ಇಂತಹ ಅತ್ತೆ ಇದ್ದರೆ ಸೊಸೆಯ ಜೀವನವೇ ನರಕವಾಗುತ್ತಂತೆ

Updated on: May 08, 2025 | 6:05 PM

ಪ್ರತಿ ಮನೆಯಲ್ಲೂ ಅತ್ತೆ-ಸೊಸೆ ಜಗಳ ಎನ್ನುವಂತಹದ್ದು ಇದ್ದೆ ಇರುತ್ತದೆ. ಒಟ್ಟಿನಲ್ಲಿ ಅತ್ತೆ-ಸೊಸೆ ಜಗಳ ಸಾಮಾನ್ಯ ಅಂತಾನೇ ಹೇಳಬಹುದು. ಮಗನ ವಿಚಾರವಾಗಿ, ಅಡುಗೆ, ಮನೆ ಕೆಲಸದ ವಿಚಾರವಾಗಿ, ಸೊಸೆ ಆಗಾಗ್ಗೆ ತವರು ಮನೆಗೆ ಹೋಗುತ್ತಾಳೆ ಎನ್ನುವ ವಿಚಾರವಾಗಿ ಮನಸ್ತಾಪ ಜಗಳಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಈ ಕೆಲವು ಗುಣಗಳಿರುವ ಅತ್ತೆಯಿದ್ದರಂತೂ ಸೊಸೆಯ ಜೀವನವೇ ನರಕದಂತಿರುತ್ತಂತೆ. ಹೌದು ಈ ಕೆಲವು ಗುಣಗಳಿರುವ ಅತ್ತೆ ಇದ್ದರೆ ಸೊಸೆಯಾದವಳಿಗೆ ಸಮಸ್ಯೆ ತಪ್ಪಿದ್ದಲ್ಲವಂತೆ.

1 / 6
ಅತ್ತೆ-ಸೊಸೆಯ ಜಗಳ ಪ್ರತಿ ಮನೆಯ ಕಥೆಯಾದ್ರೂ ಕೂಡ ಇಂತಹ ಕೆಲವು ಸ್ವಭಾವಗಳಿರುವ ಅತ್ತೆಯಿದ್ದರೆ ಸೊಸೆಯ ಜೀವನ ನರಕದಂತಿರುತ್ತಂತೆ. ಅತ್ತೆಯಾದವಳು ಯಾವಾಗಲೂ ಹಣ, ಹಣ ಅಂತ ಲೆಕ್ಕ ಹಾಕುತ್ತಿದ್ದರೆ, ನೀವು ತವರು ಮನೆಯಿಂದ ಏನು ತರುತ್ತೀರಿ ಅನ್ನೋದನ್ನೇ ಯೋಚಿಸುತ್ತಿದ್ದರೆ, ಇಂತಹ ಅತ್ತೆಯಿರುವ ಮನೆಗೆ ಸೊಸೆಯಾಗಿ ಹೋದವಳ ಜೀವನ ನರಕದಂತಿರುತ್ತದೆ.

2 / 6
ಮದುವೆಯ ನಂತರವೂ ಸಂಬಂಧಗಳಿಗೆ ಬೆಲೆ ಕೊಡದೆ ಸೊಸೆಯ ತವರು ಮನೆಯಿಂದ ದುಬಾರಿ ಉಡುಗೊರೆ ಅಥವಾ ವರದಕ್ಷಿಣೆಯನ್ನು ನಿರೀಕ್ಷಿಸುವ ಅತ್ತೆಯಿದ್ದರೆ, ಅಂತಹ ಮನೆಗೆ ಸೊಸೆಯಾಗಿ ಹೋಗುವ ಮಹಿಳೆಯ ಜೀವನ ನರಕದಂತಿರುತ್ತದೆ. ಹೌದು ಏಕೆಂದ್ರೆ ಅಂತಹ ಅತ್ತೆ ಸೊಸೆಯ ತವರು ಮನೆಯ ಬಗ್ಗೆ ಕೀಳಾಗಿ ಮಾತನಾಡುತ್ತಾ, ವರದಕ್ಷಿಣೆ ನೀಡಲು ಕಿರುಕುಳ ನೀಡುವ ಸಾಧ್ಯತೆ ಇರುತ್ತದೆ.

