Forbes Richest Athletes: ಇವರೇ ನೋಡಿ ವಿಶ್ವದ ಶ್ರೀಮಂತ ಕ್ರೀಡಾಪಟುಗಳು..!
TV9 Web | Updated By: ಝಾಹಿರ್ ಯೂಸುಫ್
Updated on:
May 12, 2022 | 6:39 PM
Top 5 Forbes richest athletes of 2022: ಈ ಬಾರಿ ಕೂಡ ಫುಟ್ಬಾಲ್ ಆಟಗಾರನೇ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಮತ್ತೋರ್ವ ಫುಟ್ಬಾಲ್ ಆಟಗಾರನನ್ನು ಹಿಂದಿಕ್ಕಿ ಎಂಬುದು ವಿಶೇಷ.
1 / 7
ಫೋರ್ಬ್ಸ್ ಮ್ಯಾಗಝಿನ್ 2022 ರ ವಿಶ್ವದ ಟಾಪ್ 5 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯನ್ನು ಪ್ರಕಟಿಸಿದೆ. ವಿಶೇಷ ಎಂದರೆ ಈ ಪಟ್ಟಿಯಲ್ಲಿ ಈ ಬಾರಿ ಕೂಡ ಫುಟ್ಬಾಲ್ ಆಟಗಾರನೇ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಮತ್ತೋರ್ವ ಫುಟ್ಬಾಲ್ ಆಟಗಾರನನ್ನು ಹಿಂದಿಕ್ಕಿ ಎಂಬುದು ವಿಶೇಷ. ಹಾಗಿದ್ರೆ 2022 ರ ವಿಶ್ವದ ಟಾಸ್ 5 ಶ್ರೀಮಂತ ಕ್ರೀಡಾಪಟುಗಳು ಯಾರೆಲ್ಲಾ ನೋಡೋಣ...
2 / 7
5- ಸ್ಟೀಫನ್ ಕರಿ: ಅಮೆರಿಕನ್ ಬಾಸ್ಕೆಟ್ಬಾಲ್ ಆಟಗಾರ ಸ್ಟೀಫನ್ ಕರಿ ಈ ವರ್ಷ ಒಟ್ಟು 92.8 ಮಿಲಿಯನ್ ಡಾಲರ್ ಗಳಿಕೆಯೊಂದಿಗೆ ಐದನೇ ಸ್ಥಾನ ಅಲಂಕರಿಸಿದ್ದಾರೆ.
3 / 7
4- ನೇಮರ್: ಪ್ಯಾರಿಸ್ ಸೇಂಟ್-ಜರ್ಮೈನ್ ಮತ್ತು ಬ್ರೆಜಿಲ್ ರಾಷ್ಟ್ರೀಯ ಫುಟ್ಬಾಲ್ ತಂಡದ ಫಾರ್ವರ್ಡ್ ಆಟಗಾರ ನೇಮರ್ ಜೂನಿಯರ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 2022 ರಲ್ಲಿ ಅವರ ಒಟ್ಟು ಗಳಿಕೆಯು 95 ಮಿಲಿಯನ್ ಡಾಲರ್ ಇದೆ.
4 / 7
3- ಕ್ರಿಸ್ಟಿಯಾನೊ ರೊನಾಲ್ಡೊ: ಪೋರ್ಚುಗಲ್ ನಾಯಕ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊ ಈ ಬಾರಿ ಅಗ್ರಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ 2022 ರಲ್ಲಿ 115 ಮಿಲಿಯನ್ ಡಾಲರ್ ಸಂಪಾದಿಸುವ ಮೂಲಕ ಮೂರನೇ ಸ್ಥಾನ ಅಲಂಕರಿಸಿದ್ದಾರೆ. ರೊನಾಲ್ಡೊ ಆನ್-ಫೀಲ್ಡ್ ಗಳಿಕೆಯು 60 ಮಿಲಿಯನ್ ಡಾಲರ್ ಆಗಿದ್ದರೆ, ಅವರ ಆಫ್-ಫೀಲ್ಡ್ ಗಳಿಕೆಯು 55 ಮಿಲಿಯನ್ ಇದೆ.
5 / 7
2- ಲೆಬ್ರಾನ್ ಜೇಮ್ಸ್: ಬಾಸ್ಕೆಟ್ಬಾಲ್ ಕೋರ್ಟ್ನಲ್ಲಿ "ಕಿಂಗ್ ಜೇಮ್ಸ್" ಎಂದೇ ಖ್ಯಾತರಾಗಿರುವ LA ಲೇಕರ್ಸ್ ಆಟಗಾರ ಲೆಬ್ರಾನ್ 2022 ರಲ್ಲಿ ಒಟ್ಟು 121.2 ಮಿಲಿಯನ್ ಡಾಲರ್ ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
6 / 7
1- ಲಿಯೊನೆಲ್ ಮೆಸ್ಸಿ: ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಈ ವರ್ಷ ಒಟ್ಟು 130 ಮಿಲಿಯನ್ ಡಾಲರ್ ಸಂಪಾದಿಸುವ ಮೂಲಕ ವಿಶ್ವದ ಶ್ರೀಮಂತ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಪಿಎಸ್ಜಿ ಕ್ಲಬ್ ಪರ ಆಡುತ್ತಿರುವ ಮೆಸ್ಸಿ ಅನ್ಫೀಲ್ಡ್ ಮೂಲಕ 75 ಮಿಲಿಯನ್ ಡಾಲರ್ ಸಂಪಾದಿಸಿದರೆ, ಉಳಿದ 55 ಮಿಲಿಯನ್ ಡಾಲರ್ ಆಫ್ ಫೀಲ್ಡ್ (ಜಾಹೀರಾತು, ಇನ್ನಿತರೆ) ಮೂಲಕ ಗಳಿಸಿದ್ದಾರೆ.
7 / 7
61- ವಿರಾಟ್ ಕೊಹ್ಲಿ: ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ 61 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ 2022 ರಲ್ಲಿ 33.9 ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ. ಕೊಹ್ಲಿಯನ್ನು ಹೊರತುಪಡಿಸಿ ಭಾರತದ ಯಾವುದೇ ಕ್ರೀಡಾಪಟು ಟಾಪ್ 100 ನಲ್ಲಿ ಸ್ಥಾನ ಪಡೆದಿಲ್ಲ.
Published On - 6:26 pm, Thu, 12 May 22