ಸಾಮಾನ್ಯವಾಗಿ ಮಹಿಳೆಯರು ಸಣ್ಣಪುಟ್ಟ ಆರೋಗ್ಯ ಸಮಸ್ಯಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅದೇ ಸಣ್ಣ ಪ್ರಮಾಣದ ಕೆಲವು ಲಕ್ಷಣಗಳು ಮುಂದೊಂದು ದೊಡ್ಡ ರೋಗಕ್ಕೆ ಕಾರಣವಾಗಬಹುದು. ಹೀಗಾಗಿ ಕೆಲವು ಲಕ್ಷಣಗಳನ್ನು ಕಡೆಗಣಿಸದಿರುವುದೇ ಒಳಿತು. ಹಾಗಾದರೆ ಯಾವೆಲ್ಲಾ ಅನಾರೋಗ್ಯಗಳನ್ನು ಕಡೆಗಣಿಸಬಾರದು ಎನ್ನುವ ಮಾಹಿತಿ ಇಲ್ಲಿದೆ.
ಉಸಿರಾಟದಲ್ಲಿ ಬದಲಾವಣೆ ಆದರೆ ಅಥವಾ ಉಸಿರಾಡಲು ಕಷ್ಟವಾಗಿ ಎದೆಯಲ್ಲಿ ನೋವು ಕಾಣಿಸಕೊಳ್ಳುತ್ತಿದ್ದರೆ ಅಂತಹ ಸೂಚನೆಗಳನ್ನು ನಿರ್ಲಕ್ಷಿಸುವುದು ಒಳಿತಲ್ಲ.
ಪದೆ ಪದೇ ಕಾಣಿಸಿಕೊಳ್ಳುವ ಎದೆಯ ನೋವು, ಜೋರಾದ ಎದೆ ಬಡಿತಗಳ ಬಗ್ಗೆ ಅಸಡ್ಡೆ ಬೇಡ. ಹೃದಯದ ಸಮಸ್ಯೆಗಳು ಹೆಚ್ಚಯ ಮಹಿಳೆಯರಲ್ಲಿಯೇ ಕಾಣಿಸಕೊಳ್ಳುತ್ತದೆ ಹೀಗಾಗಿ ಅಸಡ್ಡೆ ಬೇಡ.
ಇದ್ದಕ್ಕಿಂದ ಹಾಗೆ ಅಶಕ್ತತೆ ಉಂಟಾದರೆ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಇದು ಸ್ಟ್ರೋಕ್ನ ಲಕ್ಷಣವಾಗಿರಬಹುದು. ಆಗಾಗ ಗೊಂದಲ ಉಂಟಾಗುವುದು, ಮರೆವು ಈ ರೀತಿಯ ಲಕ್ಷಣಗಳನ್ನು ಕಡೆಗಣಿಸಬೇಡಿ.
ಮುಟ್ಟಿನ ದಿನಗಳಲ್ಲಿ ಏರುಪೇರಾದರೆ ನಿರ್ಲಕ್ಷ ಬೇಡವೇ ಬೇಡ. ಏಕೆಂದರೆ ಇದು ಬೇರೆ ಬೇರೆ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಋತುಚಕ್ರದಲ್ಲಿ ಬದಲಾವಣೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.
ಚರ್ಮದ ಬದಲಾವಣೆ ಬಗ್ಗೆ ಎಚ್ಚರವಹಿಸಿ. ಮಧುಮೇಹಕ್ಕೆ ಮೊದಲು ನಿಮ್ಮ ಚರ್ಮದ ಬಣ್ನ ಬದಲಾವಣೆಗೊಳಳ್ಉತ್ತದೆ. ಹೀಗಾಗಿ ಎಚ್ಚರಿಕೆಯಿಂದಿರಿ.
ದೇಹದ ತೂಕದಲ್ಲಿ ಏಕಾಏಕಿ ಏರಿಕೆ ಅಥವಾ ಇಳಿಕೆ ಕಂಡುಬಂದರೆ ಕೂಡಲೆ ತಜ್ಞರನ್ನು ಸಂಪರ್ಕಿಸಿ. ಏಕೆಂದರೆ ಡಯಾಬಿಟೀಸ್, ಥೈರಾಯಿಡ್ನಂತಹ ರೋಗದ ಮುನ್ಸೂಚನೆಗಳಿರಬಹುದು.
ಸ್ತನಗಳ ಗಾತ್ರದ ಬದಲಾವಣೆ: ಸ್ತನ ಕ್ಯಾನ್ಸರ್ನಂತಹ ರೋಗಗಳು ಆರಂಭವಾದರೆ ಸ್ತನಗಳಲ್ಲಿ ಗಡ್ಡೆ ಬೆಳೆದು ಗಾತ್ರದೊಡ್ಡದಾಗಿ ಗಟ್ಟಿಯಾಗುತ್ತದೆ. ಆದ್ದರಿಂದ ಎಚ್ಚರಿಕೆವಹಿಸಿ.
ಅತಿಯಾದ ನಿದ್ರಾವಸ್ಥೆ ಮತ್ತು ಗೊರಕೆಯನ್ನು ಹೊಡೆಯವ ಅಭ್ಯಾಸವಾದರೆ ಅದು ಅನಗತ್ಯವಾಗಿ ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಆದ್ದರಿಂದ ನಿದ್ದೆ ಮಾಡುವಾಗ ಮಲಗುವ ಶೈಲಿಯ ಬಗ್ಗೆ ಗಮನವಿರಲಿ.
ಸದಾ ಕಾಲ ಅತಿಯಾದ ಸುಸ್ತು ಕಾಡುತ್ತಿದ್ದರೆ ಅಸಡ್ಡೆ ಬೇಡ. ಇವು ಕ್ಯಾನ್ಸರ್ನಂತಹ ರೋಗದ ಲಕ್ಷಣಗಳಾಗಿರಬಹುದು.
ಇದ್ದಕ್ಕಿದ್ದ ಹಾಗೆ ಕಣ್ಣುಗಳ ದೃಷ್ಟಿ ಮಂದವಾದರೆ ವೈದ್ಯರಿಗೆ ತೋರಿಸಿ. ರೆಟಿನಾದ ಸಮಸ್ಯೆ ಇದ್ದರೂ ಹಾಗೆ ಆಗುತ್ತದೆ. ಇದರ ನಿರ್ಲಕ್ಷ ಮಾಡಿದರೆ ಶಾಶ್ವತ ಕುರುಡುತನ ಅನುಭವಿಸಬಹುದು,
ಅತಿಯಾದ ಮಾನಸಿಕ ಒತ್ತಡ ಮತ್ತು ಆತಂಕದಲ್ಲಿ ಇದ್ದರೆ, ಇವು ಹಲವು ರೀತಿಯ ಆರೋಗ್ಯ ತೊಂದರೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಮನಸ್ಸನ್ನು ಆದಷ್ಟು ಕೂಲ್ ಆಗಿ ಇಟ್ಟುಕೊಳ್ಳಿ