
ಪ್ರೇಮಿಗಳ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಂದು ದಿನವು ಒಂದೊಂದು ವಿಶೇಷತೆಗಳಿಂದ ಕೂಡಿದೆ. ಪ್ರತಿ ದಿನವು ಪ್ರೇಮಿಗಳು ವಿಶೇಷವಾಗಿ ಸೆಲೆಬ್ರೇಟ್ ಮಾಡುವ ಮೂಲಕ ಸಂಭ್ರಮಿಸುತ್ತಾರೆ. ಫೆಬ್ರವರಿ 12 ರ ಅಪ್ಪುಗೆಯ ದಿನವು ಸಂಗಾತಿ ಅಥವಾ ಪ್ರೇಮಿಗಳ ನಡುವಿನ ದೈಹಿಕ ಆಕರ್ಷಣೆಯನ್ನು ವ್ಯಕ್ತಪಡಿಸಲು ಇರುವ ದಿನವಾಗಿದೆ. ಈ ಅಪ್ಪುಗೆಯು ಸಣ್ಣ ಪುಟ್ಟ ಮುನಿಸುಗಳನ್ನು ಮರೆಸಿ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ಬಿಗಿದಪ್ಪುಗೆ : ಸುಮಾರು ಸಮಯದ ಬಳಿಕ ಇಬ್ಬರೂ ಪ್ರೇಮಿಗಳು ಸಿಕ್ಕಾಗ ಬಿಗಿದಪ್ಪಿಕೊಳ್ಳುವುದು ಸಂಬಂಧದ ಆಳವನ್ನು ಹಾಗೂ ಭಾವನೆಗಳನ್ನು ಹೇಳುತ್ತವೆ. ಈ ಅಪ್ಪುಗೆಯು ಒಬ್ಬರು ಇನ್ನೊಬ್ಬರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎನ್ನುವುದನ್ನು ತಿಳಿಸುತ್ತದೆ. ಸಂಬಂಧದ ಆಳವನ್ನು ಅರ್ಥ ಮಾಡಿಕೊಳ್ಳಬಹುದು.

ಹಿಂಬದಿಯ ಅಪ್ಪುಗೆ : ಸಂಗಾತಿಯನ್ನು ಹಿಂಬದಿಯನ್ನು ಅಪ್ಪಿಕೊಳ್ಳುವುದು ರೋಮ್ಯಾಂಟಿಕ್ ಅನುಭವವನ್ನು ತಂದುಕೊಡುತ್ತದೆ. ಈ ಅಪ್ಪುಗೆಯು ಸಂಗಾತಿ ತುಂಬಾನೇ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದಾಗ ಸಹಜವಾಗಿ ಕಾಣಿಸುತ್ತದೆ. ಈ ಅಪ್ಪುಗೆಯಿಂದ ಸಂಗಾತಿಯು ದೈಹಿಕ ಆಸೆಯನ್ನು ವ್ಯಕ್ತಪಡಿಸುತ್ತಾರೆ ಎನ್ನುವುದು ಅರ್ಥೈಸಿಕೊಳ್ಳಬಹುದಾಗಿದೆ

ಮಡಿಲಿನಲ್ಲಿ ಕೂರಿಸಿ ತಬ್ಬಿಕೊಳ್ಳುವುದು : ಅಪ್ಪುಗೆಯು ಪ್ರೀತಿಯನ್ನು ತೋರಿಸುತ್ತದೆಯಾದರೂ ದೈಹಿಕ ಆಸಕ್ತಿಯನ್ನು ವ್ಯಕ್ತಪಡಿಸಲು ಸಹಕಾರಿಯಾಗಿದೆ. ಸಂಗಾತಿ ಅಥವಾ ಪ್ರೇಮಿಯು ಮಡಿಲಿನಲ್ಲಿ ಕೂರಿಸಿಕೊಂಡು ಅಪ್ಪಿಕೊಂಡರೆ ಅದು ದೈಹಿಕ ಆಸಕ್ತಿಯನ್ನು ತೋರಿಸುತ್ತದೆ. ಈ ಆಲಿಂಗನದಿಂದ ಒಬ್ಬರಿಗೊಬ್ಬರು ಹತ್ತಿರವಾಗಲು ಸಾಧ್ಯ.

ಸೈಡ್ ಅಪ್ಪುಗೆ: ಒಂದು ಬದಿಯಲ್ಲಿ ತಬ್ಬಿಕೊಳ್ಳುವುದು ಇಬ್ಬರಿಗೂ ಕಂಫರ್ಟ್ ಅನುಭವವನ್ನು ನೀಡುತ್ತದೆ. ಭವಿಷ್ಯದ ಬಗ್ಗೆ ಇಬ್ಬರೂ ಕೂತು ಚರ್ಚಿಸುವಾಗ ಇಬ್ಬರೂ ಒಂದು ಬದಿಯಲ್ಲಿ ಅಪ್ಪಿಕೊಂಡು ಮಾತನಾಡಿದರೆ ಮಾತುಕತೆಯಲ್ಲಿ ಇಬ್ಬರೂ ಬೆರೆತುಹೋಗಬಹುದು.

ತೋಳಿನಲ್ಲಿ ತಲೆಹಿಟ್ಟು ಪ್ರೀತಿಯ ಅಪ್ಪುಗೆ : ಸಾಮಾನ್ಯವಾಗಿ ಈ ಅಪ್ಪುಗೆಯ ಎಲ್ಲರೂ ಕೂಡ ಸಂಗಾತಿ ಅಥವಾ ಪ್ರೇಮಿಗಳು ಇಷ್ಟ ಪಡುತ್ತಾರೆ. ಈ ಅಪ್ಪುಗೆಯಲ್ಲಿ ಒಬ್ಬರ ತೋಳಿಗೆ ಮತ್ತೊಬ್ಬರು ತಲೆಹಿಟ್ಟು ಆಲಿಂಗಿಸಿದರೆ ಸಂಗಾತಿಯು ಸುರಕ್ಷಿತ ಭಾವವನ್ನು ಅನುಭವಿಸುತ್ತಾರೆ. ಈ ರೀತಿ ತಬ್ಬಿಕೊಳ್ಳುವುದರಿಂದ ನೀವೆಷ್ಟು ಮುಖ್ಯ ಎನ್ನುವುದನ್ನು ತಿಳಿಸುತ್ತದೆ.

ಇಬ್ಬರೂ ತೋಳಿನಲ್ಲಿ ಬಂಧಿಯಾಗುವುದು : ಸಂಗಾತಿಗಳಿಬ್ಬರೂ ತೋಳಿನಲ್ಲಿ ಬಂಧಿಯಾಗುವುದರಿಂದ ಈ ಅಪ್ಪುಗೆಯು ಎನರ್ಜಿ ಬೂಸ್ಟರ್ ನಂತೆಯೇ ಕೆಲಸ ಮಾಡುತ್ತದೆ. ಎಷ್ಟೇ ಬ್ಯುಸಿಯಿದ್ದರೂ ದಿನದಲ್ಲಿ ಒಮ್ಮೆಯಾದರೂ ಹೀಗೆ ಅಪ್ಪಿಕೊಂಡರೆ ನಾನು ಸದಾ ನಿನ್ನೊಂದಿಗೆ ಇದ್ದೇನೆ ಎನ್ನುವುದನ್ನು ಹೇಳುತ್ತದೆ