3 / 6
ಕೆಲವು ಅತ್ತೆಯಂದಿರು ತಮ್ಮ ಸೊಸೆಯಂದಿರನ್ನು ಸಂಪೂರ್ಣವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಯಾವಾಗ ಎದ್ದೇಳಬೇಕು, ಯಾರೊಂದಿಗೆ ಮಾತನಾಡಬೇಕು, ಯಾರೊಂದಿಗೆ ಮಾತನಾಡಬಾರದು, ಎಲ್ಲಿಗೆ ಹೋಗ್ಬೇಕು, ಎಲ್ಲಿಗೆ ಹೋಗಬಾರದು ಹೀಗೆ ಸೊಸೆಯನ್ನು ಪ್ರತಿಯೊಂದು ವಿಷಯದಲ್ಲೂ ನಿಯಂತ್ರಿಸಲು ಬಯಸುತ್ತಾರೆ. ಅತ್ತೆಯ ಈ ಸ್ವಭಾವ ಸೊಸೆಗೆ ಕಿರಿಕಿರಿ ಉಂಟು ಮಾಡಬಹುದು.

4 / 6
ಕೆಲವು ಮಹಿಳೆಯರು ತಮ್ಮ ಮಗನಿಗೆ ಬರುವ ಸಂಬಳ, ಸೊಸೆಯ ಸಂಬಳ, ಆಕೆಯ ಆಭರಣ ಇವೆಲ್ಲವನ್ನೂ ತನ್ನಲ್ಲಿಯೇ ಇಟ್ಟುಕೊಳ್ಳಲು ಬಯಸುತ್ತಾರೆ, ಅಂತಹ ಮನೆಯಲ್ಲಿ ಸೊಸೆಯಾದವಳಿಗೆ ಹೆಚ್ಚು ಸ್ವಾತಂತ್ರ್ಯ ಕೂಡಾ ಇರುವುದಿಲ್ಲ. ಈ ಅಂಶ ಸೊಸೆಯಾದವಳಿಗೆ ಉಸಿರುಗಟ್ಟಿದ ವಾತಾವರಣದಲ್ಲಿ ಬದುಕಿದಂತಾಗುತ್ತದೆ.

5 / 6
ಯಾವ ಅತ್ತೆ ಕೆಲಸ, ನಡತೆಯಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ತನ್ನ ಸೊಸೆಯನ್ನು ಇತರರೊಂದಿಗೆ ಹೋಲಿಕೆ ಮಾಡುತ್ತಿದ್ದರೆ, ಅಂತಹ ಅತ್ತೆಯೊಂದಿಗೆ ಇರುವ ಸೊಸೆಯ ಜೀವನ ನರಕದಂತಿರುತ್ತದೆ ಅಂತಾನೇ ಹೇಳಬಹುದು. ಹೌದು ಆಕೆ ಇತರರರೊಂದಿಗೆ ಹೋಲಿಕೆ ಮಾಡಿ ತನ್ನ ಸೊಸೆಗೆ ಚುಚ್ಚು ಮಾತುಗಳನ್ನಾಡುವ ಸಾಧ್ಯತೆ ಇರುತ್ತದೆ.

6 / 6
ಸೊಸೆ ಮಾಡುವಂತಹ ಪ್ರತಿಯೊಂದು ಕೆಲಸದಲ್ಲೂ ಅತ್ತೆಯಾದವಳು ತಪ್ಪು ಹುಡುಕುತ್ತಿದ್ದರೆ, ಅತ್ತೆಯ ಈ ಸ್ವಭಾವ ಸೊಸೆಗೆ ಸಿಟ್ಟು ತರಿಸುವುದು ಮಾತ್ರವಲ್ಲದೆ, ಇದರಿಂದ ಅತ್ತೆ ಸೊಸೆ ಸಂಬಂಧವೂ ಕೂಡಾ ಹಾಳಾಗುತ್ತದೆ.