ಫೆಬ್ರವರಿ 1ರಿಂದ ಕೆಲವು ನಿಯಮಗಳು ಬದಲಾಗಲಿದ್ದು (New Rules), ನೇರವಾಗಿ ಜನಸಾಮಾನ್ಯರ ಮೇಲೆ ಪ್ರಭಾವ ಬೀರಲಿದೆ. ಕೇಂದ್ರ ಬಜೆಟ್ (Budget 2023) ಮಂಡನೆಯೂ ಆಗಲಿದ್ದು ಜನಸಾಮಾನ್ಯರು ಹಲವಾರು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಬ್ಯಾಂಕಿಂಗ್ ಮತ್ತು ಇತರ ಬದಲಾಗಲಿರುವ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.
Jan 31, 2023 | 5:23 PM
ಫೆಬ್ರವರಿ 1ರಿಂದ ಕೆಲವು ನಿಯಮಗಳು ಬದಲಾಗಲಿದ್ದು, ನೇರವಾಗಿ ಜನಸಾಮಾನ್ಯರ ಮೇಲೆ ಪ್ರಭಾವ ಬೀರಲಿದೆ. ಬದಲಾಗಲಿರುವ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.
1 / 7
ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದನ್ನು ಮಾತ್ರ ತಪ್ಪಿಸಬೇಡಿ. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಸಾಲ ಪಡೆಯುವ ಅರ್ಹತೆ ಮೇಲೆ ನಕಾರಾತ್ಮಕ ಪರಿಣಾಮವಾಗಲಿದೆ. ಅವಧಿ ಮುಗಿದ ಬಳಿಕ ಬಿಲ್ ಪಾವತಿಸುವುದಕ್ಕೆ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ. ಹೆಚ್ಚು ಬಡ್ಡಿ ಪಾವತಿಸಿಯೂ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಕ್ಕಿಂತ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸುವುದು ಒಳ್ಳೆಯದು. ಆದರೆ ಇದಕ್ಕೂ ಬ್ಯಾಂಕ್ಗಳು ಹೆಚ್ಚಿನ ಬಡ್ಡಿ ವಿಧಿಸುತ್ತವೆ ಎಂಬುದು ತಿಳಿದಿರಲಿ.
2 / 7
ಎಲ್ಪಿಜಿ ಸಿಲಿಂಡರ್ ದರವನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸಲಾಗುತ್ತದೆ. ಹೀಗಾಗಿ ಫೆಬ್ರವರಿ 1ರಂದು ಎಲ್ಪಿಜಿ ಸಿಲಿಂಡರ್ ದರ ಹೆಚ್ಚು ಅಥವಾ ಕಡಿಮೆ ಆಗುವ ಸಾಧ್ಯತೆ ಇದೆ. ಬದಲಾಗದೆಯೂ ಇರಬಹುದು.
3 / 7
ದೇಶದ ಅತಿದೊಡ್ಡ ಆಟೊಮೊಬೈಲ್ ತಯಾರಿಕಾ ಕಂಪನಿ ಟಾಟಾ ಮೋಟರ್ಸ್ ಪ್ರಯಾಣಿಕರ ವಾಹನಗಳ ಬೆಲೆ ಹೆಚ್ಚಳ ಮಾಡಿದೆ. ವಿವಿಧ ಮಾದರಿಯ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವಾಹನಗಳ ದರವನ್ನು ಶೇ 1.2ರಷ್ಟು ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ಫೆಬ್ರವರಿ 1ರಿಂದ ಅಸ್ತಿತ್ವಕ್ಕೆ ಬರಲಿದೆ.
4 / 7
ಕೇಂದ್ರ ಸರ್ಕಾರದ ಹೊಸ ಪ್ಯಾಕೇಜಿಂಗ್ ನಿಯಮಗಳು ಫೆಬ್ರವರಿ 1ರಿಂದ ಅಸ್ತಿತ್ವಕ್ಕೆ ಬರಲಿವೆ. ಹೊಸ ನಿಯಮದ ಅನ್ವಯ ಆಹಾರ ವಸ್ತುಗಳ ಪ್ಯಾಕೆಟ್ಗಳ ಮೇಲೆ ಅವುಗಳ ಮಾಹಿತಿಯುಳ್ಳ ಲೇಬಲ್ ಅಂಟಿಸುವುದು ಕಡ್ಡಾಯವಾಗಿದೆ.
5 / 7
Union Budget 2023 Live Stream details when and where to watch Nirmala Sitharaman Budget Speech Live in Kannada
6 / 7
ಹೊಸ ಗುಜರಿ ನೀತಿಯಡಿಯಲ್ಲಿ 15 ವರ್ಷ ಮೇಲ್ಪಟ್ಟ ಪೆಟ್ರೋಲ್ ಎಂಜಿನ್ ವಾಹನಗಳನ್ನು ಮತ್ತು 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಗಳ ಸಂಚಾರವನ್ನು ಗ್ರೇಟರ್ ನೋಯ್ಡಾದಲ್ಲಿ ಫೆಬ್ರವರಿ 1ರಿಂದ ನಿಷೇಧಿಸಲಾಗಿದೆ. ಇಂಥ ವಾಹನಗಳ ಸಂಚಾರ ಕಂಡುಬಂದಲ್ಲಿ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಸಂಚಾರ ಇಲಾಖೆ ತಿಳಿಸಿದೆ.