ಹೊಟ್ಟೆಗೆ ಸಂಬಂಧಿಸಿದ ಮತ್ತಿತರ ಸಮಸ್ಯೆಗಳಿದ್ದರೆ ಅವಲಕ್ಕಿಯನ್ನು ಈ ರೀತಿ ಬಳಸಿ ನೋಡಿ.

2 / 4
ಜೀರ್ಣಶಕ್ತಿ ಕುಂಠಿತಗೊಂಡಿದ್ದು ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಅವಲಕ್ಕಿಯನ್ನು ಸೇವನೆ ಮಾಡಿ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವುದರ ಜೊತೆಗೆ ಮಲಬದ್ಧತೆಯನ್ನು ನಿವಾರಿಸುತ್ತದೆ. ಈ ರೀತಿ ಸಮಸ್ಯೆ ಕಂಡು ಬಂದಾಗ ನೀರು ಅಥವಾ ಮಜ್ಜಿಗೆಯಲ್ಲಿ ಅವಲಕ್ಕಿಯನ್ನು ನೆನೆಸಿಟ್ಟು ಆ ಬಳಿಕ ಉಪ್ಪು ಹಾಕಿ ಕುಡಿಯಬಹುದು.

3 / 4
ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸಲು ಅವಲಕ್ಕಿಯನ್ನು ಮೊಸರಿನೊಂದಿಗೆ ಬೆರೆಸಿ ಸೇವನೆ ಮಾಡಬಹುದು. ತ್ವರಿತ ಶಕ್ತಿ ಪಡೆಯಲು ಅವಲಕ್ಕಿ ಉಪ್ಮಾ ಅಥವಾ ಪೋಹಾ ಮಾಡಿ ಕೂಡ ಸೇವನೆ ಮಾಡಬಹುದು. ಉಪವಾಸದ ಸಮಯದಲ್ಲಿಯೂ ಇವುಗಳನ್ನು ಉಪಹಾರಗಳಲ್ಲಿ ಬಳಕೆ ಮಾಡಿಕೊಳ್ಳಬಹುದು. ಜೊತೆಗೆ ಇದನ್ನು ಚಿಕ್ಕ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ಕೂಡ ಸೇವನೆ ಮಾಡಬಹುದು.

4 / 4
ಪದೇ ಪದೇ ಕೆಮ್ಮು ಬರುತ್ತಿದ್ದರೆ ಅವಲಕ್ಕಿ ಮತ್ತು ಸಕ್ಕರೆ ಸೇರಿಸಿಕೊಂಡು ಚೆನ್ನಾಗಿ ಅಗಿದು ತಿನ್ನಬೇಕು. ಇದರಿಂದ ಕೆಮ್ಮು ಕಡಿಮೆಯಾಗುತ್ತದೆ.

Published On - 2:25 pm, Sat, 19 April 25