ಮೆದುಳಿನ ಆರೋಗ್ಯ ಹೆಚ್ಚಿಸುತ್ತೆ ಈ ಆಹಾರಗಳು: ಮಿಸ್ ಮಾಡದೇ ಸೇವಿಸಿ!
TV9 Web | Updated By: ಗಂಗಾಧರ ಬ. ಸಾಬೋಜಿ
Updated on:
Jul 08, 2023 | 7:00 AM
ದೇಹ ಮತ್ತು ಮೆದುಳಿಗೆ ಆಹಾರ ಬೇಕು. ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮೆದುಳಿನ ಆರೋಗ್ಯದ ಕೊರತೆ ಹೆಚ್ಚಾಗುತ್ತಿದ್ದು, ಆದ್ದರಿಂದ ಸರಿಯಾದ ಪೋಷಣೆ ಅಗತ್ಯವಾಗಿದೆ. ಮೆದುಳಿನ ಆರೋಗ್ಯಕ್ಕಾಗಿ
ಈ ಉತ್ತಮ ಆಹಾರಗಳನ್ನು ಸೇವಿಸಿ ಎನ್ನುತ್ತಾರೆ ತಜ್ಞರು.
1 / 5
ಬೆರ್ರಿ ಹಣ್ಣುಗಳು: ಬೆರ್ರಿ ಹಣ್ಣುಗಳು ಸಾಮಾನ್ಯವಾಗಿ ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗುತ್ತದೆ. ಇದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಬೆರ್ರಿ ಹಣ್ಣು ನಿರೋಧಕ ಅಂಶಗಳಿಂದ ತುಂಬಿರುತ್ತವೆ. ಮೆದುಳಿನ ಕಾಯಿಲೆಗಳಿಗೆ ಕಾರಣವಾಗುವ ಉರಿಯೂತದ ವಿರುದ್ಧ ಹೊರಡಾತ್ತದೆ.
2 / 5
ಅರಿಶಿನ: ಅರಿಶಿನ ಕ್ಯಾನ್ಸರ್ ವಿರೋಧಿ, ಉತ್ಕರ್ಷಣ ನಿರೋಧಕ, ಇತರ ಗುಣಲಕ್ಷಣಗಳನ್ನು ಹೊಂದಿದೆ. ಅತ್ಯಂತ ಪರಿಣಾಮಕಾರಿ ಪೌಷ್ಟಿಕಾಂಶ ಹೊಂದಿರುವ ಪದಾರ್ಥವೆಂದರೆ ಅದು ಅರಿಶಿನ.
ಅರಿಶಿನವು ದೇಹ ಮತ್ತು ಮೆದುಳಿಗೆ ಉತ್ತಮ ಪ್ರಯೋಜನಗಳನ್ನು ಹೊಂದಿದೆ ಎಂದು ಅನೇಕ ಅಧ್ಯಯನಗಳಿಂದ ತಿಳಿದು ಬಂದಿದೆ.
3 / 5
ಆವಕಾಡೊ: ಆವಕಾಡೊಗಳಲ್ಲಿ ವಿಟಮಿನ್ ಮತ್ತು ಫೋಲೇಟ್ನ ಉತ್ತಮ ಮೂಲಗಳಾಗಿವೆ. ಇದು ಮರೆವಿನ ದುರ್ಬಲತೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
4 / 5
ಸೊಪ್ಪುಗಳು: ಸೊಪ್ಪು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಇದು ವಿಟಮಿನ್ ಕೆ, ಸಿ ಮತ್ತು ಇ ಅನ್ನು ಹೊಂದಿರುತ್ತದೆ. ಅವರು ಮೆದುಳಿನ ಕೋಶಗಳಿಗೆ ಶಕ್ತಿ ತುಂಬಲು ಸಹಕಾರಿಯಾಗಿದೆ.
5 / 5
ಡ್ರೈ ಫ್ರೂಟ್ಸ್: ಬಾದಾಮಿ ಮತ್ತು ವಾಲ್‌ನಟ್ಸ್ ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ನಿರೋಧಕ ಗುಣಲಕ್ಷಣಗಳೊಂದಿಗೆ, ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.