Toyota: ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಸಿಎನ್ ಜಿ ವರ್ಷನ್ ಬಿಡುಗಡೆ

|

Updated on: Jan 31, 2023 | 7:18 PM

ಟೊಯೊಟಾ ಇಂಡಿಯಾ ಕಂಪನಿಯು ಅರ್ಬನ್ ಕ್ರೂಸರ್ ಹೈರೈಡರ್ ಸಿಎನ್ ಜಿ ಮಾದರಿಯನ್ನ ಭಾರತದಲ್ಲಿ ಬಿಡುಗಡೆ ಮಾಡಿದ ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 13.23 ಲಕ್ಷ ಬೆಲೆ ಹೊಂದಿದೆ.

1 / 7
ಭಾರತದಲ್ಲಿ ಪರ್ಯಾಯ ಇಂಧನ ಪ್ರೇರಿತ ಕಾರುಗಳ ಮಾರಾಟ ಹೆಚ್ಚುತ್ತಿದ್ದು, ಸಿಎನ್ ಜಿ ಕಾರುಗಳಿಗೆ ಭರ್ಜರಿ ಬೇಡಿಕೆ ಹರಿದುಬರುತ್ತಿದೆ. ಹೀಗಾಗಿ ಟೊಯೊಟಾ ಕಂಪನಿ ಸಹ ತನ್ನ ಹೊಸ ಅರ್ಬನ್ ಕ್ರೂಸರ್ ಹೈರೈಡರ್ ಕಾರಿನಲ್ಲಿ ಹೊಸ ವರ್ಷನ್ ಬಿಡುಗಡೆ ಮಾಡಿದೆ. ಹೊಸ ಸಿಎನ್ ಜಿ ಕಾರು ಮಾದರಿಯು ಎಸ್ ಯುವಿ ವಿಭಾಗದಲ್ಲಿಯೇ ಅತಿ ಹೆಚ್ಚು ಮೈಲೇಜ್ ನೀಡಲಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

2 / 7
ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಣಾಮ ಪರ್ಯಾಯ ಇಂಧನ ಪ್ರೇರಿತ ಕಾರುಗಳಿಗೆ ಭರ್ಜರಿ ಬೇಡಿಕೆ ಹರಿದುಬರುತ್ತಿದೆ.  ಪರ್ಯಾಯ ಇಂಧನ ಪ್ರೇರಿತ ಕಾರುಗಳಲ್ಲಿ ಸಿಎನ್ ಜಿ ಮಾದರಿಗಳು ಸದ್ಯ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ. ಹೀಗಾಗಿ ಟೊಯೊಟಾ ಕಂಪನಿ ಕೂಡಾ ತನ್ನ ಜನಪ್ರಿಯ ಅರ್ಬನ್ ಕ್ರೂಸರ್ ಹೈರೈಡರ್ ಕಾರಿನಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿದೆ.

3 / 7
ಹೊಸ ಸಿಎನ್ ಜಿ ಮಾದರಿಯು ಎಸ್ ಮತ್ತು ಜಿ ವೆರಿಯೆಂಟ್ ಹೊಂದಿದ್ದು, ರೂ. 13.23 ಲಕ್ಷ ಆರಂಭಿಕ ಎಕ್ಸ್ ಶೋರೂಂ ದರ ಪಡೆದುಕೊಂಡಿದೆ. ಇದರಲ್ಲಿ ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಜಿ ವೆರಿಯೆಂಟ್ ರೂ. 15.29 ಲಕ್ಷ ಬೆಲೆ ಹೊಂದಿದೆ. ಇದರೊಂದಿಗೆ ಹೊಸ ಸಿಎನ್ ಜಿ ಆವೃತ್ತಿಯು ಸಾಮಾನ್ಯ ಮಾದರಿಗಿಂತ ರೂ. 38 ಸಾವಿರದಿಂದ ರೂ. 45 ಸಾವಿರದಷ್ಟು ದುಬಾರಿಯಾಗಿರಲಿದೆ.

4 / 7
ಹೊಸ ಹೈರೈಡರ್ ಮಾದರಿಯು ಪೆಟ್ರೋಲ್ ಮಾದರಿಯ ಜೊತೆಗೆ ಸಿಎನ್ ಜಿ ಕಿಟ್ ಹೊಂದಿದ್ದು, ಭರ್ಜರಿ ಮೈಲೇಜ್ ನೀಡಲಿದೆ. ಪ್ರತಿ ಕೆಜಿ ಸಿಎನ್ ಜಿ ಗೆ ಹೊಸ ಕಾರು ಮಾದರಿಯು ಗರಿಷ್ಠ 26.6 ಕಿ.ಮೀ ಮೈಲೇಜ್ ನೀಡಲಿದ್ದು, ಇದರಲ್ಲಿ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

5 / 7
ಇದು ಎಸ್ ಯುವಿ ವಿಭಾಗದಲ್ಲಿಯೇ ಅತ್ಯುತ್ತಮ ಇಂಧನ ದಕ್ಷತೆಯ ಮಾದರಿಯಾಗಿದ್ದು, ಇದರೊಂದಿಗೆ ಹೊಸ ಕಾರು ಸಾಮಾನ್ಯ ಮಾದರಿಯಲ್ಲಿರುವಂತೆಯೇ ಹಲವಾರು ವೈಶಿಷ್ಟ್ಯತೆಗಳನ್ನ ಹೊಂದಿದೆ.

6 / 7
2023ರ ಏಪ್ರಿಲ್ 1ರಿಂದ ರಿಯಲ್ ಡ್ರೈವಿಂಗ್ ಎಮಿಷನ್ ಜಾರಿಯಾಗುತ್ತಿರುವ ಪರಿಣಾಮ ಕಾರು ಉತ್ಪಾದನಾ ಕಂಪನಿಗಳು ಪರಿಸರ ಸ್ನೇಹಿ ಕಾರು ಮಾದರಿಗಳತ್ತ ಮುಖ ಮಾಡುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ಕಾರಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿಯಾಗಿರುವ ಸಿಎನ್ ಜಿ ಕಾರುಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ.

7 / 7
ಜೊತೆಗೆ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಸಿಎನ್ ಜಿ ಮಾದರಿಗಳು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಇವು ಡೀಸೆಲ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿವೆ. ಹೀಗಾಗಿ ಶೀಘ್ರದಲ್ಲಿಯೇ ಮತ್ತಷ್ಟು ಕಾರು ಉತ್ಪಾದನಾ ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರುಗಳಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡುವ ಯೋಜನೆಯಲ್ಲಿವೆ.