ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿದಿನಯೊಂದು ದಿನವನ್ನು ಒಂದೊಂದು ಗ್ರಹಕ್ಕೆ ಹೋಲಿಸಲಾಗುತ್ತದೆ. ಆದ್ದರಿಂದ ನೀವು ಧರಿಸುವ ಬಟ್ಟೆಯೂ ಕೂಡ ಗ್ರಹ ಗತಿಗೆ ಅನುಗುಣವಾಗಿರಬೇಕು ಎಂದು ಹೇಳಲಾಗುತ್ತದೆ.
ಭಾನುವಾರ: ಹಿಂದೂ ಪುರಾಣಗಳ ಪ್ರಕಾರ ಭಾನುವಾರ ಸೂರ್ಯ ದೇವರ ದಿನ. ಸೂರ್ಯ ದೇವರಿಗೆ ಕೆಂಪು ಬಣ್ಣ ತುಂಬಾ ಇಷ್ಟ. ಆದ್ದರಿಂದ, ಭಾನುವಾರದಂದು, ಕೆಂಪು ಬಣ್ಣವನ್ನು ಧರಿಸಲು ಮರೆಯಬೇಡಿ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಸಲಹೆ ನೀಡುತ್ತಾರೆ.
ಸೋಮವಾರ: ಈ ದಿನ ಬಿಳಿ ಬಟ್ಟೆಯನ್ನು ಧರಿಸಬೇಕು ಎಂದು ಸಲಹೆ ನೀಡುತ್ತಾರೆ. ಗ್ರಹಗತಿಗಳ ಪ್ರಕಾರ ಸೋಮವಾರ ಚಂದ್ರಗ್ರಹವು ಆಡಳಿತಗಾರನಾಗಿರುವುದರಿಂದ ಚಂದ್ರನನ್ನು ತೃಪ್ತಿಪಡಿಸಲು ಸೋಮವಾರದಂದು ಒತ್ತಡ ಮತ್ತು ಚಟುವಟಿಕೆಯ ಮಟ್ಟವನ್ನು ಕಡಿಮೆ ಮಾಡಲು ವಾರದ ಮೊದಲ ದಿನ ಬಿಳಿ ಬಟ್ಟೆ ಧರಿಸಬೇಕು ಜ್ಯೋತಿಷ್ಯ ಶಾಸ್ತ್ರಜ್ಞರು ಸಲಹೆ ನೀಡುತ್ತಾರೆ.
ಮಂಗಳವಾರ: ಮಂಗಳವಾರ ಕೆಂಪು ಅಥವಾ ಕೇಸರಿ ಬಣ್ಣದ ಬಟ್ಟೆಯನ್ನು ಧರಿಸಿ. ಈ ದಿನ ಉರಿಯುತ್ತಿರುವ ಮಂಗಳ ಗ್ರಹವು ಉತ್ಸಾಹ ಮತ್ತು ಶಕ್ತಿಯನ್ನು ನೀಡುತ್ತದೆ ಎಂಬುದು ನಂಬಿಕೆ. ಜೊತೆಗೆ ಪ್ರಯಾಣ , ವಿವಾಹಗಳು, ಗರ್ಭಧಾರಣೆ ಅಥವಾ ಶುಭ ಕಾರ್ಯಗಳು ಮಂಗಳವಾ ನಡೆಯಬಾರದು ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಸಲಹೆ ನೀಡುತ್ತಾರೆ.
ಬುಧವಾರ: ಬುಧವಾರ ಬುಧನು ಆಡಳಿತಗಾರನಾಗಿರುವುದರಿಂದ ಹಸಿರು ಬಟ್ಟೆಯನ್ನು ಧರಿಸಿ. ಜೊತೆಗೆ ಪಚ್ಚೆ ಕಲ್ಲಿನ ಆಭರಣ ಧರಿಸಬಹುದಾಗಿದೆ. ನೀವು ಹಸಿರು ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ದಿನಪೂರ್ತಿ ಶುಭ ಫಲವನ್ನು ಕಾಣಬಹುದು ಹೇಳುತ್ತಾರೆ.
ಗುರುವಾರ: ಗುರುವಾರದಂದು ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಮತ್ತು ಮನೆಯಿಂದ ಹೊರಗೆ ಹೋಗುವ ಮುನ್ನ ಅರಶಿನ ಅಥವಾ ಶ್ರೀಗಂಧದ ತಿಲಕವನ್ನು ಹಚ್ಚಿ. ಇದು ನಿಮಗೆ ದಿನ ಪೂರ್ತಿ ಶುಭ ಫಲವನ್ನು ನೀಡುತ್ತದೆ ಎಂಬುದು ನಂಬಿಕೆ.
ಶುಕ್ರವಾರ: ಆದಿ ಮಹಾಶಕ್ತಿ ದುರ್ಗಾದೇವಿಯ ನೆಚ್ಚಿನ ದಿನ ಶುಕ್ರವಾರ. ಈ ದಿನ ನೀಲಿ ಅಥವಾ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿದರೆ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ. ದಿನ ಪೂರ್ತಿ ಶುಭ ಫಲ ನೀಡುತ್ತದೆ ಎಂಬುದು ನಂಬಿಕೆ.
ಶನಿವಾರ: ಶನಿವಾರ ವಾರದ ಕೊನೆಯ ದಿನ. ವಾರದ ಶನಿಯ ನೆಚ್ಚಿನ ದಿನ. ತಜ್ಞರ ಪ್ರಕಾರ ಈ ದಿನ ಕಪ್ಪು, ಬೂದು, ನೇರಳೆ ಬಣ್ಣದ ಉಡುಪುಗಳನ್ನು ಧರಿಸಿ ಎಂದು ಸಲಹೆ ನೀಡುತ್ತಾರೆ.
Published On - 6:53 pm, Tue, 31 January 23